ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ (Karnataka Assembly Elections) ಸೋಲಿನ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಜನತಾಪಕ್ಷ (Karnataka BJP) ದೊಡ್ಡ ಮಟ್ಟದಲ್ಲಿ ಎದ್ದುನಿಂತಿದೆ. ಒಂದು ಕಡೆ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಿ (Corrupt Congress) ಎಂದು ಆರೋಪಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ (Protest in State) ನಡೆಸುತ್ತಿದೆ, ಇನ್ನೊಂದು ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಪೋಸ್ಟರ್‌ಗಳನ್ನು (Posters in Social Media) ಹಾಕುತ್ತಾ ಬಗೆಬಗೆಯಾಗಿ ದಾಳಿ ನಡೆಸುತ್ತಿದೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಐಟಿ ದಾಳಿಯಲ್ಲಿ 87 ಕೋಟಿ ರೂ. ಅಕ್ರಮ ಹಣ ಪತ್ತೆಯಾಗಿರುವುದನ್ನು ಬಿಜೆಪಿ ದೊಡ್ಡದೊಂದು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಯಾವ ಭ್ರಷ್ಟಾಚಾರ, ಪರ್ಸಂಟೇಜ್ ವ್ಯವಹಾರದ ಆರೋಪ ಮಾಡಿ ಬಿಜೆಪಿ ವಿರುದ್ಧ ಕಾಂಗ್ರೆಸ್ ದೊಡ್ಡ ಹೋರಾಟವನ್ನು ಸಂಗ್ರಹಿಸಿ ಗೆಲ್ಲುವ ಶಕ್ತಿ ತೋರಿತೋ, ಬಿಜೆಪಿ ಈಗ ಅದನ್ನೇ ಬಳಸಿಕೊಳ್ಳುತ್ತಿದೆ.
ಐಟಿ ದಾಳಿಯಲ್ಲಿ ಸಿಕ್ಕಿರುವ ಹಣ ಪಂಚ ರಾಜ್ಯ ಚುನಾವಣೆಗಾಗಿ ರಾಜ್ಯದಿಂದ ಆಯಾ ರಾಜ್ಯಗಳಿಗೆ ಕೊಡಲು ಸಂಗ್ರಹಿಸಲಾಗಿರುವ ಮೊತ್ತ ಎನ್ನುವುದು ಬಿಜೆಪಿ ಆರೋಪ. ಕಾಂಗ್ರೆಸ್ ಹೈಕಮಾಂಡ್ ರಾಜ್ಯವನ್ನು ತನ್ನ ಎಟಿಎಂ (ATM Sarkara) ಆಗಿ ಮಾಡಿಕೊಳ್ಳಲಿದೆ ಎಂದು ಮೊದಲೇ ಆರೋಪಿಸಿದ್ದ ಅದು ಈಗ ಮತ್ತೆ ಅದನ್ನು ನೆನಪಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್‌ನ ದೊಡ್ಡ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಕಲೆಕ್ಷನ್ ಮಾಸ್ಟರ್ಸ್ (ಸಿಎಂ) ಎಂದು ಕರೆದಿರುವ ಬಿಜೆಪಿ ರಾಹುಲ್ ಗಾಂಧಿ ಅವರನ್ನೂ ಸ್ಕ್ಯಾಮ್ 2023ಯ ಹೀರೋ ಎಂಬಂತೆ ಬಿಂಬಿಸಿದೆ. ಕಾಂಗ್ರೆಸ್ ಭಾಗ್ಯ ಹೆಸರಿನಲ್ಲಿ ಹಣದ ಹೊಳೆಯನ್ನೇ ಹರಿಸಲಾಗುತ್ತಿದೆ ಎಂದಿರುವ ಬಿಜೆಪಿ, ATM ಸರ್ಕಾರ ಅಂತ ಟೈಟಲ್ ನೀಡಿ ಪೋಸ್ಟರ್ ಬಿಡುಗಡೆ ಮಾಡಿದೆ.
