Site icon Vistara News

Administrative Reforms : ಮಕ್ಕಳಿಗೆ 5 ಮೊಟ್ಟೆ, ಸರ್ಕಾರಿ ವೈದ್ಯರ ಖಾಸಗಿ ʼಸೇವೆʼ ಬಂದ್‌, KPSC ಸದಸ್ಯರ ಕಡಿತ: ಆಡಳಿತ ಸುಧಾರಣಾ ವರದಿ ಶಿಫಾರಸು

#image_title

ಬೆಂಗಳೂರು: ಕರ್ನಾಟಕ ಸರ್ಕಾರದ ಆಡಳಿತ ಸುಧಾರಣೆ ಮಾಡಲು ಸರ್ಕಾರ ನೇಮಿಸಿದ್ದ ಸಮಿತಿಯು 1,609 ಶಿಫಾರಸುಗಳನ್ನು ಶುಕ್ರವಾರ ಸಲ್ಲಿಕೆ ಮಾಡಿದ್ದು, ಪೌಷ್ಠಿಕಾಂಶ ಕಡಿಮೆ ಇರುವ ಮಕ್ಕಳಿಗೆ ಈಗ ನೀಡುತ್ತಿರುವ ವಾರಕ್ಕೆ ಎರಡು ಮೊಟ್ಟೆಯನ್ನು ಐದಕ್ಕೆ ಹೆಚ್ಚಿಸಲು ಶಿಫಾರಸು ಮಾಡಿದೆ.

ಸರ್ಕಾರಿ ಸೇವೆಯಲ್ಲಿರುವ ವೈದ್ಯರು ಖಾಸಗಿಯಲ್ಲೂ ಕೆಲಸ ಮಾಡುವುದಕ್ಕೆ ಸಂಪೂರ್ಣ ಬ್ರೇಕ್‌ ಹಾಕಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಜೆ ಒಪಿಡಿ ತೆರೆಯಬಹುದು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆಯನ್ನು 14ರಿಂದ 8 ಕ್ಕೆ ಇಳಿಸಬಹುದು ಎಂಬುದು ಸೇರಿ ಅನೇಕ ಶಿಫಾರಸುಗಳನ್ನು ಟಿ.ಎಂ. ವಿಜಯ ಭಾಸ್ಕರ್‌ ಅವರ ಅಧ್ಯಕ್ಷತೆಯ ಆಯೋಗ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೀಡಿದೆ.

ಪ್ರಮುಖ ಶಿಫಾರಸುಗಳು ಈ ಕೆಳಕಂಡಂತಿವೆ

  1. ಲೋಕಸೇವಾ ಆಯೋಗಗಳ ಪೈಕಿ ಕೇರಳ ರಾಜ್ಯವು ಜಿಲ್ಲಾ ಮಟ್ಟದ ಪ್ರಾದೇಶಿಕ ಕಚೇರಿಗಳನ್ನು ಹೊಂದಿದ್ದು ಇದನ್ನು ಹೊರತುಪಡಿಸಿ, ಉತ್ತರ ಪ್ರದೇಶವೂ ಸೇರಿದಂತೆ ಇತರ ರಾಜ್ಯಗಳಲ್ಲಿ ಸದಸ್ಯರ ಸಂಖ್ಯೆ 8 ಅಥವಾ ಅದಕ್ಕಿಂತ ಕಡಿಮೆ ಇರುತ್ತಾರೆ. ಆದುದರಿಂದ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಸೇರಿದಂತೆ ಸದಸ್ಯರ ಸಂಖ್ಯೆಯನ್ನು 14 ರಿಂದ 8 ಕ್ಕೆ ಇಳಿಸಲು ಶಿಫಾರಸು ಮಾಡಲಾಗಿದೆ.
  2. ನೇಮಕಾತಿಗೆ ಮೊದಲು ಆಯೋಗವು ದಾಖಲಾತಿಗಳ ನೈಜತೆಯನ್ನು ಪರಿಶೀಲನೆ ಮಾಡುವುದನ್ನು ಕೈಬಿಟ್ಟು ಸಂಬಂಧಿಸಿದ ಇಲಾಖೆಗಳು ದಾಖಲೆಗಳ ನೈಜತೆ ಪರಿಶೀಲನೆ ಮಾಡುವುದರಿಂದ ಆಯ್ಕೆಯನ್ನು ತ್ವರಿತಗೊಳಿಸಬಹುದು.
