Site icon Vistara News

Actress Jaya Bachchan | ಪೊದೆಗಳ ಹಿಂದೆ ಸ್ಯಾನಿಟರಿ ಪ್ಯಾಡ್‌ ಬದಲಾಯಿಸಬೇಕಿತ್ತು: ಆ ದಿನಗಳನ್ನು ನೆನಪಿಸಿಕೊಂಡ ಜಯಾ ಬಚ್ಚನ್!

Actress Jaya Bachchan

ಬೆಂಗಳೂರು : ಬಾಲಿವುಡ್‌ ಹಿರಿಯ ನಟಿ ಜಯಾ ಬಚ್ಚನ್ (Actress Jaya Bachchan) ಅವರು ಮೊಮ್ಮಗಳ ʻನವ್ಯಾ ನವೇಲಿ ನಂದಾʼ ಪಾಡ್‌ಕಾಸ್ಟ್‌ನ ಸಂಚಿಕೆಯಲ್ಲಿ ಹೊರಾಂಗಣ ಶೂಟಿಂಗ್‌ ಸಂದರ್ಭದಲ್ಲಿ ಮುಟ್ಟಾದ ಸಂದರ್ಭದಲ್ಲಿ ತಾವು ಎದುರಿಸಿದ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ. 15ನೇ ವಯಸ್ಸಿನಲ್ಲಿಯೇ ಸಿನಿರಂಗದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು ನಟಿ ಜಯಾ ಬಚ್ಚನ್. ಔಟ್‌ ಡೋರ್‌ ಶೂಟಿಂಗ್‌ ವೇಳೆ ಪೊದೆಗಳ ಹಿಂದೆ ಅಡಗಿ ಕುಳಿತು ಸ್ಯಾನಿಟರಿ ಪ್ಯಾಡ್‌ಗಳನ್ನು ಬದಲಾಯಿಸಬೇಕಿತ್ತು ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ ನಟಿ ಜಯಾ ಬಚ್ಚನ್.

ಜಯಾ ಬಚ್ಚನ್ ಮಾತನಾಡಿ ʻʻನಮ್ಮ ಕಾಲದಲ್ಲಿ ಹೊರಾಂಗಣ ಚಿತ್ರೀಕರಣದ ಸಂದರ್ಭದಲ್ಲಿ ನಮಗಾಗಿ ವ್ಯಾನ್‌ಗಳಿರಲಿಲ್ಲ(ಕ್ಯಾರವಾನ್‌). ಸರಿಯಾದ ಶೌಚಾಲಯದ ವ್ಯವಸ್ಥೆಗಳು ಇರುತ್ತಿರಲಿಲ್ಲ. ಮುಟ್ಟಾದ ಸಂದರ್ಭದಲ್ಲಿ ನಾವು ಪೊದೆಗಳನ್ನು ಹುಡುಕುತ್ತಿದ್ದೆವು. ಪ್ಯಾಡ್‌ಗಳನ್ನು ಬದಲಿಸಲು ನಮಗೆ ಸರಿಯಾದ ಸ್ಥಳ ಇರುತ್ತಿರಲಿಲ್ಲ. ಪ್ಯಾಡ್‌ಗಳನ್ನು ಎಸೆಯಲು ಪ್ಲಾಸ್ಟಿಕ್ ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ನಂತರ ಮನೆಗೆ ಬಂದು ಎಸೆಯಬೇಕಿತ್ತು. ಆಗ ಮುಜುಗರದ ಸನ್ನಿವೇಶಗಳನ್ನು ನಾವು ಎದುರಿಸುತ್ತಿದ್ದೆವುʼʼ ಎಂದರು.

ಇದನ್ನೂ ಓದಿ | Kannada New Movie | ಸುನಾಮಿ ಕಿಟ್ಟಿ ಅಭಿನಯದ ‘ಕೋರ’ ಸಿನಿಮಾ ಟೀಸರ್‌ ಔಟ್‌ : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಹೇಳಿದ್ದೇನು?

ಮಹಿಳೆಯರಿಗೆ ರಜೆಯನ್ನು ನೀಡಿ!
ʻʻಜನರು ತಾಯಂದಿರ ದಿನ ಅದ್ಧೂರಿಯಿಂದ ಆಚರಿಸುತ್ತಾರೆ. ತಮ್ಮ ತಾಯಂದಿರು ಏನನ್ನು ಅನುಭವಿಸಿದ್ದಾರೆಂದು ಅರ್ಥ ಮಾಡಿಕೊಳ್ಳಲು ನೀವು ಎಂದಾದರೂ ತಲೆಕೆಡಿಸಿಕೊಂಡಿದ್ದೀರಾ?ʼʼ ಎಂದು ಪ್ರಶ್ನಿಸಿದ್ದಾರೆ. ಅದೇ ರೀತಿ ಹಲವೆಡೆ ಮಹಿಳೆಯರಿಗೆ ಪಿರಿಯಡ್ ಸಮಯದಲ್ಲಿ ರಜಾ ನೀಡಲು ಹಿಂಜರಿಯುತ್ತಾರೆ ಮತ್ತು ವಿರೋಧಿಸುತ್ತಾರೆ. ಕನಿಷ್ಠ ಒಂದು ಅಥವಾ ಎರಡು ದಿನ ಮಹಿಳೆಯರಿಗೆ ಮುಟ್ಟಾದ ಸಂದರ್ಭದಲ್ಲಿ ರಜೆ ನೀಡಿ. ಬಳಿಕ ಕೆಲಸವನ್ನು ಬೇರೆ ಯಾವುದಾದರೂ ದಿನದಲ್ಲಿ ಅದನ್ನು ಸರಿದೂಗಿಸಲು ಅವರನ್ನು ಕೇಳಿಕೊಳ್ಳಿ. ಪುರುಷರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಅಲ್ಲದೆ, ಕೆಲವು ಮಹಿಳೆಯರು ಕೂಡ ಈ ಬಗ್ಗೆ ಅರ್ಥ ಮಾಡಿಕೊಳ್ಳುವುದಿಲ್ಲ, ಇದರ ಬಗ್ಗೆ ಅವರೂ ಧ್ವನಿ ಎತ್ತಬೇಕುʼʼ ಎಂದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಅಮಿತಾಭ್ ಗೆದ್ದ ‌6 ಸವಾಲುಗಳು! ತಿರಸ್ಕಾರ, ಅಪಮಾನ, ನೋವುಗಳನ್ನು ಮೀರಿ ನಿಂತ ಖುಷಿ

Exit mobile version