ಸ್ಕ್ಯಾಮ್ 2023 ಎಂದ ಬಿಜೆಪಿ, ರಾಹುಲ್ ನಾಯಕ
ಷೇರು ದಲ್ಲಾಳಿ ಹರ್ಷದ್ ಮೆಹ್ತಾ ನಡೆಸಿದ ಷೇರು ಹಗರಣವನ್ನು ಆಧರಿಸಿದ ಸ್ಕ್ಯಾಮ್ 1992 ವೆಬ್ ಸೀರಿಸ್ ಭಾರಿ ಜನಪ್ರಿಯವಾಗಿದೆ. ಅಂತೆಯೇ ಸ್ಕ್ಯಾಮ್ 2003 ಕೂಡಾ ಗಮನ ಸೆಳೆದಿದೆ. ಅದೇ ಮಾದರಿಯಲ್ಲಿ ಸ್ಕ್ಯಾಮ್ 2023 ಎಂದು ಬಿಜೆಪಿ ಪೋಸ್ಟರ್ ಬಿಡುಗಡೆ ಮಾಡಿದೆ. ಇದರಲ್ಲಿ ರಾಹುಲ್ ಗಾಂಧಿಗೆ ಸೂಟ್ ಹಾಕಿಸಲಾಗಿದೆ. ಜತೆಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕೂಡಾ ಇದ್ದಾಋೆ.
ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ COLLECTION MASTERS
ಸಮಗ್ರ ಭ್ರಷ್ಟಾಚಾರಕ್ಕಾಗಿ ವಿಧಾನಸೌಧವನ್ನು ಭ್ರಷ್ಟಾಚಾರದ ಹೆಡ್ ಆಫೀಸ್ ಮಾಡಿಕೊಂಡು ಪಂಚರಾಜ್ಯ ಚುನಾವಣೆಗೆ ಭರಪೂರ ಫಂಡಿಂಗ್ ಮಾಡುವ ಹೊಣೆ ಹೊತ್ತಿರುವ ಕರ್ನಾಟಕದ ಕಲೆಕ್ಷನ್ ಮಾಸ್ಟರ್ಸ್ ಇವರೇ ಎಂದು ದುಡ್ಡಿನಿಂದಲೇ ಚಿತ್ರಿಸಲಾಗಿರುವ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಫೋಟೊಗಳನ್ನು ಹಾಕಲಾಗಿದೆ.
ಸಮಗ್ರ ಭ್ರಷ್ಟಾಚಾರಕ್ಕಾಗಿ ವಿಧಾನಸೌಧವನ್ನು ಭ್ರಷ್ಟಾಚಾರದ ಹೆಡ್ ಆಫೀಸ್ ಮಾಡಿಕೊಂಡು ಪಂಚರಾಜ್ಯ ಚುನಾವಣೆಗೆ ಭರಪೂರ ಫಂಡಿಂಗ್ ಮಾಡುವ ಹೊಣೆ ಹೊತ್ತಿರುವ ಕರ್ನಾಟಕದ ಕಲೆಕ್ಷನ್ ಮಾಸ್ಟರ್ಸ್ ಇವರೇ…#CongressLootsKarnataka #EightyPercentSarkara #ATMSarkara pic.twitter.com/226nqL9Kk0
— BJP Karnataka (@BJP4Karnataka) October 16, 2023
