Site icon Vistara News

Zomato App: ಜೊಮ್ಯಾಟೊ ಏಕೆ 2 ರೂ. ಶುಲ್ಕ ವಿಧಿಸುತ್ತಿದೆ? ಇಲ್ಲಿದೆ ಕಾರಣ

zomato

ನವದೆಹಲಿ: ಫುಡ್ ಡೆಲಿವರಿ ಆ್ಯಪ್ ಜೊಮ್ಯಾಟೊ (Zomato App) ಆಯ್ದ ಮಾರುಕಟ್ಟೆಗಳಲ್ಲಿ ನಿರ್ದಿಷ್ಟ ಆರ್ಡರ್‌ಗಳ ಮೇಲೆ 2 ರೂ. ಪ್ಲಾಟ್‌ಫಾರ್ಮ್ ಶುಲ್ಕವನ್ನು (Platform Fee) ಪರಿಚಯಿಸಿದೆ. ಯಾವುದೇ ಮೌಲ್ಯವನ್ನು ಲೆಕ್ಕಿಸದೆ ನಾಮಮಾತ್ರ ಶುಲ್ಕವನ್ನು ವಿಧಿಸಲಾಗುತ್ತದೆ ಮತ್ತು ಇದು ಜೊಮ್ಯಾಟೊ ಗೋಲ್ಡ್ ಸೇವೆಗೆ (Zomato Gold) ಪಡೆದುಕೊಂಡಿರುವ ಬಳಕೆದಾರರಿಗೂ ಅನ್ವಯಿಸುತ್ತದೆ. ಯಾವ ನಿರ್ದಿಷ್ಟ ಮಾರುಕಟ್ಟೆಗಳಲ್ಲಿ ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಸುಸ್ಥಿರ ಬೆಳವಣಿಗೆ, ಆದಾಯ ಗಳಿಕೆ ಮತ್ತು ಲಾಭದ ಹೊಸ ಮಾರ್ಗಗಳನ್ನು ತೆರೆದುಕೊಳ್ಳಲು ಈ ಹೊಸ ಪ್ರಯತ್ನವನ್ನು ಮಾಡುತ್ತಿದೆ.

ಆಹಾರ-ತಂತ್ರಜ್ಞಾನದ ದೈತ್ಯ ತನ್ನ ಮೊದಲ ತ್ರೈಮಾಸಿಕ ಲಾಭವನ್ನು ಏಪ್ರಿಲ್-ಜೂನ್‌ನಿಂದ 2 ರೂ. ಕೋಟಿಗಳಷ್ಟು ಎಂದು ತಿಳಿಸಿದ ಬೆನ್ನಲ್ಲೇ ಈ ಶುಲ್ಕವನ್ನು ವಿಧಿಸಿದೆ. ಚಾರ್ಜ್ ಅನ್ನು ಪ್ರದರ್ಶಿಸುವ ಪಾಪ್-ಅಪ್ ಸಂದೇಶದಲ್ಲಿ, ಇದು ‘ಬಿಲ್‌ಗಳನ್ನು ಪಾವತಿಸಲು ಮತ್ತು ಜೊಮ್ಯಾಟೊ ಚಾಲನೆಯಲ್ಲಿರಲು ಸಹಾಯ ಮಾಡುತ್ತದೆ’ ಎಂದು ಆ್ಯಪ್ ಹೈಲೈಟ್ ಮಾಡಿದೆ. ಮಾಡಿದೆ.

ಅದೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು 64% ರಷ್ಟು ಏರಿಕೆಯಾಗಿ ₹2,597 ಕೋಟಿಗಳಿಗೆ ತಲುಪಿದೆ. ಇದು ಒಂದು ವರ್ಷದ ಹಿಂದೆ ದಾಖಲಾದ 186 ಕೋಟಿ ರೂ. ನಷ್ಟಕ್ಕೆ ಹೋಲಿಸಿದರೆ ಗಮನಾರ್ಹ ಪ್ರಗತಿಯಾಗಿದೆ. ಆಹಾರ ವಿತರಣಾ ಉದ್ಯಮವು ಇತ್ತೀಚಿನ ತಿಂಗಳುಗಳಲ್ಲಿ ಸುಧಾರಿಸಿಕೊಂಡಿದೆ. ಪರಿಣಾಮ ಜೊಮ್ಯಾಟೊ ಕೂಡ ಬೆಳವಣಿಗೆ ಸಾಧಿಸಿದೆ. 2023ರ ಜೂನ್ ಹೊತ್ತಿಗೆ ಈ ಆ್ಯಪ್ ಸುಮಾರು 17.5 ಮಿಲಿಯನ್ ಮಾಸಿಕ ವಹಿವಾಟು ಗ್ರಾಹಕರನ್ನು ಹೊಂದಿದೆ.

ಈ ಸುದ್ದಿಯನ್ನೂ ಓದಿ: Zomato Rest Point: ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಮೊದಲ ರೆಸ್ಟ್‌ ಪಾಯಿಂಟ್‌ ಸ್ಥಾಪಿಸಿದ ಜೊಮ್ಯಾಟೊ, ಏನಿದರ ವಿಶೇಷ?

