ಹೊಸದಿಲ್ಲಿ: ಪಶ್ಚಿಮ ಬಂಗಾಳ ಕೆಲವೆಡೆ ಹಿಂಸಾಚಾರ ನಡೆದಿರುವುದು ಸೇರಿದಂತೆ ಹಲವು ಘಟನೆಗಳ ಮಧ್ಯೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳನ್ನು ಒಳಗೊಂಡ ಲೋಕಸಭಾ ಚುನಾವಣೆಯ (lok Sabha Election) ಮೊದಲ ಹಂತದ ಮತದಾನ ಏಪ್ರಿಲ್ 19ಕ್ಕೆ ಪೂರ್ಣಗೊಂಡಿತು. ಸಂಜೆ 5 ಗಂಟೆಯವರೆಗೆ ಸುಮಾರು ಶೇ.60ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಇದು ಅಂತಿಮ ಅಂಕಿ ಅಂಶವಲ್ಲ ಎಂಬುದಾಗಿಯೂ ಸ್ಪಷ್ಟಪಡಿಸಿದೆ. ಮತದಾನವು ಭಾಗಶಃ ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯಿತು ಎಂದು ಚುನಾವಣಾ ಆಯೋಗದ ವಕ್ತಾರರು ತಿಳಿಸಿದ್ದಾರೆ.
ಏಳು ಹಂತಗಳ ಚುನಾವಣೆಯ ಮೊದಲ ಮತ್ತು ಅತಿದೊಡ್ಡ ಹಂತದ ಮತದಾನ ಪ್ರಕ್ರಿಯೆ ಎಲ್ಲಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಯಿತು. ಹೆಚ್ಚಿನ ಸ್ಥಾನಗಳಲ್ಲಿ ಸಂಜೆ 6 ಗಂಟೆಗೆ ಕೊನೆಗೊಂಡಿತು. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಏಕಕಾಲದಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿದೆ.
As per ECI, Tripura recorded 79.90% voter turnout till 7pm, in the first phase of the Lok Sabha elections which saw polling in 21 States and UTs pic.twitter.com/2E0UgIjfpb
— ANI (@ANI) April 19, 2024
ತಮಿಳುನಾಡು (39), ಉತ್ತರಾಖಂಡ (5), ಅರುಣಾಚಲ ಪ್ರದೇಶ (2), ಮೇಘಾಲಯ (2), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1), ಮಿಜೋರಾಂ (1), ನಾಗಾಲ್ಯಾಂಡ್ (1), ಪುದುಚೇರಿ (1), ಸಿಕ್ಕಿಂ (1) ಮತ್ತು ಲಕ್ಷದ್ವೀಪ (1) ಸ್ಥಾನಗಳಿಗೆ ಮತದಾನ ನಡೆದಿದೆ.
ರಾಜಸ್ಥಾನದ 12, ಉತ್ತರ ಪ್ರದೇಶದ 8, ಮಧ್ಯಪ್ರದೇಶದ 6, ಅಸ್ಸಾಂ ಮತ್ತು ಮಹಾರಾಷ್ಟ್ರದ ತಲಾ 5, ಬಿಹಾರದ 4, ಪಶ್ಚಿಮ ಬಂಗಾಳದ 3, ಮಣಿಪುರದ 2, ತ್ರಿಪುರಾ, ಜಮ್ಮು ಮತ್ತು ಕಾಶ್ಮೀರ ಮತ್ತು ಛತ್ತೀಸ್ ಗಢದ ತಲಾ 1 ಸ್ಥಾನಗಳಿಗೆ ಇಂದು ಮತದಾನ ನಡೆಯಿತು.
ಅರುಣಾಚಲ ಪ್ರದೇಶ (60 ಸ್ಥಾನಗಳು) ಮತ್ತು ಸಿಕ್ಕಿಂ (32 ಸ್ಥಾನಗಳು) ವಿಧಾನಸಭಾ ಚುನಾವಣೆಗಳು ಇದೇ ವೇಳೆ ನಡೆದವು.
ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸತತ ಮೂರನೇ ಅವಧಿಗೆ ಬಲವಾದ ಬಹುಮತವನ್ನು ಬಯಸುತ್ತಿದ್ದರೆ, ಪ್ರತಿಪಕ್ಷ ಬಿಜೆಪಿ ಬಣದ ಘಟಕಗಳು 2014 ಮತ್ತು 2019 ರ ಚುನಾವಣೆಗಳಲ್ಲಿ ಹಿನ್ನಡೆಯನ್ನು ಎದುರಿಸಿದ ನಂತರ ಪುನರುಜ್ಜೀವನದ ನಿರೀಕ್ಷೆಯಲ್ಲಿವೆ.
ಮೊದಲ ಬಾರಿಗೆ ಮತ ಚಲಾಯಿಸಿದವರು, ಸಾಂಪ್ರದಾಯಿಕ ಉಡುಗೆಯಲ್ಲಿ ಬಂದ ಅನೇಕ ನವವಿವಾಹಿತ ದಂಪತಿಗಳು, ಅಂಗವಿಕಲರು ಮತ್ತು ಕೆಲವು ವೃದ್ಧರು ಸ್ಟ್ರೆಚರ್ ಮತ್ತು ಗಾಲಿಕುರ್ಚಿಗಳ ಮೂಲಕ ಬಂದವರು ಮೊದಲ ಹಂತದ ಚುನಾವಣೆಯಲ್ಲೂ ಕಂಡು ಬಂದರು.
ಇದನ್ನೂ ಓದಿ: Lok Sabha Election : ಕಾಂಗ್ರೆಸ್ ಪರ ಶಾರುಖ್ ಖಾನ್ ಪ್ರಚಾರ; ಬಿಜೆಪಿಯಿಂದ ಆಕ್ಷೇಪ!; ವಿಡಿಯೊ ಇದೆ
ಇವಿಎಂ ದೋಷ
ತಮಿಳುನಾಡು, ಅರುಣಾಚಲ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಅಸ್ಸಾಂನ ಕೆಲವು ಬೂತ್ ಗಳಲ್ಲಿ ಸಣ್ಣ ಪ್ರಮಾಣದ ಇವಿಎಂ ದೋಷಗಳು ವರದಿಯಾಗಿವೆ. ಪಶ್ಚಿಮ ಬಂಗಾಳದಲ್ಲಿ ಸಂಜೆ 5 ಗಂಟೆಯವರೆಗೆ ಶೇಕಡಾ 77.57, ಅಸ್ಸಾಂನಲ್ಲಿ ಶೇಕಡಾ 70.77 ಮತ್ತು ಮೇಘಾಲಯದಲ್ಲಿ ಶೇಕಡಾ 69.91 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹಿಂಸಾಸಾರ
ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಕ್ಷೇತ್ರದಲ್ಲಿ ಹಿಂಸಾಚಾರ ನಡೆದಿದೆ. ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಘರ್ಷಣೆ ನಡೆಸಿದ್ದು, ಮತದಾನ ಹಿಂಸಾಚಾರ, ಮತದಾರರ ಬೆದರಿಕೆ ಮತ್ತು ಚುನಾವಣಾ ಏಜೆಂಟರ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಕ್ರಮವಾಗಿ 80 ಮತ್ತು 39 ದೂರುಗಳನ್ನು ದಾಖಲಾಗಿವೆ. ಸಂಘರ್ಷ ಪೀಡಿತ ಮಣಿಪುರದಲ್ಲಿ ಸಂಜೆ 5 ಗಂಟೆಯವರೆಗೆ ಶೇ.67.46ರಷ್ಟು ಮತದಾನವಾಗಿದೆ.
ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಥೊಂಗ್ಜು ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯರು ಮತ್ತು ಅಪರಿಚಿತ ವ್ಯಕ್ತಿಗಳ ನಡುವೆ ವಾಗ್ವಾದ ನಡೆದಿದೆ. ಛತ್ತೀಸ್ಗಢದ ನಕ್ಸಲ್ ಪೀಡಿತ ಬಸ್ತಾರ್ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 63.41 ರಷ್ಟು ಮತದಾರರು ಮತ ಚಲಾಯಿಸಿದ್ದಾರೆ. ಅಲ್ಲಿ ಗ್ರೆನೇಡ್ ಆಕಸ್ಮಿಕವಾಗಿ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಸಿಆರ್ಪಿಎಫ್ ಜವಾನ ಗಾಯಗೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಐಇಡಿ ಸ್ಫೋಟ ಸಂಭವಿಸಿದೆ.
ತಮಿಳುನಾಡಿನಲ್ಲಿ 63.20 ಶೇಕಡಾ ಮತದಾನ
There are two things #Coimbatore can be extremely proud of:
— Abhijit Majumder (@abhijitmajumder) April 19, 2024
1. The best dosas in south India.
2. The best candidate in south India.#LokSabhaElections2024 #Annamalai pic.twitter.com/k0qS8tDl1N
ತಮಿಳುನಾಡಿನ 39 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.63.20ರಷ್ಟು ಮತದಾನವಾಗಿದೆ. ಇವಿಎಂ ತಾಂತ್ರಿಕ ದೋಷಗಳಿಂದಾಗಿ ತಾಂಬರಂ ಬಳಿಯ ಮತಗಟ್ಟೆಯಂತಹ ರಾಜ್ಯದ ಕೆಲವು ಮತಗಟ್ಟೆಗಳಲ್ಲಿ ಮತದಾನವು ಒಂದು ಗಂಟೆ ಮತದಾನ ವಿಳಂಬವಾಯಿತು.
ಅರುಣಾಚಲ ಪ್ರದೇಶದ ಒಟ್ಟು 8,92,694 ಮತದಾರರ ಪೈಕಿ ಶೇ.60ರಷ್ಟು ಮತದಾನವಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ಬೆಳಗ್ಗೆ ಸಮಯದಲ್ಲಿ ಮತದಾನವು ನಿಧಾನವಾಗಿದ್ದರೂ, ಹವಾಮಾನ ಪರಿಸ್ಥಿತಿಗಳು ಸುಧಾರಿಸುವುದರೊಂದಿಗೆ ವೇಗ ಪಡೆದುಕೊಂಡಿತು. ರಾಜ್ಯದ ಕೆಲವು ಮತಗಟ್ಟೆಗಳಲ್ಲಿ, ವಿದ್ಯುನ್ಮಾನ ಮತದಾನ ಯಂತ್ರಗಳಲ್ಲಿ (ಇವಿಎಂ) ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದರಿಂದ ಮತದಾನ ವಿಳಂಬವಾಯಿತು ಎಂದು ಮುಖ್ಯ ಚುನಾವಣಾ ಅಧಿಕಾರಿ ಪವನ್ ಕುಮಾರ್ ಸೈನ್ ತಿಳಿಸಿದ್ದಾರೆ.
ಪೂರ್ವ ಕಾಮೆಂಗ್ ಜಿಲ್ಲೆಯ ಬಮೆಂಗ್ ಕ್ಷೇತ್ರದ ಮತದಾನ ಕೇಂದ್ರದ ಬಳಿ ಇಬ್ಬರು ಅಭ್ಯರ್ಥಿಗಳ ಬೆಂಬಲಿಗರು ಘರ್ಷಣೆ ನಡೆಸಿದ್ದಾರೆ.