ನಾವು ಅಂದೇ ಹೇಳಿದ್ದವು.. ಈಗ ನಿಜವಾಗಿದೆ ಎಂದ ಬಿಜೆಪಿ
ಕಾಂಗ್ರೆಸ್ ಬಂದರೆ ಕಲೆಕ್ಷನ್ ಮಾಡಲಿದೆ, ಕಾಂಗ್ರೆಸ್ ಬಂದರೆ ಕಮಿಷನ್ ದಂಧೆ ಆರಂಭವಾಗಲಿದೆ, ಕಾಂಗ್ರೆಸ್ ಬಂದರೆ ಕರ್ನಾಟಕ ಹೈಕಮಾಂಡ್ ಪಾಲಿಗೆ #ATM ಆಗಲಿದೆ, ಕಾಂಗ್ರೆಸ್ ಬಂದರೆ ಅರಾಜಕತೆ ಶುರುವಾಗಲಿದೆ, ಕಾಂಗ್ರೆಸ್ ಬಂದರೆ ಕರ್ನಾಟಕ ಜಿಹಾದಿಗಳ ಅಡಗುತಾಣವಾಗಲಿದೆ ಎಂಬ ಆರೋಪಗಳನ್ನೆಲ್ಲಾ ಇಂದು ಸ್ವತಃ ಕರ್ನಾಟಕ ಕಾಂಗ್ರೆಸ್ ನಿಜ ಮಾಡಿದೆ. ಅವೈಜ್ಞಾನಿಕ ಗ್ಯಾರಂಟಿಗಳು, ನಕಲಿ ಗಿಫ್ಟ್ ಕಾರ್ಡ್‌ಗಳು, ದಾಖಲೆಯಿಲ್ಲದ ಸುಳ್ಳು ಆರೋಪಗಳನ್ನು ಮಾಡಿಯೇ ಅಧಿಕಾರಕ್ಕೇರಿದ ಸಿದ್ದರಾಮಯ್ಯ ಅವರ ಸರ್ಕಾರ, ಅಧಿಕಾರಕ್ಕೇರಿದ ನಂತರ ಮೊದಲು ಮಾಡಿದ ಕೆಲಸವೆಂದರೆ, ರಾಜ್ಯವನ್ನು ಹೈಕಮಾಂಡ್‌ನ #ATM ಮಾಡಿದ್ದು- ಎಂದು ಬಿಜೆಪಿ ಹೇಳಿದೆ.
ಬಿಡುಗಡೆಯಾಗುವ 1 ರೂ.ನಲ್ಲಿ 80 ಪೈಸೆ ಹೈಕಮಾಂಡ್‌ಗೆ
ಗುತ್ತಿಗೆದಾರರ ಮೂಲಕ ಭರ್ಜರಿ ಕಲೆಕ್ಷನ್ ಮಾಡುವ ಸಲುವಾಗಿಯೇ, ಈ ಹಿಂದೆ ಕಾಂಗ್ರೆಸ್, ತನ್ನ ಆಪ್ತ ಗುತ್ತಿಗೆದಾರರನ್ನು ಛೂ ಬಿಟ್ಟು ಬಿಜೆಪಿ ಸರ್ಕಾರದ ವಿರುದ್ದ ನಿರಂತರ ಸುಳ್ಳು ಆರೋಪಗಳನ್ನು ಮಾಡಿತ್ತು. ಈ ದೇಶದಲ್ಲಿ ಒಂದು ರೂಪಾಯಿ ಬಿಡುಗಡೆಯಾದರೆ, ಅದರಲ್ಲಿ ಬಡವರಿಗೆ ತಲುಪುವುದು ಕೇವಲ 15 ಪೈಸೆ ಎಂದು ಹೇಳಿದ್ದ ರಾಜೀವ್ ಗಾಂಧಿಯವರ ಮಾತನ್ನು ಅಕ್ಷರಶಃ ಪಾಲಿಸುತ್ತಿರುವ ಕರ್ನಾಟಕ ಕಾಂಗ್ರೆಸ್ ವಿಧಾನಸೌಧದಲ್ಲಿ ಬಿಡುಗಡೆಯಾಗುವ ಪ್ರತಿ ಒಂದು ರೂಪಾಯಿಯಲ್ಲಿ, 80 ಪೈಸೆಯನ್ನು ತಮ್ಮ ಹೈಕಮಾಂಡ್ ಹಾಗೂ ಪಂಚ ರಾಜ್ಯಗಳ ಚುನಾವಣಾ ಫಂಡಿಂಗ್‌ಗೆ ಎತ್ತಿಡುತ್ತಿದೆ.