  3. ಉದ್ಯೋಗ ಸೇವಾ ಇಲಾಖೆಯಯನ್ನು ಕೌಶಲ್ಕರ್ ಮಿಷನ್‌ನೊಂದಿಗೆ ವಿಲೀನಗೊಳಿಸಬಹುದು. ಉದ್ಯೋಗ ಸೇವಾ ಇಲಾಖೆಯ ಸಿಬ್ಬಂದಿ ಮತ್ತು ಮೂಲ ಸೌಕರ್ಯಗಳನ್ನು ರಾಜ್ಯ ಕೌಶಲ್ಯ ಮಿಷನ್‌ನೊಂದಿಗೆ ವಿಲೀನಗೊಳಿಸಬಹುದು ಮತ್ತು ಅದನ್ನು ರಾಜ್ಯ ಕೌಶಲ್ಯ ಮತ್ತು ಉದ್ಯೋಗ ಮಿಷನ್ ಎಂದು ಮರುನಾಮಕರಣ ಮಾಡಬಹುದು. ಇದಕ್ಕೆ ಅನುಗುಣವಾಗಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಪದನಾಮದಲ್ಲಿ ಉದ್ಯೋಗ ಎಂಬ ಪದವನ್ನು ತೆಗೆದುಹಾಕಿ ಕೈಗಾರಿಕಾ ತರಬೇತಿ ಇಲಾಖೆ’ ಎಂದು ಮರುನಾಮಕರಣ ಮಾಡಬಹುದು.
  4. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿರ್ದೇಶನಾಲಯವನ್ನು ಪ್ರತ್ಯೇಕಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ. ಎರಡು ಪ್ರತ್ಯೇಕ ನಿರ್ದೇಶನಾಲಯಗಳಾಗಿ ವಿಭಜಿಸಬಹುದು ಒಂದು ಮಕ್ಕಳ ಅಭಿವೃದ್ಧಿ ಮತ್ತು ಇನ್ನೊಂದು ಮಹಿಳಾ ಸಬಲೀಕರಣ ಮತ್ತು ಅಭಿವೃದ್ಧಿಗಾಗಿ ಮತ್ತೊಂದು ಇಲಾಖೆ ಸೃಜಿಸಬಹುದು.
  5. ಕುಟುಂಬ ಹಾಗೂ ಫ್ರೂಟ್ಸ್‌ ದತ್ತಾಂಶವಿರುವುದರಿಂದ ಅನೇಕ ದಾಖಲೆಗಳನ್ನು ಅರ್ಜಿದಾರರಿಂದ ಕೇಳಬೇಕಾಗಿಲ್ಲ. ಇಂತಹ ದಾಖಲೆಗಳನ್ನು ಕೇಳುವುದನ್ನು ಸಂಬಂಧಿತ ಮಾರ್ಗಸೂಚಿಗಳು, ಸರ್ಕಾರಿ ಆದೇಶಗಳು, ಅರ್ಜಿ ನಮೂನೆಗಳು, ಪರಿಶೀಲನಾ ಪಟ್ಟಿಗಳು (ಚೆಕ್ ಲಿಸ್ಟ್), ಸುತ್ತೋಲೆಗಳು ಇತ್ಯಾದಿಗಳಿಂದ ತೆಗೆದುಹಾಕಬಹುದು. ಉದಾ. ಪಿಎಂಕೆಎಸ್‌ವೈ (ಎಂಐ) ಯೋಜನೆ ಅರ್ಜಿದಾರರು ತೋಟಗಾರಿಕೆ ಇಲಾಖೆಗೆ 3 ಸೆಟ್‌ಗಳಲ್ಲಿ 31 ದಾಖಲೆಗಳನ್ನು (ಖಜಾನೆ, ಆರ್‌ಎಸ್‌ ಮತ್ತು ಸಹಾಯಕ ನಿರ್ದೇಶಕರ ಕಚೇರಿಗೆ ಒದಗಿಸಬೇಕು. ವರದಿಯಲ್ಲಿ ಪ್ರತಿ ಇಲಾಖೆಯಡಿ ಯೋಜನೆಗಳಿಂದ ಕೈಬಿಡಬಹುದಾದ ದಾಖಲೆಗಳ ಪಟ್ಟಿ ನೀಡಲಾಗಿದೆ.
