Russia-Ukraine War : ಯುದ್ಧದ ಭೀಕರತೆ ಹೇಗಿರುತ್ತವೆ ಎಂಬುದಕ್ಕೆ ರಷ್ಯಾ- ಉಕ್ರೇನ್ ಕದನ ಈ ಚಿತ್ರಗಳೇ ಸಾಕ್ಷಿ
Sukhesha Padibagilu
ನವ ದೆಹಲಿ: ಉಕ್ರೇನ್ ಮೇಲೆ ರಷ್ಯಾದ ಮಿಲಿಟರಿ ದಾಳಿ ಆರಂಭಿಸಿ ಫೆಬ್ರವರಿ 22ಕ್ಕೆ ಒಂದು ವರ್ಷವಾಯಿತು. 365 ದಿನಗಳ ಕಾಲ ಉಕ್ರೇನ್ ದೇಶದ ನಾಗರಿಕರು ರಷ್ಯಾದ ಮಿಲಿಟರಿ ಪಡೆ ಮಾಡಿದ ನಾನಾ ರೀತಿಯ ದಾಳಿಗೆ ತಲ್ಲಣಗೊಂಡರು. ಜೀವ ಹಾನಿ, ಆಸ್ತಿ ನಷ್ಟ ಉಂಟಾಯಿತು. ಆದಾಗ್ಯೂ ಈ ಸಮರ ಕೊನೆಯಾಗಿಲ್ಲ. ನ್ಯಾಟೊ ಬೆಂಬಲದ ನಿರೀಕ್ಷೆಯಲ್ಲಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ರಷ್ಯಾಗೆ ಶರಣಾಗುತ್ತಿಲ್ಲ. ಉಕ್ರೇನ್ ದೇಶವನ್ನು ಹೇಗಾದರೂ ಮಾಡಿ ಬಗ್ಗು ಬಡಿಯುತ್ತೇವೆ ಎಂಬ ತೀರ್ಮಾನಕ್ಕೆ ಬಂದಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸತತವಾಗಿ ದಾಳಿ ಮಾಡುತ್ತಲೇ ಇದ್ದಾರೆ. ಈ ಎರಡೂ ದೇಶಗಳ ನಾಯಕರ ನಿರ್ಧಾರಕ್ಕೆ ಭೀಕರ ಕಾಳಗ ನಡೆಯುತ್ತಲೇ ಇದೆ. ಈ ಯುದ್ಧದ ಭೀಕರತೆಯ ಕೆಲವು ಚಿತ್ರಗಳು ಇಲ್ಲಿವೆ.