ಅರ್ಜುನ್ ಸರ್ಜಾಗೆ ಜನುಮ ದಿನದ ಶುಭಾಶಯ Pragati Bhandari 2 ವರ್ಷಗಳು ago 1981ರಲ್ಲಿ ಬಾಲ ನಟರಾಗಿ ‘ಸಿಂಹದ ಮರಿ ಸೈನ್ಯ’ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ ಅರ್ಜುನ್ ಸರ್ಜಾ ಹುಟ್ಟಿದ್ದು ತುಮುಕೂರಿನ ಮಧುಗಿರಿಯಲ್ಲಿ. 1984ರ ‘ನಂದ್ರಿ’ ಎಂಬ ತಮಿಳು ಚಿತ್ರದಲ್ಲಿ ಮುರುಗನ್ ಪಾತ್ರದೊಂದಿಗೆ ಕಾಲಿವುಡ್‌ಗೆ ಪ್ರವೇಶ. 1988ರಲ್ಲಿ ನಟಿ ಆಶಾರಾಣಿ ಅವರನ್ನು ಅರ್ಜುನ್ ಸರ್ಜಾ ವಿವಾಹವಾದರು. ಇವರಿಗೆ ಐಶ್ವರ್ಯ, ಅಂಜನಾ ಎಂಬ ಇಬ್ಬರು ಹೆಣ್ಣು ಮಕ್ಕಳು. ಇವರು 1993ರಲ್ಲಿ Gentleman ಚಿತ್ರಕ್ಕಾಗಿ ಮತ್ತು 1999ರಲ್ಲಿ Mudhalvan ಚಿತ್ರಕ್ಕಾಗಿ ತಮಿಳುನಾಡು ರಾಜ್ಯ ಸರ್ಕಾರದ ಉತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಅರ್ಜುನ್ ಸರ್ಜಾ ತಮಿಳು, ಹಿಂದಿ, ತೆಲುಗು ಮತ್ತು ಕನ್ನಡ ಸೇರಿದಂತೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2012ರಲ್ಲಿ ‘ಪ್ರಸಾದ್’ ಚಿತ್ರಕ್ಕಾಗಿ ಮತ್ತು 2014ರಲ್ಲಿ ‘ಅಭಿಮನ್ಯು’ ಚಿತ್ರಕ್ಕಾಗಿ ಉತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. Medhavi, Virunnu, Theeyavar Kulaigal Nadunga ಇವರ ಮುಂಬರಲಿರುವ ಚಿತ್ರಗಳು. ಇದನ್ನೂ ಓದಿ| ಕಿಶೋರ್‌ಗೆ ಜನುಮ ದಿನದ ಶುಭಾಶಯ