  6. ಗ್ರಾಮೀಣ ವ್ಯಾಸಂಗ ಪ್ರಮಾಣಪತ್ರ, ಕನ್ನಡ ಮಾಧ್ಯಮ ಪ್ರಮಾಣಪತ್ರ ಮತ್ತು ಹೆಚ್ಚ (ಹೈದ್ರಾಬಾದ್ ಕರ್ನಾಟಕ) ನಿವಾಸ ಪ್ರಮಾಣಪತ್ರ, ಹೆಚ್ಚಕೆ ಅರ್ಹತಾ ಪ್ರಮಾಣಪತ್ರದ ಸಿಂಧುತ್ವವನ್ನು ಪ.ಜಾತಿ ಮತ್ತು ಪ.ಪಂ. ಪ್ರಮಾಣ ಪತ್ರಗಳಂತೆ ಜೀವಿತಾವಧಿಯವರೆಗೆ ಅಥವಾ ಸಿಂಧುತ್ವ ರದ್ದುಗೊಳಿಸುವವರೆಗೆ ವಿಸ್ತರಿಸಬಹುದು.
  7. ಅಂಗನವಾಡಿ, ಶೌಚಾಲಯ ನಿರ್ವಹಣೆ ಮತ್ತು ಶುಚಿಗೊಳಿಸುವಿಕೆ ಗುಡಿಸಲು ಉಪಯೋಗಿಸುವ ವಸ್ತುಗಳಿಗೆ ತಿಂಗಳಿಗೆ ರೂ.83 (ವರ್ಷಕ್ಕೆ ರೂ.1000/-) ನೀಡಲಾಗುತ್ತಿದ್ದು, ಅದನ್ನು ತಿಂಗಳಿಗೆ ರೂ.200ಕ್ಕೆ ಹೆಚ್ಚಿಸಬಹುದು.
  8. ಶಾಲಾ ಶುಚಿಗೊಳಿಸುವ ಶುಲ್ಕವನ್ನು ವಿದ್ಯಾರ್ಥಿಗಳ ಸಂಖ್ಯಾಬಲದ ಆಧಾರದ ಮೇಲೆ ಹೆಚ್ಚಿಸಬಹುದು. ಪ್ರೌಢಶಾಲೆಗಳಿಗೆ ವಾರ್ಷಿಕ ರೂ.9,000/- ಹೆಚ್ ಪಿಎಸ್‌ಗೆ ರೂ.8,000 ಮತ್ತು ಎಲ್‌ಪಿಎಸ್‌ಗೆ ರೂ.6,500 ಗಳಂತೆ ನೀಡುವ ಅನುದಾನ ಹೆಚ್ಚಿಸಿ; 1-30 ವಿದ್ಯಾರ್ಥಿಗಳ ಸಂಖ್ಯಾ ಬಲಕ್ಕೆ ಮಾಸಿಕ ರೂ.1000, 31-100 ವಿದ್ಯಾರ್ಥಿಗಳ ಸಂಖ್ಯಾ ಬಲಕ್ಕೆ ಮಾಸಿಕ ರು.2000, 101–250 ಕ್ಕೆ ಮಾಸಿಕ ರೂ.3000, 251-1000ಕ್ಕೆ ಮಾಸಿಕ ರೂ.4000 ಮತ್ತು 1000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಮಾಸಿಕ ರೂ.5000/- ಕ್ಕೆ ಪರಿಷ್ಕರಿಸಬಹುದು.
  9. ಶಾಲಾ ಅನುದಾನವನ್ನು ದ್ವಿಗುಣಗೊಳಿಸಿ ಸಣ್ಣ ಶಾಲೆಗಳಿಗೆ ವಾರ್ಷಿಕ ರೂ.20,000, 31-100 ವಿದ್ಯಾರ್ಥಿಗಳಿರುವ ಶಾಲೆಗಳಿಗೆ ರೂ.50,000, 101-250 ವಿದ್ಯಾರ್ಥಿಗಳಿರುವ ಶಾಲೆಗಳಿಗೆ ರೂ.1 ಲಕ್ಷ, 251-1000 ಇರುವ ಶಾಲೆಗಳಿಗೆ ರೂ.1.50 ಲಕ್ಷ, 1000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ವಾರ್ಷಿಕ ರೂ.2 ಲಕ್ಷಗಳನ್ನು ರಾಜ್ಯ ಆಯವ್ಯಯದಿಂದ ಪೂರಕವಾಗಿ ನೀಡಬಹುದು.