ರಾಜ್ಯ ಬಿಜೆಪಿ ಮಾತ್ರವಲ್ಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕೂಡಾ ಕರ್ನಾಟಕ ಕಾಂಗ್ರೆಸ್ ಬೆನ್ನು ಹತ್ತಿದ್ದಾರೆ. ಭ್ರಷ್ಟಾಚಾರ ಎನ್ನುವುದು ಕಾಂಗ್ರೆಸ್‌ನ ಡಿಎನ್‌ಎಯಲ್ಲೇ ಇದೆ ಎಂದು ಅವರು ಹೇಳಿದ್ದಾರೆ.
कांग्रेस पार्टी को वादे करने की कला में महारत हासिल है और अब यह पार्टी एक कदम आगे बढ़कर वादों के बदले में गारंटी देने लगी है।
— Jagat Prakash Nadda (@JPNadda) October 16, 2023
कर्नाटक में कतिपय ठेकेदारों के घरों से हाल ही में 100 करोड़ से अधिक की नकदी मिलने का खुलासा हुआ है जो बेहद शर्मनाक व मतदाता के साथ घिनौना मजाक है।… pic.twitter.com/0IpZCxnibL
ರಾಜ್ಯ ದಿವಾಳಿ, ಕಾಂಗ್ರೆಸಿಗರು ದಿವಾನರು!
ಪ್ರಸ್ತುತ ಸಿದ್ದರಾಮಯ್ಯ ಅವರು ಹಾಗೂ @DKShivakumar ಅವರು ವಾರ್ಷಿಕ 3-4 ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದಾಗಿ ಹೈಕಮಾಂಡ್‌ಗೆ ಮಾತು ಕೊಟ್ಟು ಅಧಿಕಾರದ ಗದ್ದುಗೆಯಲ್ಲಿ ಕೂತಿದ್ದಾರೆ. ಮೊದಲ ಹಂತದ ಸಾವಿರ ಕೋಟಿ ರೂಪಾಯಿಯನ್ನು ಹೈಕಮಾಂಡ್‌ಗೆ ಸಲ್ಲಿಸುವ ಸಮಯದಲ್ಲಿಯೇ, ಐ.ಟಿ ಇಲಾಖೆ ದಾಳಿ ಮಾಡಿದ ಕಾರಣ, ಕಾಂಗ್ರೆಸ್‌ನ ಕಲೆಕ್ಷನ್ ಕಳ್ಳಾಟ ಬಯಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ದಿವಾಳಿ ಮಾಡಿ ಕಾಂಗ್ರೆಸ್ಸಿಗರು ಮಾತ್ರ ದಿವಾನರಾಗಲಿರುವುದನ್ನು ಕರ್ನಾಟಕ ಕಾಣಬೇಕಿರುವುದು ಕನ್ನಡಿಗರ ಪಾಲಿನ ದುರಾದೃಷ್ಟ.
ಕೆಪಿಸಿಸಿ ಅಂದರೇನು? : ಬಿಜೆಪಿಯ ಕರೋಡ್‌ಪತಿ ಪ್ರಶ್ನೆ
KPCC ಅಂದರೆ ಏನು? ಎಂದು ಕೌನ್ ಬನೇಗಾ ಕರೋಡ್‌ಪತಿ ಮಾದರಿಯಲ್ಲಿ ಪ್ರಶ್ನೆ ಕೇಳಿದ್ದು ನಾಲ್ಕು ಆಯ್ಕೆಗಳನ್ನು ನೀಡಿದೆ. ಅದರಲ್ಲಿ ಕರ್ನಾಟಕ ಪ್ರದೇಶ ಕಲೆಕ್ಷನ್ ಕಾಂಗ್ರೆಸ್, ಕರ್ನಾಟಕ ಪ್ರದೇಶ ಕಮಿಷನ್ ಕಾಂಗ್ರೆಸ್, ಕರ್ನಾಟಕ ಪ್ರದೇಶ ಕರಪ್ಟ್ ಕಾಂಗ್ರೆಸ್ ಅಥವಾ ಮೇಲಿನ ಎಲ್ಲವೂ ಎಂಬ ನಾಲ್ಕು ಉತ್ತರಗಳನ್ನು ನೀಡಿದೆ!