ಕಂಪನಿಯ ತ್ವರಿತ-ವಾಣಿಜ್ಯ ವೇದಿಕೆಯಾಗಿರುವ ಬ್ಲಿಂಕ್‌ಇಟ್‌‌ಗೆ ಇನ್ನೂ ಹೆಚ್ಚುವರಿ ಶುಲ್ಕವನ್ನು ಪರಿಚಯಿಸಿಲ್ಲ. ಕೆಲವು ವರದಿಗಳ ಪ್ರಕಾರ, ಪ್ರಯೋಗವು ಪ್ರಸ್ತುತ ಅದರ ಪ್ರಾಯೋಗಿಕ ಹಂತದಲ್ಲಿದ್ದು, ದೀರ್ಘಾವಧಿಯ ಅನುಷ್ಠಾನವು ಫಲಿತಾಂಶವನ್ನು ಅವಲಂಬಿಸಿರುತ್ತದೆ ಎಂದು ಆ್ಯಪ್ ಹೇಳಿದೆ.

ಜೊಮ್ಯಾಟೊ ಕಳುಹಿಸಿದ ಗಿಫ್ಟ್‌ನ್ನೇ ಬಟ್ಟೆ ಮಾಡಿಕೊಂಡ ಉರ್ಫಿ

ಫ್ಯಾಷನ್‌ ಐಕಾನ್‌ ಎಂತಲೇ ಕರೆಯಲ್ಪಡುವ ಉರ್ಫಿ ಜಾವೇದ್‌ (Urfi Javed) ಮಾರ್ಕೆಟಿಂಗ್ ಸ್ಟಂಟ್‌ ಮಾಡುವುದರಲ್ಲಿ ಎತ್ತಿದ ಕೈ. ಇತ್ತೀಚೆಗಷ್ಟೇ ಊರ್ಫಿ ಜಾವೇದ್ ಮುಂಬೈನ ರೆಸ್ಟೋರೆಂಟ್​​ ಒಂದರಲ್ಲಿ ತನ್ನ ಬಟ್ಟೆಯಿಂದಾಗಿ ಪ್ರವೇಶ ನಿರಾಕರಿಸಿದೆ ಎಂದು ಆರೋಪಿಸಿ ಸೋಷಿಯಲ್​ ಮೀಡಿಯಾಗಳಲ್ಲಿ ಬರೆದು ಪೋಸ್ಟ್​​​​ ಹಂಚಿಕೊಂಡಿದ್ದರು. ಜತೆಗೆ ಈ ಪೋಸ್ಟ್​​​ನಲ್ಲಿ ಜೊಮ್ಯಾಟೊವನ್ನು ಕೂಡ ಟ್ಯಾಗ್​​ ಮಾಡಲಾಗಿತ್ತು. ನಟಿ ಊರ್ಫಿ ಪೋಸ್ಟ್​​​​ಗೆ ಜೊಮ್ಯಾಟೊ ಪ್ರತಿಕ್ರಿಯಿಸಿ ಕ್ಷಮೆ ಯಾಚಿಸಿದೆ. ಜತೆಗೆ ಗಿಫ್ಟ್ ಬಾಸ್ಕೆಟ್​ ಉಡುಗೊರೆಯಾಗಿ ನೀಡಿದೆ. ಇದೀಗ ಜೊಮ್ಯಾಟೊ ಕಳುಹಿಸಿದ ಗಿಫ್ಟ್‌ ಬಾಸ್ಕೆಟ್‌ವನ್ನು ಬಟ್ಟೆಯಾಗಿ ಉಪಯೋಗಿಸಿಕೊಂಡಿದ್ದಾರೆ.

ರೆಸ್ಟೋರೆಂಟ್‌ನಲ್ಲಿ ಪ್ರವೇಶ ನೀಡದೇ ಇದಿದ್ದಕ್ಕೆ ಉರ್ಫಿ ಹೇಳಿದ್ದೇನು?

ʻʻಇದು ನಿಜವಾಗಿಯೂ 21ನೇ ಶತಮಾನದ ಮುಂಬೈಯೇ?!! ರೆಸ್ಟೋರೆಂಟ್‌ನಲ್ಲಿ ನನಗೆ ಪ್ರವೇಶ ನೀಡಿಲ್ಲ. ನನ್ನ ಫ್ಯಾಷನ್ ಆಯ್ಕೆಗಳನ್ನು ನೀವು ಒಪ್ಪದಿದ್ದರೂ ಪರವಾಗಿಲ್ಲ. ಅದಕ್ಕಾಗಿ ನನ್ನನ್ನು ವಿಭಿನ್ನವಾಗಿ ಪರಿಗಣಿಸುವುದು ಅಲ್ಲ. ಕೆಲವು ಕುಂಟು ನೆಪಗಳನ್ನು ನೀಡಬೇಡಿʼʼ ಜೊಮ್ಯಾಟೊ ಟ್ಯಾಗ್‌ ಮಾಡಿ ಉರ್ಫಿ ಬರೆದಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version