Site icon Vistara News

ಅದ್ನಾನ್ ಸಮಿ @ 51

ಅದ್ನಾನ್ ಸಮಿ
1971ರ ಆ. 15ರಂದು ಲಂಡನ್‌ನಲ್ಲಿ ಜನಿಸಿದ ಅದ್ನಾನ್ ಸಮಿ ಪಾಕಿಸ್ತಾನ ಮೂಲದವರು. ಆದರೆ ಭಾರತದಲ್ಲಿ ಜನಪ್ರಿಯ ಗಾಯಕರು.
ಸಮಿಗೆ 2016ರ ಜನವರಿ 1ರಂದು ಭಾರತೀಯ ಪೌರತ್ವ ನೀಡಲಾಗಿದೆ.
ಇವರು ಗಾಯಕ ಮಾತ್ರವಲ್ಲ, ಸಂಗೀತ ಸಂಯೋಜಕರೂ ಹೌದು. ಪಿಯಾನೋ ವಾದನದಲ್ಲಿ ಇವರ ವೇಗ ಅಚ್ಚರಿದಾಯಕ.
ಹಿಂದಿ, ಕನ್ನಡ, ತೆಲುಗು ಮತ್ತು ತಮಿಳು ಸೇರಿದಂತೆ ನೂರಾರು ಚಿತ್ರಗೀತೆಗಳನ್ನು ಹಾಡಿದ್ದಾರೆ.
ಅದ್ನಾನ್ ಸಮಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ.
ಸರ್ಜಿಕಲ್‌ ಸ್ಟ್ರೈಕ್‌ ನಡೆದಾಗ ಭಾರತೀಯ ಸೇನೆ ಹಾಗೂ ಪ್ರಧಾನಿ ಕಾರ್ಯಾಲಯದ ನಡೆಗೆ ಅದ್ನಾನ್ ಪ್ರಶಂಸೆ ವ್ಯಕ್ತಪಡಿಸಿದ್ದರು.
ಕನ್ನಡದ ‘ಸೂಪರ್ ಸ್ಟಾರ್‌’ ಚಿತ್ರದ ‘ಬಿಟ್ಟಾಕು ಬಿಟ್ಟಾಕು’, “ಸೌಂದರ್ಯ” ಚಿತ್ರದ ‘ಸ್ನೇಹ ಪ್ರೀತಿ’, ‘ಧೀಮಾಕು’ ಚಿತ್ರದ ‘ಸೂರ್ಯಾನೇ’ ಹಾಡನ್ನು ಸಮಿ ಹಾಡಿದ್ದಾರೆ.

ಇದನ್ನೂ ಓದಿ| ಸುನಿಧಿ ಚೌಹಾಣ್‌ಗೆ ಜನುಮ ದಿನದ ಶುಭಾಶಯ

Exit mobile version