KPCC : Karnataka Pradesh _____Congress?
— BJP Karnataka (@BJP4Karnataka) October 16, 2023
ಕೆಪಿಸಿಸಿ : ಕರ್ನಾಟಕ ಪ್ರದೇಶ _____ಕಾಂಗ್ರೆಸ್? pic.twitter.com/rC5nQVAvED
ರಾಜ್ಯದಲ್ಲಿರುವುದು ಕರ್ನಾಟಕ ಕಂಡ ಅತಿ ಭ್ರಷ್ಟ ಸರ್ಕಾರ
ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಕರ್ನಾಟಕ ಕಾಂಗ್ರೆಸ್ ಉಳಿದ ರಾಜ್ಯಗಳಲ್ಲಿನ ಚುನಾವಣೆಗೆ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ. ಕಾಂಗ್ರೆಸ್ ಕೃಪಾಪೋಷಿತ ಗುತ್ತಿಗೆದಾರರು, ಬಿಲ್ಡರ್‌ಗಳ ಬಳಿ ಕಾಂಗ್ರೆಸ್ ಇಟ್ಟಿರುವ ಠೇವಣಿಯ ಪ್ರತಿಯೊಂದು ಉಗ್ರಾಣವೂ #ATMSarkara ದ ಕರಾಳ ಕಲೆಕ್ಷನ್ ದಂಧೆಯ ಪ್ರತಿಬಿಂಬ. ಸಿದ್ದರಾಮಯ್ಯ ಅವರದ್ದು ಕರ್ನಾಟಕ ಕಂಡ ಅತಿಭ್ರಷ್ಟ ಸರ್ಕಾರ ಎಂಬುದನ್ನು ಈಗ ಸಿಕ್ಕಿರುವ ಸರಾಸರಿ ₹40 ಕೋಟಿಯ ಪ್ರತಿ ನೋಟುಗಳೂ ಕೂಗಿ ಹೇಳುತ್ತಿವೆ.
ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ @INCKarnataka ಉಳಿದ ರಾಜ್ಯಗಳಲ್ಲಿನ ಚುನಾವಣೆಗೆ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ.
— BJP Karnataka (@BJP4Karnataka) October 16, 2023
ಕಾಂಗ್ರೆಸ್ ಕೃಪಾಪೋಷಿತ ಗುತ್ತಿಗೆದಾರರು, ಬಿಲ್ಡರ್‌ಗಳ ಬಳಿ ಕಾಂಗ್ರೆಸ್ ಇಟ್ಟಿರುವ ಠೇವಣಿಯ ಪ್ರತಿಯೊಂದು ಉಗ್ರಾಣವೂ #ATMSarkara ದ ಕರಾಳ ಕಲೆಕ್ಷನ್ ದಂಧೆಯ ಪ್ರತಿಬಿಂಬ. @siddaramaiah ಅವರದ್ದು… pic.twitter.com/HlstzUWdA2
ಮಂತ್ರಿಗಳಿಗೆ ಕಲೆಕ್ಷನ್ ಟಾರ್ಗೆಟ್: ಯಾವ ಮಂತ್ರಿಗಳಿಗೆ ಎಷ್ಟು? ಲಿಸ್ಟ್ ಔಟ್
