Site icon Vistara News

A Raja controversy : ಭಾರತ ಒಂದು ದೇಶವೇ ಅಲ್ಲ, ರಾಮ ದೇವರೇ ಅಲ್ಲ ಎಂದ ಡಿಎಂಕೆ ಸಂಸದ ಎ. ರಾಜಾ

A Raja Controversy

ಚೆನ್ನೈ: ಸನಾತನ ಧರ್ಮ (Sanatana Dharma) ಮಲೇರಿಯಾ, ಡೆಂಗೆ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂಬ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್‌ (Udayanidhi stalin) ಎಲ್ಲ ಕಡೆಯಿಂದಲೂ ಉಗಿಸಿಕೊಂಡ ಬೆನ್ನಿಗೇ ಇನ್ನೊಬ್ಬ ಡಿಎಂಕೆ ನಾಯಕ, ಸಂಸದ ಎ. ರಾಜಾ (A Raja Controversy) ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಭಾರತ ಒಂದು ದೇಶವೇ ಅಲ್ಲ (India is not a nation), ತಮಿಳುನಾಡು ಒಂದು ಪ್ರತ್ಯೇಕ ದೇಶ ಎಂದೆಲ್ಲ ಹೇಳಿರುವ ಅವರು ರಾಮನನ್ನು ನಾವು ಒಪ್ಪಲ್ಲ, ಜೈ ಶ್ರೀ ರಾಮ್‌ ಘೋಷಣೆ ಸರಿಯಲ್ಲ (Wont Accept Jai Shriram) ಎಂದೆಲ್ಲ ಹೇಳಿದ್ದಾರೆ!

ಡ್ರಾವಿಡ ಮುನ್ನೇತ್ರ ಕಳಗಂ ನಾಯಕ ಮತ್ತು ನೀಲಗಿರಿ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವಿಡಿಯೊ ಬಹಿರಂಗಗೊಂಡಿದ್ದು, ಅದರಲ್ಲಿ ಎ. ರಾಜಾ ಅವರು ಮನಸಿಗೆ ತೋಚಿದಂತೆ ಮಾತನಾಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಇದನ್ನೂ ಓದಿ : Sanatana Dharma : ಸನಾತನ ಧರ್ಮದ ಅವಹೇಳನ ಮಾಡಿದ ಉದಯನಿಧಿ​ಗೆ ಕೋರ್ಟ್ ತಪರಾಕಿ

A Raja Controversy : ಹಾಗಿದ್ದರೆ ಎ ರಾಜಾ ಅವರು ಹೇಳಿದ್ದೇನು?

ಭಾರತ ಒಂದೇ ದೇಶವಲ್ಲ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ. ಭಾರತ ಯಾವತ್ತೂ ಒಂದು ದೇಶವಾಗಿರಲೇ ಇಲ್ಲ. ಒಂದು ದೇಶ ಎಂದರೆ ಒಂದು ಭಾಷೆ, ಒಂದು ಸಂಪ್ರದಾಯ, ಒಂದು ಸಂಸ್ಕೃತಿ ಇರಬೇಕು. ಹಾಗಿದ್ದಾಗ ಮಾತ್ರ ಅದೊಂದು ದೇಶವಾಗುತ್ತದೆ. ಭಾರತ ಒಂದು ದೇಶವಲ್ಲ, ಒಂದು ಉಪಖಂಡ.

ಇಲ್ಲಿ ತಮಿಳು ಅನ್ನುವುದು ಒಂದು ದೇಶ ಮತ್ತು ಒಂದು ರಾಷ್ಟ್ರ. ಮಲಯಾಳಂ ಎನ್ನುವುದ ಒಂದು ಭಾಷೆ, ಒಂದು ದೇಶ, ಒಂದು ರಾಷ್ಟ್ರ. ಒರಿಯಾ ಕೂಡಾ ಹಾಗೇನೇ. ಇದೆಲ್ಲ ದೇಶಗಳು ಸೇರಿ ಭಾರತ ಆಗುತ್ತದೆ. ಹೀಗಾಗಿ ಭಾರತ ಒಂದು ದೇಶವಲ್ಲ, ಒಂದು ಉಪಖಂಡ.

ನಮ್ಮಲ್ಲಿ ನೂರಾರು ಸಂಪ್ರದಾಯಗಳು ಮತ್ತು ಸಂಸ್ಕೃತಿಗಳಿವೆ. ನೀವು ತಮಿಳುನಾಡಿಗೆ ಬಂದರೆ ಅಲ್ಲೊಂದು ಸಂಸ್ಕೃತಿ ಇದೆ. ಕೇರಳಕ್ಕೆ ಹೋಗಿ ಅಲ್ಲೊಂದು ಸಂಸ್ಕೃತಿ ಇದೆ. ಒರಿಯಾದಲ್ಲಿ ಇನ್ನೊಂದು ಸಂಸ್ಕೃತಿ ಇದೆ.

ಆರ್‌ ಎಸ್.‌ ಭಾರತಿ ಅವರು ಹೇಳುವಂತೆ ಮಣಿಪುರದಲ್ಲಿ ಯಾಕೆ ನಾಯಿ ಮಾಂಸ ತಿನ್ನುತ್ತಾರೆ? ಹೌದು ಇದು ಸತ್ಯ ಅವರು ನಾಯಿ ಮಾಂಸ ತಿನ್ನುತ್ತಾರೆ. ಅದು ಅವರ ಸಂಸ್ಕೃತಿ. ಅದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲವೂ ನಮ್ಮ ಮನಸ್ಸಿನಲ್ಲಿದೆ.

