Site icon Vistara News

Zomato: ಜೊಮ್ಯಾಟೊ ಹೊಸ ತಂತ್ರಜ್ಞಾನ; ಮನೆ ಹೊರಗೆ ಕಾಲಿಡುವ ಮುನ್ನ ಇದನ್ನು ನೋಡಲೇಬೇಕು!

Zomato

Zomato launches India's first crowd-supported weather infrastructure

ನವದೆಹಲಿ: ಆನ್‌ಲೈನ್‌ ಮೂಲಕ ಆಹಾರ ಪೂರೈಕೆ ಮಾಡುವಲ್ಲಿ ದೇಶಾದ್ಯಂತ ಖ್ಯಾತಿಯಾಗಿರುವ ಜೊಮ್ಯಾಟೊ ಕಂಪನಿ ಈಗ ಹೊಸ ಸಾಹಸಕ್ಕೆ ಮುಂದಾಗಿದೆ. ಹೌದು, ಹವಾಮಾನದ ಕುರಿತು ನಿಖರ ಮಾಹಿತಿ ನೀಡುವ, ದೇಶದ ಮೊದಲ ಕ್ರೌಡ್‌-ಸಪೋರ್ಟೆಡ್‌ ವೆದರ್‌ ಇನ್‌ಫ್ರಾಸ್ಟ್ರಕ್ಚರ್‌ಗೆ (First Crowd-Supported Weather Infrastructure) ಜೊಮ್ಯಾಟೊ (Zomato) ಸಿಇಒ ದೀಪಿಂದರ್‌ ಗೋಯಲ್‌ (Deepinder Goyal) ಚಾಲನೆ ನೀಡಿದ್ದಾರೆ. ಇದರಿಂದ ದೇಶದ ಪ್ರಮುಖ ನಗರಗಳ ಹವಾಮಾನವನ್ನು ಪರಿಶೀಲನೆ ಮಾಡಬಹುದಾಗಿದೆ.

ವೆದರ್‌ಯುನಿಯನ್.ಕಾಮ್‌ (ಇಲ್ಲಿ ಕ್ಲಿಕ್‌ ಮಾಡಿ-Weatherunion.com) ಎಂಬ ವೆಬ್‌ಸೈಟ್‌ಗೆ ದೀಪಿಂದರ್‌ ಗೋಯಲ್‌ ಬುಧವಾರ (ಮೇ 8) ಚಾಲನೆ ನೀಡಿದ್ದಾರೆ. ದೇಶಾದ್ಯಂತ 650 ಹವಾಮಾನ ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿದ್ದು, ಇದು ದೇಶದಲ್ಲಿಯೇ ಹವಾಮಾನ ಕುರಿತು ಮಾಹಿತಿ ಒದಗಿಸುವ ಮೊದಲ ಖಾಸಗಿ ಮೂಲ ಸೌಕರ್ಯ ಎಂದು ಹೇಳಲಾಗುತ್ತಿದೆ. ಇದು ಸಾಮಾನ್ಯ ಜನರ ಜತೆಗೆ ಉದ್ಯಮಿಗಳಿಗೆ, ಸ್ಟಾರ್ಟ್‌ಅಪ್‌ಗಳಿಗೆ ಭಾರಿ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.

45 ನಗರಗಳಲ್ಲಿ ಈಗ ಲಭ್ಯ

“ಜೊಮ್ಯಾಟೊ ಚಾಲನೆ ನೀಡಿರುವ ವೆದರ್‌ ವೆಬ್‌ಸೈಟ್‌ ಈಗ ಬೆಂಗಳೂರು ಸೇರಿ ದೇಶದ ಪ್ರಮುಖ 45 ನಗರಗಳಲ್ಲಿ ಲಭ್ಯವಿದೆ. Weatherunion.comಗೆ ಭೇಟಿ ನೀಡುವ ಮೂಲಕ ತಾಪಮಾನ, ಮಳೆ ಪ್ರಮಾಣ, ಸೆಕೆ, ಗಾಳಿಯ ವೇಗ, ಮಳೆ ಮುನ್ಸೂಚನೆ ಸೇರಿ ಹವಾಮಾನಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಒದಗಿಸಲಿದೆ. ಸದ್ಯ, 45 ನಗರಗಳಲ್ಲಿ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ವಿಸ್ತರಣೆ ಮಾಡುವ ಯೋಜನೆ ಇದೆ” ಎಂದು ಜೊಮ್ಯಾಟೊ ಸಂಸ್ಥಾಪಕರೂ ಆದ ದೀಪಿಂದರ್‌ ಗೋಯಲ್‌ ಮಾಹಿತಿ ನೀಡಿದ್ದಾರೆ.

ಎಲ್ಲರಿಗೂ ಫ್ರೀ ಫ್ರೀ

ಜೊಮ್ಯಾಟೊದ ಹೊಸ ವೆಬ್‌ಸೈಟ್‌ ಎಲ್ಲರಿಗೂ ಉಚಿತವಾಗಿ ಲಭ್ಯವಿದೆ. ಜೊಮ್ಯಾಟೊ ಫುಡ್‌ ಡೆಲಿವರಿ ಅಗ್ರಿಗೇಟರ್‌ ಆಗಿದ್ದು, ಇಂತಹ ಅಗ್ರಿಗೇಟರ್‌ಗಳು ದೇಶಾದ್ಯಂತ ಜೊಮ್ಯಾಟೊದ ವೆಬ್‌ಸೈಟ್‌ ಮೂಲಕ ಹವಾಮಾನದ ಕುರಿತ ಮಾಹಿತಿಯನ್ನು ಅರಿತುಕೊಂಡು, ತಮ್ಮ ವ್ಯಾಪಾರ, ಡೆಲಿವರಿ ಮುಂದುವರಿಸಲು ಭಾರಿ ಅನುಕೂಲವಾಗಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಹವಾಮಾನ ಕುರಿತು ಮಾಹಿತಿ ಒದಗಿಸುವ ಅಪ್ಲಿಕೇಶನ್‌ಗಳು, ವೆಬ್‌ಸೈಟ್‌ಗಳು ಇದ್ದರೂ, ವಿಭಿನ್ನವಾದ ಹಾಗೂ ವೇಗವಾದ ಮಾಹಿತಿ ನೀಡಲು ಜೊಮ್ಯಾಟೊ ವೆಬ್‌ಸೈಟ್‌ ಅಭಿವೃದ್ಧಿಪಡಿಸಿದೆ ಎನ್ನಲಾಗಿದೆ. ಒಂದು ನಿಮಿಷಕ್ಕೊಮ್ಮೆ ಹವಾಮಾನದ ಕುರಿತು ಮಾಹಿತಿ ಒದಗಿಸುವ ಸೌಲಭ್ಯವಿದ್ದು, ವೆದರ್‌ ಸ್ಟೇಷನ್‌ಗಳ ಸಂಖ್ಯೆಯನ್ನೂ ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಿದೆ.

ಇದನ್ನೂ ಓದಿ: Zomato Pure Veg: ʼಜೊಮ್ಯಾಟೋ ಪ್ಯೂರ್‌ ವೆಜ್‌ʼ ಡೆಲಿವರಿಗೆ ಅಪಹಾಸ್ಯ? ʼಜಾಹೀರಾತು ಮಾಲೀಕ ನಾನಲ್ಲʼ ಎಂದ ಸ್ವಿಗ್ಗಿ!

Exit mobile version