Site icon Vistara News

Wedding Fashion | ವಿಂಟರ್‌ ವೆಡ್ಡಿಂಗ್‌ ಸೀಸನ್‌ನಲ್ಲಿ ಟ್ರೆಂಡಿಯಾದ ಪುರುಷರ ಗ್ರ್ಯಾಂಡ್‌ ಡಿಸೈನರ್‌ವೇರ್ಸ್‌

Wedding Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ವಿಂಟರ್‌ ವೆಡ್ಡಿಂಗ್‌ ಸೀಸನ್‌ನಲ್ಲಿ ಗ್ರ್ಯಾಂಡ್‌ ರಾಯಲ್‌ ಇಮೇಜ್‌ ನೀಡುವ ಮೆನ್ಸ್‌ ಡಿಸೈನರ್‌ವೇರ್‌ಗಳು ಇದೀಗ ಟ್ರೆಂಡಿಯಾಗಿವೆ. ನೋಡಲು ಮದುಮಗನನ್ನು ರಾಜಕುಮಾರನಂತೆ ಬಿಂಬಿಸುವ ಡಿಸೈನರ್‌ವೇರ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ.

ರಾಜ್ವಾಡಿ ಜೋಧ್‌ಪುರಿ ಸೆಟ್‌, ಅಸ್ಸೆಮ್ಮಿಟ್ರಿಕಲ್‌ ಇಂಡೋ-ವೆಸ್ಟರ್ನ್ ಸೂಟ್‌, ಕುರ್ತಾ, ಪ್ರಿಂಟೆಡ್‌ ಬಂದ್ಗಲಾ, ಗೋಲ್ಡನ್‌ ಥ್ರೆಡ್‌ ಡಿಸೈನರ್‌ ಪಟಾನ್‌ ಸೂಟ್‌, ಗೋಲ್ಡನ್‌ ಹಾಗೂ ಪ್ರಿಂಟ್‌ ಹಾಗೂ ಗ್ರ್ಯಾಂಡ್‌ ವರ್ಕ್ ಇರುವ ಶೆರ್ವಾನಿಗಳು ಈ ಬಾರಿಯ ವಿಂಟರ್‌ ವೆಡ್ಡಿಂಗ್‌ ಸೀಸನ್‌ನಲ್ಲಿ ಮೆನ್ಸ್‌ ಫ್ಯಾಷನ್‌ನಲ್ಲಿ ಟಾಪ್‌ ಲಿಸ್ಟ್‌ನಲ್ಲಿ ಸ್ಥಾನ ಗಿಟ್ಟಿಸಿವೆ.

ಕಸ್ಟಮೈಸ್ಡ್‌ ಗ್ರ್ಯಾಂಡ್‌ ಡಿಸೈನರ್‌ವೇರ್

ಇನ್ನು ಇವುಗಳನ್ನು ಹೊರತುಪಡಿಸಿದಲ್ಲಿ ಸಾಕಷ್ಟು ಬ್ರಾಂಡ್‌ಗಳ ರೆಡಿಮೇಡ್‌ ಗ್ರ್ಯಾಂಡ್‌ ಡಿಸೈನರ್‌ವೇರ್ಸ್ ಕಸ್ಟಮೈಸ್ಡ್‌ ಡಿಸೈನ್‌ಗಳಲ್ಲಿ ಲಭ್ಯ. ವೆಸ್ಟೆರ್ನ್ ಕೋಟ್‌ ಸೂಟ್‌ ಕೂಡ ಇದೀಗ ಇಂಡಿಯನ್‌ ಡಿಸೈನ್‌ ಟಚ್‌ ಪಡೆದು ಹೊಸ ಲುಕ್‌ನಲ್ಲಿ ಬಿಡುಗಡೆಗೊಂಡಿದ್ದು, ಮದುವೆಯ ರಿಸಪ್ಷನ್‌ನಲ್ಲೂ ಕಾಣಿಸಿಕೊಂಡಿವೆ. ಆಯಾ ಮದುಮಗನ ಆಯ್ಕೆ ಸೂಕ್ತವಾಗುವಂತೆ ಕಂಪ್ಲೀಟ್‌ ಇಂಡಿಯನ್‌, ಇಲ್ಲವೇ ಇಂಡೋ-ವೆಸ್ಟರ್ನ್ ಅಥವಾ ಕಂಪ್ಲೀಟ್‌ ವೆಸ್ಟರ್ನ್ ಕೋಟ್‌ ಸೂಟ್‌ನ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳು ವಿಂಟರ್‌ ವೆಡ್ಡಿಂಗ್‌ ಸೀಸನ್‌ನಲ್ಲಿ ಬಿಡುಗಡೆಗೊಂಡು ಪಾಪ್ಯುಲರ್‌ ಆಗಿವೆ ಎನ್ನುತ್ತಾರೆ ವೆಡ್ಡಿಂಗ್‌ ಸ್ಟೈಲಿಸ್ಟ್‌ಗಳು.

