1959ರ ಆ. 29ರಂದು ಜನನ. ಇವರು ಖ್ಯಾತ ನಟ, ನಿರ್ಮಾಪಕ ಅಕ್ಕಿನೇನಿ ನಾಗೇಶ್ವರ ಅವರ ಮಗ.
ನಾಗಾರ್ಜುನ ‘ಸುಡಿಗುಂಡಾಲು’ ಮತ್ತು ‘ವೆಲುಗು ನೀಡಲು’ ಚಿತ್ರದಲ್ಲಿ ಬಾಲ ಕಲಾವಿದರಾಗಿ ನಟಿಸಿದ್ದರು. ಈ ಎರಡೂ ಚಿತ್ರಗಳಲ್ಲಿ ಅವರ ತಂದೆ ನಾಗೇಶ್ವರ ರಾವ್ ಪ್ರಮುಖ ಪಾತ್ರದಲ್ಲಿದ್ದಾರೆ.
1984ರಲ್ಲಿ ಲಕ್ಷ್ಮಿ ದಗ್ಗುಬಾಟಿಯನ್ನು ವಿವಾಹವಾಗಿದ್ದ ನಾಗಾರ್ಜುನ್ 1990ರಲ್ಲಿ ಅವರಿಂದ ವಿಚ್ಛೇದನ ಪಡೆದಿದ್ದಾರೆ.
1986ರ ‘ವಿಕ್ರಂ’ ಚಿತ್ರದ ಮೂಲಕ ತಮ್ಮ 27ನೇ ವಯಸ್ಸಿನಲ್ಲಿ ನಾಯಕನಾಗಿ ಬೆಳ್ಳಿ ತೆರೆಗೆ.
1990ರಲ್ಲಿ ರಾಮ್ ಗೋಪಾಲ್ ವರ್ಮ ನಿರ್ದೇಶನದ ಮೊದಲ ಚಿತ್ರ ‘ಶಿವ’ದ ಹೀರೊ ಆಗಿ ಇವರು ಫೇಮಸ್ ಆದರು.
ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ಎರಡು ವರ್ಷಗಳ ನಂತರ 1992ರಲ್ಲಿ ನಟಿ ಅಮಲಾ ಅವರನ್ನು ವಿವಾಹವಾದರು.
1996ರ ‘ನಿನ್ನೆ ಪೆಳ್ಳಾಡತಾ’ ತೆಲುಗು ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿ ದೊರೆತಿದೆ.
2022ರ Bigg Boss Non-Stop ತೆಲುಗು ಶೋದ ತೀರ್ಪುಗಾರರಾಗಿ ನಾಗಾರ್ಜುನ್ ಭಾಗವಹಿಸಿದ್ದಾರೆ.
ಸೆಪ್ಟೆಂಬರ್ 9ರಂದು ಬಿಡುಗಡೆಯಾಗಲಿರುವ ಬಾಲಿವುಡ್ ಚಿತ್ರ ‘ಬ್ರಹ್ಮಾಸ್ತ್ರ’ದಲ್ಲಿ ಅನೀಶ್ ಪಾತ್ರದಲ್ಲಿ ನಾಗಾರ್ಜುನ್ ಕಾಣಸಿಗಲಿದ್ದಾರೆ.
ಇದನ್ನೂ ಓದಿ| ಡಾಲಿ ಧನಂಜಯ್‌ಗೆ ಜನುಮ ದಿನದ ಶುಭಾಶಯ