Site icon Vistara News

ಬಾಡಿ ಬಿಲ್ಡಿಂಗ್‌ಗಾಗಿ 39 ನಾಣ್ಯ, 37 ಮ್ಯಾಗ್ನೆಟ್‌ ನುಂಗಿದ ವ್ಯಕ್ತಿ; ಮುಂದೇನಾಯ್ತು?

Coins

Zinc Helps In Body-Building: Delhi Man Swallows 39 Coins, 37 Magnets

ನವದೆಹಲಿ: ಪ್ರತಿಯೊಬ್ಬರೂ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು, ಬಾಡಿ ಬಿಲ್ಡ್‌ ಮಾಡಿದರೆ ಇನ್ನೂ ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಆದರೆ, ಆರೋಗ್ಯ, ಫಿಟ್‌ನೆಸ್‌, ಬಾಡಿ ಬಿಲ್ಡಿಂಗ್‌ (Body Building) ಬಗ್ಗೆ ಅತಿಯಾದ ಕಾಳಜಿ, ಬೇರೆಯವರು ಹೇಳಿದ್ದನ್ನೆಲ್ಲ ಕೇಳುವ, ಬಾಡಿ ಬಿಲ್ಡ್‌ ಮಾಡಲು ಏನು ಬೇಕಾದರೂ ಮಾಡುವ ಮನಸ್ಥಿತಿ ಹೊಂದಿವರೂ ಇದ್ದಾರೆ. ಇದರಿಂದಾಗಿ ಅವರು ತೊಂದರೆಯನ್ನೂ ಅನುಭವಿಸುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯಲ್ಲಿ (Delhi) ವ್ಯಕ್ತಿಯೊಬ್ಬ ಬಾಡಿ ಬಿಲ್ಡಿಂಗ್‌ಗಾಗಿ 39 ನಾಣ್ಯಗಳು ಹಾಗೂ 37 ಆಯಸ್ಕಾಂತಗಳನ್ನು (Magnet) ನುಂಗಿದ್ದಾನೆ.

ಹೌದು, ದೇಹದ ಒಳಗೆ ಜಿಂಕ್‌ (Zinc- ಸತು) ಸೇರಿದರೆ ಒಳ್ಳೆಯ ಬಾಡಿ ಬಿಲ್ಡ್‌ ಮಾಡಬಹುದು ಎಂದು ನಂಬಿದ ವ್ಯಕ್ತಿಯು ನಾಣ್ಯ ಹಾಗೂ ಆಯಸ್ಕಾಂತದ ತುಂಡುಗಳನ್ನು ನುಂಗಿದ್ದಾನೆ. ಅದೃಷ್ಟವಶಾತ್‌, ದೆಹಲಿಯ ಸರ್‌ ಗಂಗಾರಾಮ್‌ ಆಸ್ಪತ್ರೆಯ ವೈದ್ಯರು ವ್ಯಕ್ತಿಯ ಹೊಟ್ಟೆಯಿಂದ 39 ನಾಣ್ಯಗಳು ಹಾಗೂ 37 ಮ್ಯಾಗ್ನೆಟ್‌ಗಳನ್ನು ಹೊರತೆಗೆದಿದ್ದಾರೆ. ಶಸ್ತ್ರಚಿಕಿತ್ಸೆಯ ಮೂಲಕ ನಾಣ್ಯಗಳು ಹಾಗೂ ಆಯಸ್ಕಾಂತಗಳನ್ನು ಹೊರತೆಗೆಯಲಾಗಿದ್ದು, ವ್ಯಕ್ತಿಯು ಸುರಕ್ಷಿತವಾಗಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಎಕ್ಸ್‌ರೇ ನೋಡಿ ದಂಗಾದ ವೈದ್ಯರು

ಬಾಡಿ ಬಿಲ್ಡ್‌ ಮಾಡಬೇಕು, ಸಿಕ್ಸ್‌ ಪ್ಯಾಕ್‌ ತೋರಿಸಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಬೇಕು ಎಂಬುದು ವ್ಯಕ್ತಿಯ ಉದ್ದೇಶವಾಗಿತ್ತು. ಮನೋ ವೈದ್ಯಕೀಯ ಕಾಯಿಲೆಯಿಂದ ಬಳಲತ್ತಿದ್ದ ವ್ಯಕ್ತಿಯು, ಸತು ದೇಹ ಪ್ರವೇಶಿಸಿದರೆ ಒಳ್ಳೆಯ ಬಾಡಿ ಬಿಲ್ಡ್‌ ಮಾಡಬಹುದು ಎಂದು ನಂಬಿದ್ದ. ಇದೇ ಕಾರಣಕ್ಕಾಗಿ ಆತ ನಾಣ್ಯಗಳು ಹಾಗೂ ಮ್ಯಾಗ್ನೆಟ್‌ಗಳನ್ನು ನುಂಗುವ ಅಭ್ಯಾಸ ಮಾಡಿಕೊಂಡಿದ್ದ. ಆದರೆ, ಕಳೆದ 20 ದಿನಗಳಿಂದ ವ್ಯಕ್ತಿಯು ಅಸಹನೀಯವಾದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ.

ಇದನ್ನೂ ಓದಿ: Viral Video: ವಾಕಿಂಗ್‌ ಮಾಡುತ್ತ ಬರೋಬ್ಬರಿ 2 ಟ್ರಕ್‌ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹ; ಅಧಿಕಾರಿಯ ವಿಡಿಯೊ ವೈರಲ್‌

ಈತನ ನೋವು ತಾಳದೆ ಕುಟುಂಬಸ್ಥರು ಆತನನ್ನು ಸರ್‌ ಗಂಗಾರಾಮ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈತನಿಗೆ ನಾಣ್ಯಗಳು ಹಾಗೂ ಆಯಸ್ಕಾಂತದ ತುಂಡುಗಳನ್ನು ನುಂಗುವ ಹವ್ಯಾಸವಿದೆ ಎಂಬುದಾಗಿ ವೈದ್ಯರಿಗೆ ಕುಟುಂಬಸ್ಥರು ತಿಳಿಸಿದ್ದಾರೆ. ಆಗ ವೈದ್ಯರು ಎಕ್ಸ್‌ರೇ ತೆಗೆದು ನೋಡಿದಾಗ ದಂಗಾಗಿದ್ದಾರೆ. ಈತನ ಹೊಟ್ಟೆಯಲ್ಲಿ ನಾಣ್ಯಗಳು ಹಾಗೂ ಮ್ಯಾಗ್ನೆಟ್‌ಗಳ ರಾಶಿಯೇ ಇರುವುದನ್ನು ಕಂಡು ಗಾಬರಿಗೊಂಡಿದ್ದಾರೆ. ಇದಾದ ಬಳಿಕ ವೈದ್ಯರ ತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಕೈಗೊಳ್ಳುವ ಮೂಲಕ ನಾಣ್ಯಗಳು ಹಾಗೂ ಆಯಸ್ಕಾಂತಗಳನ್ನು ಹೊರತೆಗೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version