ಮದುಮಗನ ಜತೆಗಾರರಿಗೂ ನ್ಯೂ ಲುಕ್‌ ನೀಡುವ ಉಡುಪು

ಮದುವೆಯಲ್ಲಿ ಪಾಲ್ಗೊಳ್ಳುವವರು ಧರಿಸಬಹುದಾದ ಡಿಸೈನರ್‌ವೇರ್‌ಗಳಲ್ಲಿ ಗೋಲ್ಡ್‌ ಮಿಕ್ಸ್‌ ಇರುವ ಲಾಂಗ್‌ ಶೆರ್ವಾನಿ, ಮಿನುಗುವ ಪೈಜಾಮ, ಕುರ್ತಾ, ಡಿಸೈನರ್‌ ಕಾಲರ್‌ನ ಜತೆಗೆ ಸ್ಲಿಟ್ಸ್‌ ಇರುವಂತಹ ಲಾಂಗ್‌ ಬಂದಗಾಲ ಸೇರಿದಂತೆ ಎಲಿಗೆಂಟ್‌ ಫ್ಯಾಷನ್‌ ಈ ಬಾರಿಯ ವೆಡ್ಡಿಂಗ್‌ ಸೀಸನ್‌ನಲ್ಲಿ ಹಂಗಾಮ ಎಬ್ಬಿಸಿದೆ.

“ಮದುವೆಯಾಗುವ ಹುಡುಗನ ಎಥ್ನಿಕ್‌ ಸ್ಟೈಲ್‌ಗೆ ಹೆಚ್ಚು ಅಪ್ಷನ್‌ಗಳಿರುವುದಿಲ್ಲ ಎಂಬ ಮಾತು ಸುಳ್ಳಾಗಿದೆ. ಹುಡುಗಿಯರಂತೆ ಅವರಿಗೂ ನಾನಾ ಶೈಲಿಯವು ಲಭ್ಯವಿದೆ ಎನ್ನುತ್ತಾರೆ” ಸ್ಟೈಲಿಸ್ಟ್‌ ಅಮಿತ್‌.

ಮದುಮಗನ ಪರ್ಸನಾಟಿಗೆ ತಕ್ಕಂತಿರಲಿ

ಕೆಲವು ಹುಡುಗರು ಎಥ್ನಿಕ್‌ ಸ್ಟೈಲ್‌ಸ್ಟೇಟ್‌ಮೆಂಟ್‌ ಅಳವಡಿಸಿಕೊಂಡಿರುತ್ತಾರೆ. ಆದರೆ ಅವು ಅವರಿಗೆ ಫಿಟ್‌ ಆಗಿ ಕಾಣಿಸುವುದಿಲ್ಲ. ಇದಕ್ಕೆ ಅವರ ಬಾಡಿ ಸ್ಟ್ರಕ್ಚರ್‌ ಕಾರಣವಲ್ಲ. ಬದಲಿಗೆ ಅವರ ಸೆಲೆಕ್ಷನ್‌ ಎನ್ನುತ್ತಾರೆ ಮಾಡೆಲ್‌ ವಿನಯ್‌. ಅವರು ಹೇಳುವಂತೆ. ಎಥ್ನಿಕ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ ಅಳವಡಿಸಿಕೊಳ್ಳುವವರು ಆದಷ್ಟೂ ಟ್ರಯಲ್‌ ನೋಡಿ ಕೊಳ್ಳುವುದು ಬೆಸ್ಟ್‌. ಇನ್ನು ಸ್ಟಿಚ್‌ ಮಾಡಿಸುವವರು ಪರ್ಫೆಕ್ಟ್ ಸ್ಟಿಚ್‌ ಆದ ನಂತರ ಧರಿಸುವುದು ಉತ್ತಮ ಎನ್ನುತ್ತಾರೆ.

ಮದುಮಗನ ಚಾಯ್ಸ್‌ ಹೀಗಿರಲಿ

· ಟ್ರೆಂಡಿ ಡಿಸೈನರ್‌ವೇರ್‌ಗೆ ಆದ್ಯತೆ ನೀಡಬೇಕು.

· ಡಿಸೈನರ್‌ವೇರ್‌ಗೆ ಜ್ಯುವೆಲರಿ ಕೂಡ ಮ್ಯಾಚ್‌ ಆಗಬೇಕು.

· ಧರಿಸುವ ಉಡುಪಿಗೆ ಹೇರ್‌ಸ್ಟೈಲ್‌ ಕೂಡ ಹೊಂದುವುದು ಅಗತ್ಯ.

· ಫುಟ್‌ವೇರ್‌ ಡಿಸೈನರ್‌ವೇರ್‌ಗೆ ಸೂಟ್‌ ಆಗಬೇಕು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ|Wedding jewellery Fashion | ಮದುಮಗಳ ಗ್ರ್ಯಾಂಡ್‌ ಲುಕ್‌ಗೆ ಇರಲಿ ಮಲ್ಟಿ ಲೇಯರ್ಡ್‌ ಹಾರ

Exit mobile version