  10. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿರುವ ಆರೋಗ್ಯ ರಕ್ಷಾ ಸಮಿತಿ (ARS) ಮಾದರಿಯಲ್ಲಿ ಪ್ರಾಣಿ ವೈದ್ಯ ಸಮಿತಿಗಳು ಅಥವಾ ಪ್ರಾಣಿ ಆರೋಗ್ಯ ರಕ್ಷಾ ಸಮಿತಿಗಳನ್ನು ಪ್ರತಿ ಪ್ರಾಥಮಿಕ ಪಶುವೈದ್ಯ ಕೇಂದ್ರಗಳಿಗೆ, ಪಶುವೈದ್ಯ ಚಿಕಿತ್ಸಾಲಯಗಳಿಗೆ, ತಾಲೂಕು ಪಶುವೈದ್ಯ ಆಸ್ಪತ್ರೆ ಮತ್ತು ಪಶುವೈದ್ಯ ಪಾಲಿಕ್ಲಿನಿಕ್‌ಗಳಿಗೆ ಸ್ಥಾಪಿಸಬಹುದು. 9. ತ್ವರಿತವಾಗಿ ಕರಡು ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮಸೂದೆ 2020 ನ್ನು ಅಂತಿಮಗೊಳಿಸಬಹುದು.
  11. ಸುಮಾರು 5 ರಾಜ್ಯಗಳು, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಪುದುಚೇರಿಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ NRI ಕೋಟಾವನ್ನು ಒದಗಿಸುತ್ತವೆ. ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.5 ರಿಂದ ಶೇ.10 ರಷ್ಟು NRI ಕೋಟಾವನ್ನು ಸೃಜಿಸಬಹುದು. ಅವರಿಗೆ ಹೆಚ್ಚಿನ ಶುಲ್ಕವನ್ನು ವಿಧಿಸಬಹುದು. ಆಯಾ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ಅಭಿವೃದ್ಧಿಗಾಗಿ ಈ ಮೊತ್ತವನ್ನು ಬಳಸಬಹುದು.
  12. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಕ್ರೀಡಾ ಪ್ರಾಧಿಕಾರ ಹಾಗೂ ಜಿಲ್ಲಾ ಕ್ರೀಡಾಭಿವೃದ್ಧಿ ನಿಧಿಯನ್ನು ಸಿಎಸ್‌ಆರ್ ಫಂಡ್‌ನ್ನು ಸಂಗ್ರಹಿಸಲು ಮತ್ತು ಕ್ರೀಡೆಗಳನ್ನು ಅಭಿವೃದ್ಧಿಪಡಿಸಲು ಸ್ಥಾಪಿಸುವುದು.
  13. ತಾಯಂದಿರ ಮರಣ ಪ್ರಮಾಣ (ಎಂಎಂಆರ್), ಶಿಶು ಮರಣ ಪ್ರಮಾಣ (ಐಎಂಆರ್)ವನ್ನು ಕಡಿಮೆ ಮಾಡುವುದು ಮತ್ತು ಪೌಷ್ಟಿಕಾಂಶದ ಮಟ್ಟವನ್ನು ಸುಧಾರಿಸುವುದು
  14. ಆರು ತಿಂಗಳಿಂದ 3 ವರ್ಷ ವಯಸ್ಸಿನ ತೀವ್ರ ಅಪೌಷ್ಠಿಕತೆ (SAM) ಮತ್ತು ಸಾಧಾರಣ ಅಪೌಷ್ಠಿಕತೆ (MAM) ಯಿಂದ ಬಳಲುತ್ತಿರುವ ಮಕ್ಕಳಿಗೆ ಈಗ ವಾರಕ್ಕೆ 2 ಮೊಟ್ಟೆಗಳನ್ನು ನೀಡುತ್ತಿದ್ದು ಇದನ್ನು 5 ಮೊಟ್ಟೆಗಳಿಗೆ ಹೆಚ್ಚಿಸಬಹುದು ಮತ್ತು ಸಾಮಾನ್ಯ ಮಕ್ಕಳಿಗೂ ಸಹ ವಾರಕ್ಕೆ 2 ಮೊಟ್ಟೆಗಳನ್ನು ನೀಡಬಹುದು.
