Site icon Vistara News

Operation Hasta : ʼಆಪರೇಷನ್ ಹಸ್ತʼದ ಹಿಟ್‌ ಲಿಸ್ಟ್‌ನಲ್ಲಿ ಇರೋದು ಈ 14 ಜನ!

Operation Hasta and DK shivakumar and BJP Flag

ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Election 2024) ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ (Karnataka Politics) ಅನೇಕ ಬೆಳವಣಿಗೆಗಳು ನಡೆಯುತ್ತಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ನಲ್ಲಿ ಆಂತರಿಕ ಲೆಕ್ಕಾಚಾರಗಳು ಜೋರಾಗಿಯೇ ಇವೆ. ಯಾವ ಮಾರ್ಗವನ್ನು ಅನುಸರಿಸಿದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು ಎಂಬ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ಹೆಣೆಯಲಾಗುತ್ತಿದೆ. ಇನ್ನು ಲೋಕಸಭೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಬೇಕೆಂದು ಕಾಂಗ್ರೆಸ್‌ ಹೈಕಮಾಂಡ್‌ (Congress High Command) ಟಾಸ್ಕ್‌ ನೀಡಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ (KPCC president and Deputy CM DK Shivakumar) ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ಅವರು ಅವರದ್ದೇ ಆದ ರೀತಿಯಲ್ಲಿ ರಾಜಕೀಯ ಆಟವನ್ನು ಪ್ರಾರಂಭಿಸಿದ್ದಾರೆ. ಆಪರೇಷನ್‌ ಹಸ್ತಕ್ಕೆ (Operation Hasta) ಮುಂದಡಿ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದಕ್ಕಾಗಿ ಕಳೆದ ಬಾರಿ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಶಾಸಕರನ್ನು ವಾಪಸ್‌ ಕರೆತರಲು (ಘರ್‌ ವಾಪಸಿ- Ghar Wapsi) ಯೋಜನೆ ರೂಪಿಸಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಕೈಯಲ್ಲಿ ಬಿಜೆಪಿಯ 14 ಶಾಸಕರು ಹಿಟ್‌ ಲಿಸ್ಟ್‌ನಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಅಂದು ಅಧಿಕಾರಕ್ಕಾಗಿ ಬಿಜೆಪಿಗೆ ಹೋದ ಶಾಸಕರಿಗೆ ಈಗ ಪಕ್ಷದ ಕೆಲವು ಬೆಳವಣಿಗೆಯಿಂದ ಅಸಮಾಧಾನ ಆಗಿದೆ ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ನಾಯಕರ ಬಗ್ಗೆ ಮಾಜಿ ಸಚಿವರೊಬ್ಬರು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದಾರೆ. ತನ್ನ ಸೋಲಿಸಲು ಮುಂದಾಗಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ನಾಯಕರು ನನ್ನ ಪ್ರತಿ ಕೆಲಸಕ್ಕೆ ಅಡ್ಡಿ ಪಡಿಸಿದರೆ ಪಕ್ಷ ಕಟ್ಟುವುದು ಹೇಗೆ? ನಾನು ಈ ಪಕ್ಷದಲ್ಲಿ ಇರಲು ಆಗುತ್ತದೆಯೇ ಎಂದು ಎಸ್‌.ಟಿ. ಸೋಮಶೇಖರ್‌ ಪ್ರಶ್ನೆ ಮಾಡಿದಾರೆ.

ಅಂದು ಗುಳೆ ಎದ್ದು ಹೋಗಿದ್ದ ಶಾಸಕರು ಇಂದು ಮತ್ತೆ ಘರ್ ವಾಪ್ಸಿ ಆಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾದರೆ, ಕಾಂಗ್ರೆಸ್‌ ಹಿಟ್‌ ಲಿಸ್ಟ್‌ನಲ್ಲಿರುವುದು ಯಾರು ಯಾರು? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

1. ಎಸ್‌.ಟಿ. ಸೋಮಶೇಖರ್‌ (ST Somashekar)
ಯಶವಂತಪುರ ಶಾಸಕ

2. ಶಿವರಾಮ್‌ ಹೆಬ್ಬಾರ್‌ (Shivaram Hebbar)
ಯಲ್ಲಾಪುರ ಶಾಸಕ

3. ಕೆ. ಗೋಪಾಲಯ್ಯ (MLA K Gopalaiah)
ಮಹಾಲಕ್ಷ್ಮಿ ಲೇಔಟ್ ಶಾಸಕ (ಜೆಡಿಎಸ್‌ನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದರು)

4. ಬೈರತಿ ಬಸವರಾಜು (Byrathi Basavaraju)
ಕೆ.ಆರ್.ಪುರಂ ಶಾಸಕ

5. ಮುನಿರತ್ನ (Munirathna)
ರಾಜರಾಜೇಶ್ವರಿ ನಗರ ಶಾಸಕ

6 ಎಚ್‌. ವಿಶ್ವನಾಥ್‌ (H Vishwanath)
ವಿಧಾನ ಪರಿಷತ್ ಸದಸ್ಯ

7. ಆರ್‌. ಶಂಕರ್‌ (R Shankar)
ಮಾಜಿ ಶಾಸಕ

8. ಎಂ.ಟಿ.ಬಿ. ನಾಗರಾಜ್‌ (MTB Nagaraj)
ಪರಿಷತ್ ಸದಸ್ಯ

9. ಕೆ. ಸಿ. ನಾರಾಯಣ ಗೌಡ (KC Narayana Gowda)
ಕೆ.ಆರ್. ಪೇಟೆ ಮಾಜಿ ಶಾಸಕ (ಜೆಡಿಎಸ್ ಇಂದ ಬಿಜೆಪಿಗೆ ಸೇರ್ಪಡೆಯಾಗಿದ್ದರು)

10. ಬಿ.ಸಿ. ಪಾಟೀಲ್ (BC Patil)
ಮಾಜಿ ಶಾಸಕ

11. ಆನಂದ್ ಸಿಂಗ್ (Anand Singh)
ವಿಜಯನಗರ ಮಾಜಿ ಶಾಸಕ

12. ಶ್ರೀಮಂತ ಪಾಟೀಲ್ (Shrimant Patil)
ಮಾಜಿ ಶಾಸಕ

13. ಮಹೇಶ್ ಕುಮಟಳ್ಳಿ (Mahesh Kumatalli)
ಮಾಜಿ ಶಾಸಕ

14. ಪ್ರತಾಪ್ ಗೌಡ ಪಾಟೀಲ್ (Pratap Gowda Patil)
ಮಾಜಿ ಶಾಸಕ

ಇದನ್ನೂ ಓದಿ: Operation Hasta : ಎಸ್‌.ಟಿ. ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ಫಿಕ್ಸ್? ಖಚಿತಪಡಿಸಿದ ಪರಮೇಶ್ವರ್!

ಈ ಎಲ್ಲರೂ ಒಂದಲ್ಲಾ ಒಂದು ಕಾರಣಕ್ಕೆ ಬಿಜೆಪಿ ವರಿಷ್ಠರು, ನಾಯಕರ ಮೇಲೆ ಮುನಿಸನ್ನು ಹೊಂದಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಕಾಂಗ್ರೆಸ್‌ನತ್ತ ಸೆಳೆದು ಲೋಕಸಭಾ ಚುನಾವಣೆಯಲ್ಲಿ ಅವರ ವರ್ಚಸ್ಸನ್ನು ಬಳಸಿಕೊಳ್ಳಲು ತಂತ್ರಗಾರಿಕೆಯನ್ನು ರೂಪಿಸಲಾಗುತ್ತಿದೆ.

Exit mobile version