ಇವಿಎಂ ಯಂತ್ರಕ್ಕೆ ಹಾನಿ
ಪೂರ್ವ ಕಾಮೆಂಗ್, ಕುರುಂಗ್ ಕುಮೆ ಮತ್ತು ಅಪ್ಪರ್ ಸುಬನ್ಸಿರಿ ಜಿಲ್ಲೆಗಳ ಮೂರು ಮತಗಟ್ಟೆಗಳಲ್ಲಿ ಇವಿಎಂ ಯಂತ್ರಗಳಿಗೆ ಹಾನಿ ಮಾಡಿದ ಘಟನೆಗಳು ವರದಿಯಾಗಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶೋಂಪೆನ್ ಬುಡಕಟ್ಟಿನ ಸದಸ್ಯರೊಬ್ಬರಿಂದ ಮತದಾನ
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಶೇ.56.87ರಷ್ಟು ಮತದಾನವಾಗಿದೆ. ಕೆಲವು ಸಣ್ಣ ಇವಿಎಂ ದೋಷಗಳು ಕಂಡು ಬಂದವು ಅಧಿಕಾರಿಗಳು ತಿಳಿಸಿದ್ದಾರೆ. ಈ ಕೇಂದ್ರಾಡಳಿತ ಪ್ರದೇಶದಲ್ಲಿ ಮೊದಲ ಬಾರಿಗೆ, ಗ್ರೇಟ್ ನಿಕೋಬಾರ್ ದ್ವೀಪಗಳ ಅಪಾಯಕಾರಿ ಬುಡಕಟ್ಟು ಗುಂಪಾದ ಶೋಂಪೆನ್ ಬುಡಕಟ್ಟಿನ ಏಳು ಸದಸ್ಯರಲ್ಲಿ ಒಬ್ಬರು ಲೋಕಸಭಾ ಸ್ಥಾನಕ್ಕೆ ಮತ ಚಲಾಯಿಸಿದ್ದಾರೆ.
ಅಸ್ಸಾಂನ ಲಖಿಂಪುರದ ಬಿಹ್ಪುರಿಯಾದ ಮೂರು ಮತಗಟ್ಟೆಗಳಲ್ಲಿ, ಹೊಜೈ, ಕಾಲಿಯಾಬೋರ್ ಮತ್ತು ಬೊಕಾಖಾಟ್ನಲ್ಲಿ ತಲಾ ಒಂದು ಮತ್ತು ದಿಬ್ರುಗಢದ ನಹರ್ಕಟಿಯಾದಲ್ಲಿ ಒಂದು ಮತಗಟ್ಟೆಯಲ್ಲಿ ಇವಿಎಂ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
There are two things #Coimbatore can be extremely proud of:
— Abhijit Majumder (@abhijitmajumder) April 19, 2024
1. The best dosas in south India.
2. The best candidate in south India.#LokSabhaElections2024 #Annamalai pic.twitter.com/k0qS8tDl1N
ನೈಜ ಮತದಾನ ಪ್ರಾರಂಭವಾಗುವ 90 ನಿಮಿಷಗಳ ಮೊದಲು ಪ್ರಾರಂಭವಾದ ಅಣಕು ಮತದಾನದ ಸಮಯದಲ್ಲಿ ಹೆಚ್ಚಿನ ದೋಷಗಳು ಕಂಡುಬಂದಿವೆ. ಆ ದೋಷಗಳನ್ನು ತಕ್ಷಣ ಸರಿಪಡಿಸಲಾಯಿತು. ಆ ಬೂತ್ಗಳಲ್ಲಿ ಮತದಾನ ಸ್ವಲ್ಪ ತಡವಾಗಿ ಪ್ರಾರಂಭವಾಯಿತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಮುಳುಗಿದ ವಾಹನ
ಅಸ್ಸಾಂನ ಲಖಿಂಪುರ ಕ್ಷೇತ್ರದಲ್ಲಿ ನೀರಿನ ಮಟ್ಟ ಇದ್ದಕ್ಕಿದ್ದಂತೆ ಏರಿಕೆಯಾದ ಕಾರಣ ಇವಿಎಂ ಸಾಗಿಸುತ್ತಿದ್ದ ವಾಹನವು ಭಾಗಶಃ ನದಿಗೆ ಮುಳುಗಿದೆ. ಯಾಂತ್ರೀಕೃತ ದೋಣಿಯೂ ಕೊಚ್ಚಿಹೋಗಿದೆ. ವಾಹನಕ್ಕೆ ನೀರು ನುಗ್ಗುವ ಮೊದಲು ವಾಹನದ ಚಾಲಕ ಮತ್ತು ಮತಗಟ್ಟೆ ಅಧಿಕಾರಿ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಹಾರದಲ್ಲಿ ಕಡಿಮೆ ಮತದಾನ
ಬಿಹಾರದ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ 75 ಲಕ್ಷ ಮತದಾರರ ಪೈಕಿ ಶೇ.46.32ರಷ್ಟು ಮಂದಿ ಸಂಜೆ 5 ಗಂಟೆಯವರೆಗೆ ತಮ್ಮ ಹಕ್ಕು ಚಲಾಯಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉಧಂಪುರ ಸಂಸದೀಯ ಕ್ಷೇತ್ರದಲ್ಲಿ ಮತದಾನದ ಮೊದಲ ಆರು ಗಂಟೆಗಳಲ್ಲಿ ಶೇಕಡಾ 65.08 ರಷ್ಟು ಮತದಾರರು ತಮ್ಮ ಆಯ್ಕೆಯನ್ನು ಚಲಾಯಿಸಿದ್ದಾರೆ.