  15. ಎಲ್ಲಾ ಜಿಲ್ಲೆಗಳಲ್ಲಿ 15 ರಿಂದ 18 ವರ್ಷ ವಯಸ್ಸಿನ ಶಾಲೆಯಿಂದ ಹೊರಗುಳಿದ ಬಾಲಕಿಯರಿಗೆ ರಾಜ್ಯ ಅನುದಾನದೊಂದಿಗೆ ಅಡೋಲಿಸೆಂಟ್ ಬಾಲಕಿಯರ ಯೋಜನೆಯನ್ನು ವಿಸ್ತರಣೆ ಮಾಡಬಹುದು. ಒಟ್ಟು ಶಾಲೆಯಿಂದ ಹೊರಗುಳಿದ ಈ ವಯೋಮಿತಿಯ ಹೆಣ್ಣುಮಕ್ಕಳ ಸಂಖ್ಯೆ ಸುಮಾರು 7.50 ಲಕ್ಷಗಳ ಪೈಕಿ ಗ್ರಾಮೀಣ ಪ್ರದೇಶದ ಸುಮಾರು 4.50 ಲಕ್ಷ ಮತ್ತು ನಗರ ಪ್ರದೇಶದ 1.50 ಲಕ್ಷ ಹೆಣ್ಣುಮಕ್ಕಳಿಗೆ ಗುರಿ ನಿಗದಿಪಡಿಸಿದರೆ ಆರ್ಥಿಕ ಹೊರೆ ವಾರ್ಷಿಕವಾಗಿ ಸುಮಾರು ರೂ 3,000 ಕೋಟಿಗಳಾಗುತ್ತವೆ.
  16. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಸಾಮಾನ್ಯ ವಿಂಗಡಿಸುವ ಕೇಂದ್ರವನ್ನು ಒಪಿಡಿ ಕೌಂಟರ್‌ಗಳಲ್ಲಿ ಸ್ಥಾಪಿಸಿ ರೆಫರಲ್ ಮತ್ತು ಇ-ಹಾಸ್ಪಿಟಲ್‌ಗಳಲ್ಲಿ ಮಾಹಿತಿಯನ್ನು ನಮೂದಿಸಲು ಎಂಬಿಬಿಎಸ್, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಇಂಟೆರ್ನ್‌ಗಳನ್ನು ಬಳಸಬಹುದು. ಇಂಟೆರ್ನ್‌ಗಳು ಮತ್ತು ಆರೋಗ್ಯ ಮಿತ್ರರಿಗೆ ಟ್ಯಾಬ್‌ಗಳನ್ನು ನೀಡುವ ಮೂಲಕ ಸ್ಥಳದಲ್ಲೇ ನೋಂದಣಿ, ಪಾವತಿ ಮತ್ತು ಒಪಿಡಿ ಸ್ಲಿಪ್‌ಗಳನ್ನು ವಿತರಣೆ ಮಾಡಬಹುದು. ಇದಕ್ಕಾಗಿ ಕಿಯೋಸ್ಕ್‌ಗಳು ಮತ್ತು ಯುಪಿಐ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು. ಸಹಾಯಕ್ಕಾಗಿ ಕನ್ನಡದಲ್ಲಿ ಸೈನೇಜ್ ಫಲಕಗಳನ್ನು ಅಳವಡಿಸಬೇಕು.
  17. ಕೇಂದ್ರ ಸರ್ಕಾರದ ವೈದ್ಯಕೀಯ ಸಂಸ್ಥೆಗಳು ಮತ್ತು ಸಿಜಿಹೆಚ್‌ಎಸ್ ನಲ್ಲಿರುವಂತೆ, ಎಲ್ಲಾ ಇಲಾಖೆಗಳ ಸರ್ಕಾರಿ ವೈದ್ಯರ ಖಾಸಗಿ ವೃತ್ತಿ(private practice)ಯನ್ನು ನಿಷೇಧಿಸಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಜೆ ಒಪಿಡಿಗಳನ್ನು ಸಹ ಪ್ರಾರಂಭಿಸಬಹುದು.
Exit mobile version