ನೀರಿನ ಟ್ಯಾಂಕ್‌ನಿಂದ ನೀರು ಅಡುಗೆ ಮನೆಗೆ ಬರುತ್ತದೆ. ನಾವು ಅದನ್ನು ಅಡುಗೆ ಮನೆಯಲ್ಲಿ ಬಳಸುತ್ತೇವೆ. ಅದೇ ನೀರು ಟ್ಯಾಂಕ್‌ನಿಂದ ಟಾಯ್ಲೆಟ್‌ ಬರುತ್ತದೆ ಎಂದಿಟ್ಟುಕೊಳ್ಳಿ. ನಾವು ಅದನ್ನು ಅಲ್ಲಿಂದ ತಂದು ಅಡುಗೆಗೆ ಬಳಸುತ್ತೇವಾ? ಇದಕ್ಕೆ ಕಾರಣವೇನು? ನಮಗೆ ಸಮಸ್ಯೆ ಇರುವುದು ಮಾನಸಿಕವಾಗಿ. ನೀರು ಒಂದೇ.. ಆದರೆ, ಅದು ಎಲ್ಲಿಂದ ಬರುತ್ತದೆ ಎನ್ನುವುದಷ್ಟೇ ವ್ಯತ್ಯಾಸ. ನಾವು ಅದನ್ನು ಒಪ್ಪಿಕೊಂಡಿದ್ದೇವೆ. ಹಾಗೆಯೇ ಕಾಶ್ಮೀರಕ್ಕೆ ಅದರದ್ದೇ ಆದ ಒಂದು ಸಂಸ್ಕೃತಿ ಇದೆ. ಅದನ್ನು ಒಪ್ಪಿಕೊಳ್ಳಿ. ಮಣಿಪುರದಲ್ಲಿ ಜನರು ನಾಯಿ ಮಾಂಸ ತಿನ್ನುತ್ತಾರೆ, ಅದನ್ನು ಒಪ್ಪಿಕೊಳ್ಳಿ. ಒಂದು ಸಮುದಾಯ ದನದ ಮಾಂಸ ತಿನ್ನುತ್ತದೆ ಎಂದರೆ ನಿಮಗೇನು ಸಮಸ್ಯೆ? ಅವರೇನು ನೀವೂ ತಿನ್ನಿ ಎಂದು ಒತ್ತಾಯ ಮಾಡಿದರಾ.? ಹೀಗಾಗಿ ‌ ವೈವಿಧ್ಯತೆಯಲ್ಲಿರುವ ಏಕತೆ ಇದು. ನಮ್ಮ ಮಧ್ಯೆ ನಾನಾ ಭಿನ್ನ ಸಂಸ್ಕೃತಿಗಳಿವೆ. ಅದನ್ನು ಒಪ್ಪಿಕೊಳ್ಳಿ.

ನಾವು ರಾಮನನ್ನೇ ಒಪ್ಪುವುದಿಲ್ಲ. ಹೀಗಾಗಿ ಜೈ ಶ್ರೀರಾಮ್‌ ಎನ್ನುವುದನ್ನು ಸ್ವೀಕರಿಸುವುದಿಲ್ಲ. ನಾವು ಭಾರತ್‌ ಮಾತಾ ಕೀ ಜೈ ಎನ್ನುವುದನ್ನು ಒಪ್ಪುವುದಿಲ್ಲ – ಹೀಗೆಂದು ಎ ರಾಜಾ ಅವರು ಸಮಾರಂಭವೊಂದರಲ್ಲಿ ಹೇಳಿದ್ದಾರೆ.

ಎ. ರಾಜಾ ಹೇಳಿಕೆಗೆ ಬಿಜೆಪಿ ಆಕ್ರೋಶ

ಈ ನಡುವೆ, ಎ. ರಾಜಾ ಅವರ ರಾಷ್ಟ್ರ ವಿರೋಧ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ ಮತ್ತು ಈ ಹೇಳಿಕೆಗಳ ಬಗ್ಗೆ ಕಾಂಗ್ರೆಸ್‌ ನಾಯಕರಾಗಿರುವ ರಾಹುಲ್‌ ಗಾಂಧಿ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾಗಿರುವ ಅಮಿತ್‌ ಮಾಳವೀಯ ಅವರು ಟ್ವೀಟ್‌ ಮಾಡಿ ಡಿಎಂಕೆ ನಾಯಕ ದ್ವೇಷ ಭಾಷಣಗಳು ಮುಂದುವರಿದಿವೆ ಎಂದಿದ್ದಾರೆ. ಹಿಂದೆ ಉದಯನಿಧಿ ಸ್ಟಾಲಿನ್‌ ಅವರು ಸನಾತನ ಧರ್ಮ ಎನ್ನುವುದು ಡೆಂಗೆ, ಮಲೇರಿಯಾ ಇದ್ದ ಹಾಗೆ, ಅದನ್ನು ನಿರ್ಮೂಲನ ಮಾಡಬೇಕು ಎಂದರು. ಈಗ ರಾಜಾ ಅವರು ಭಾರತ ದೇಶವೇ ಅಲ್ಲ ಎನ್ನುತ್ತಿದ್ದಾರೆ. ಇವರೆಲ್ಲ ಇಂಡಿಯಾ ಕೂಟದ ಸದಸ್ಯರು. ಇವರ ಹೇಳಿಕೆಗೆ ರಾಹುಲ್‌ ಗಾಂಧಿ ಏನು ಹೇಳುತ್ತಾರೆ ಎಂದು ಕೇಳಿದ್ದಾರೆ.

Exit mobile version