Site icon Vistara News

ತ್ರಿಭಾಷಾ ನಟಿ ಇಲಿಯಾನಾ ಡಿ ಕ್ರೂಜ್ @35

ಇಲಿಯಾನಾ ಡಿ ಕ್ರೂಜ್

ರೂಪದರ್ಶಿ ಮತ್ತು ನಟಿಯಾದ ಇಲಿಯಾನಾ 1987ರ ನವೆಂಬರ್‌ 1ರಂದು ಮುಂಬಯಿನಲ್ಲಿ ಜನಿಸಿದ್ದರು.

2006ರಲ್ಲಿ ಬಿಡುಗಡೆಯಾದ ತೆಲುಗು ‘ದೇವದಾಸು’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಈ ಚಲನಚಿತ್ರದಲ್ಲಿ ಭಾನು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

2006ರ ಕೇಡಿ (Kedi) ಚಲನಚಿತ್ರದೊಂದಿಗೆ ಕಾಲಿವುಡ್‌ ಪ್ರವೇಶಿಸಿದರು. ಈ ಚಲನಚಿತ್ರದಲ್ಲಿ ಆರತಿ ಪಾತ್ರದಲ್ಲಿ ನಟಿಸಿದ್ದರು.

2012ರ ಬರ್ಫಿ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದರು. ಈ ಚಿತ್ರಕ್ಕಾಗಿ ಫಿಲ್ಮ್‌ ಫೇರ್‌ ಅವಾರ್ಡ್ಸ್‌, ಜೀ ಸಿನಿ ಅವಾರ್ಡ್ಸ್‌, ಸ್ಟಾರ್ ಗಿಲ್ಡ್ ಅವಾರ್ಡ್ಸ್‌, ಟೈಮ್ಸ್‌ ಆಫ್‌ ಇಂಡಿಯಾ ಫಿಲ್ಮ್‌ ಅವಾರ್ಡ್ಸ್‌ನ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ ದೊರೆತಿದೆ.

ಪೆಹ್ಲಿ ದಫಾ ಮತ್ತು ಓಓ ಓಓ ಅವರ ಹಿಟ್‌ ಆಲ್ಬಂ ಸಾಂಗ್‌ಗಳಾಗಿದ್ದು Unfair & Lovely ಇವರ ಮುಂಬರುವ ಚಲನಚಿತ್ರಗಳಾಗಿವೆ.

ಇದನ್ನೂ ಓದಿ| ಜನುಮದಿನ ಸಂಭ್ರಮದಲ್ಲಿ ಶರ್ಮಿಳಾ ಮಾಂಡ್ರೆ

Exit mobile version