ರಾಜಸ್ಥಾನದಲ್ಲಿ ಸಂಜೆ 5 ಗಂಟೆಯವರೆಗೆ ಶೇ.50.27 ರಷ್ಟು ಮತದಾನವಾಗಿದ್ದರೆ, ಉತ್ತರಾಖಂಡದಲ್ಲಿ ಶೇ.53.56 ರಷ್ಟು ಮತದಾನವಾಗಿದೆ.
ಮಹಾರಾಷ್ಟ್ರ ವರದಿ
ಮಹಾರಾಷ್ಟ್ರದಲ್ಲಿ ಸಂಜೆ 5 ಗಂಟೆಯವರೆಗೆ ಶೇ.54.85 ರಷ್ಟು ಮತದಾನವಾಗಿದ್ದರೆ, ಮಧ್ಯಪ್ರದೇಶದ ಆರು ಲೋಕಸಭಾ ಕ್ಷೇತ್ರಗಳಲ್ಲಿ ಶೇ.63.50 ರಷ್ಟು ಮತದಾನವಾಗಿದೆ. ಉತ್ತರ ಪ್ರದೇಶದಲ್ಲಿ ಶೇ.57.54, ಮಿಜೋರಾಂನಲ್ಲಿ ಶೇ.56.68, ನಾಗಾಲ್ಯಾಂಡ್ನಲ್ಲಿ ಶೇ.50.41, ಪುದುಚೇರಿಯಲ್ಲಿ ಶೇ.72.8 ಮತ್ತು ಸಿಕ್ಕಿಂನಲ್ಲಿ ಶೇ.67.95ರಷ್ಟು ಮತದಾನವಾಗಿದೆ.
ಮೊದಲ ಹಂತದಲ್ಲಿ 16.63 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದರು.. ಮೊದಲ ಹಂತದಲ್ಲಿ 35.67 ಲಕ್ಷ ಮೊದಲ ಬಾರಿಗೆ ಮತದಾರರು, 20-29 ವರ್ಷ ವಯಸ್ಸಿನ 3.51 ಕೋಟಿ ಯುವ ಮತದಾರರು ಇದ್ದರು. ಜೂನ್ 1 ರಂದು ಮುಕ್ತಾಯಗೊಳ್ಳಲಿರುವ ಚುನಾವಣೆಯ ಮತ ಎಣಿಕೆ ಜೂನ್ 4 ರಂದು ನಡೆಯಲಿದೆ.
ಕಣದಲ್ಲಿದ್ದ ಪ್ರಮುಖ ಸ್ಪರ್ಧಿಗಳು
ಮೊದಲ ಹಂತದಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಸರ್ಬಾನಂದ ಸೋನೊವಾಲ್, ಕಾಂಗ್ರೆಸ್ನ ಗೌರವ್ ಗೊಗೊಯ್ ಮತ್ತು ಡಿಎಂಕೆಯ ಕನಿಮೋಳಿ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.