Site icon Vistara News

ʼವಿಶ್ವ ಗುರುವಾಗುವʼ ಎನ್ನುವುದು ʼಮನೋವಿಕೃತಿʼ: ʼವಿಶ್ವ ಮಾನವರಾಗುವʼ ಎಂದ ಚಿತ್ರನಟ ಕಿಶೋರ್‌

Actor Kishore tweet over hindutva

ಬೆಂಗಳೂರು: ಕಾಂತಾರ ಸಿನಿಮಾ ನಂತರ ಹಿಂದುತ್ವ, ಮೂಲನಿವಾಸಿ ಚರ್ಚೆಗಳು ನಡೆದಿರುವಾಗಲೇ ಕಾಂತಾರ ಚಲನಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿರುವ ನಟ ಕಿಶೋರ್‌ ಮಾಡಿರುವ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಇದೀಗ ಮತ್ತೊಂದು ಚರ್ಚೆಯನ್ನು ಹುಟ್ಟುಹಾಕಿದೆ.

ರಿಷಭ್‌ ಶೆಟ್ಟಿ ನಟನೆಯ ಕಾಂತಾರ ಸಿನಿಮಾದಲ್ಲಿ ಅರಣ್ಯ ಅಧಿಕಾರಿಯಾಗಿ ಕಿಶೋರ್‌ ನಟಿಸಿದ್ದಾರೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಚಿತ್ರವನ್ನು ಕಿಶೋರ್‌ ಅಪ್‌ಲೋಡ್‌ ಮಾಡಿದ್ದಾರೆ.

ಚಿತ್ರದಲ್ಲಿ I Am a Global Citizen ಎನ್ನುವುದೂ ಸೇರಿ ಅನೇಕ ಬರಹಗಳನ್ನು ಒಳಗೊಂಡಿದ್ದು, ವ್ಯಕ್ತಿಯೊಬ್ಬ ದೋಣಿಯಲ್ಲಿ ಸಂಚರಿಸುತ್ತಿದ್ದಾನೆ.

‘ವಿಶ್ವಗುರು’ವಾಗುವ ಬದಲು ‘ವಿಶ್ವಮಾನವ’ರಾಗುವ ಎಂದು ತಲೆಬರಹದಲ್ಲಿ ಕೆಲವು ವಾಕ್ಯಗಳನ್ನು ಬರೆದಿದ್ದಾರೆ. “ವಿಶ್ವಗುರುವಾಗಲು ಎಲ್ಲರನ್ನೂ ತುಳಿದು ಹಿಂದೂಡಿ ಮುಂದೆ ಹೋಗಿ ಇನ್ನೊಬ್ಬರ ಸೋಲಿನಲ್ಲಿ ಸಂಭ್ರಮಿಸುವುದು ಕ್ರೌರ್ಯ ಮತ್ತು ಕ್ರೌರ್ಯದ ದಲ್ಲಾಳಿಗಳು ಪ್ರತಿಪಾದಿಸುವ ಅಸಾಧ್ಯ , ಅಶಾಶ್ವತ ಮನೋವಿಕೃತಿ” ಎಂದಿದ್ದಾರೆ.

ಮುಂದುವರಿದು, “ಸಕಲ ವೈವಿಧ್ಯತೆಯನ್ನು ಉಳಿಸಿಕೊಳ್ಳುವ, ಆ ವಿವಿಧತೆಯಲ್ಲೂ ಒಂದಾಗಿ ಬದುಕುವ ಶಾಂತಿ ಸೌಹಾರ್ದದ ಭಾರತೀಯತೆಯ ಸಾರ್ಥಕತೆಯಲ್ಲಿ ನಾವಾಗಲೇ ವಿಶ್ವಕ್ಕೆ ಮಾದರಿ. ಎಲ್ಲರಿಗಿಂತ ನಾನು ದೊಡ್ಡವನಾಗುವುದಕ್ಕಿಂತ ಎಲ್ಲರೊಳಗೆ ನಾನು ಆಗುವುದು ನಿಜವಾಗಿ ವಸುದೈವ ಕುಟುಂಬಕಂನ ಹಿಂದೂ ಧರ್ಮದ ಮೂಲಸಾರ. ಆ ಸತ್ಯವನ್ನು ಅರಿಯುವ, ಮೆರೆಯುವ. ಇಡೀ ವಿಶ್ವವನ್ನು ಜೋಡಿಸುವ. ನಾಳೆಯನ್ನು ಹಸನಾಗಿಸುವ” ಎಂದಿದ್ದಾರೆ,ʼ

ಇಂಗ್ಲಿಷ್‌ನಲ್ಲೂ ಬರೆದುಕೊಂಡಿರುವ ಕಿಶೋರ್‌, Instead of becoming a ‘Vishwa guru’ ( World leader) , Let us become ‘Vishwa manavas’. (World citizens) ‘ The idea of becoming Vishwa Guru’ by pushing everyone behind and celebrating in someone’s defeat is cruel, impossible and an impermanent psychosis advocated by the brokers of hatred..
We are already a model to the world in the sense of Indianness which advocates peace and harmony, which preserves all diversity and lives as one even in all that diversity.
Rather than trying to grow bigger than everyone else, becoming one with everyone is truly the essence of Vasudaiva Kutumbakam and Hinduism. Let’s realise & celebrate the true Indianness and unite the world for a better tomorrow ಎಂದಿದ್ದಾರೆ.

ಭಾರತ ವಿಶ್ವಗುರುವಾಗಬೇಕು ಎಂದು ಸಾಮಾನ್ಯವಾಗಿ ಆರ್‌ಎಸ್‌ಎಸ್‌ ಮುಖಂಡರು, ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಖ ಬಿಜೆಪಿ ನಾಯಕರು ಆಗಿಂದಾಗ್ಗೆ ಉಪಯೋಗಿಸುತ್ತಿರುತ್ತಾರೆ. ಈ ಪೋಸ್ಟ್‌ ಮೂಲಕ ನಟ ಕಿಶೋರ್‌ ಅವರೆಲ್ಲರನ್ನೂ ವಿರೋಧಿಸಿದ್ದಾರೆಯೇ ಎಂಬ ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ | Kantara Movie | ನಟ ಚೇತನ್‌ ಮೇಲೆ ಮತ್ತೊಂದು ಕೇಸ್‌; ಭೂತಕೋಲ ಹಿಂದು ಸಂಸ್ಕೃತಿಯಲ್ಲವೆಂದಿದ್ದಕ್ಕೆ ವಿರೋಧ

Exit mobile version