“ಕಾಂಗ್ರೆಸ್ ಬಂದಿದೆ ಲೂಟಿಗೆ ಇಳಿದಿದೆ” ಮೊದಲ ಹಂತದಲ್ಲಿ ಹೈಕಮಾಂಡ್ ನೀಡಿರುವ ₹1000 ಕೋಟಿ ಟಾರ್ಗೆಟ್‌ಗೆ,
ಸಿದ್ದರಾಮಯ್ಯ ಅವರ ಸರ್ಕಾರ ಪ್ರತಿಯಾಗಿ ಸಚಿವರ ಇಲಾಖೆಗಳಿಗೆ ಕೊಟ್ಟಿರುವ ಟಾರ್ಗೆಟ್‌ನ ಪಟ್ಟಿ ಬಹಿರಂಗ:
💰 ಡಿ.ಕೆ. ಶಿವಕುಮಾರ್- ಬೆಂಗಳೂರು ನಗರಾಭಿವೃದ್ಧಿ ₹250 ಕೋಟಿ
💰 ಆರ್.ಬಿ. ತಿಮ್ಮಾಪುರ- ಅಬಕಾರಿ ಇಲಾಖೆ ₹150 ಕೋಟಿ
💰 ಸತೀಶ್ ಜಾರಕಿಹೊಳಿ- ಲೋಕೋಪಯೋಗಿ ಇಲಾಖೆ ₹115 ಕೋಟಿ
💰 ಪ್ರಿಯಾಂಕ್ ಖರ್ಗೆ- ಗ್ರಾಮೀಣ ಅಭಿವೃದ್ಧಿ ಇಲಾಖೆ ₹100 ಕೋಟಿ
💰 ದಿನೇಶ್ ಗೂಂಡುರಾವ್- ಆರೋಗ್ಯ ಇಲಾಖೆ ₹75 ಕೋಟಿ
💰 ಚೆಲುವರಾಯ ಸ್ವಾಮಿ- ಕೃಷಿ ಇಲಾಖೆ ₹125 ಕೋಟಿ
💰 ಹೆಚ್.ಸಿ.ಮಹದೇವಪ್ಪ- ಸಮಾಜ ಕಲ್ಯಾಣ ಇಲಾಖೆ ₹95 ಕೋಟಿ
💰 ಕೃಷ್ಣಭೈರೇಗೌಡ- ಕಂದಾಯ ಇಲಾಖೆ ₹90 ಕೋಟಿ.
ಎರಡನೇ ಹಂತದ ಪಟ್ಟಿಯನ್ನು ಇಂದು ಕರ್ನಾಟಕಕ್ಕೆ ಆಗಮಿಸುತ್ತಿರುವ ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಅವರಿಂದಲೇ ಸ್ವತಃ ಬಿಡುಗಡೆ ಆಗಲಿದೆ..!: ಎಂದು ಬಿಜೆಪಿ ಹೇಳಿದೆ.
"ಕಾಂಗ್ರೆಸ್ ಬಂದಿದೆ ಲೂಟಿಗೆ ಇಳಿದಿದೆ"
— BJP Karnataka (@BJP4Karnataka) October 16, 2023
ಮೊದಲ ಹಂತದಲ್ಲಿ ಹೈಕಮಾಂಡ್ ನೀಡಿರುವ ₹1000 ಕೋಟಿ ಟಾರ್ಗೆಟ್‌ಗೆ, @siddaramaiah ಅವರ ಸರ್ಕಾರ ಪ್ರತಿಯಾಗಿ ಸಚಿವರ ಇಲಾಖೆಗಳಿಗೆ ಕೊಟ್ಟಿರುವ ಟಾರ್ಗೆಟ್‌ನ ಪಟ್ಟಿ ಬಹಿರಂಗ:
💰 ಡಿ.ಕೆ. ಶಿವಕುಮಾರ್- ಬೆಂಗಳೂರು ನಗರಾಭಿವೃದ್ಧಿ ₹250 ಕೋಟಿ
💰 ಆರ್.ಬಿ. ತಿಮ್ಮಾಪುರ- ಅಬಕಾರಿ ಇಲಾಖೆ ₹150…
ಇದನ್ನೂ ಓದಿ: Commission politics: ಕಾಂಗ್ರೆಸ್‌ಗೆ ಕಮಿಷನ್ ತಿರುಗುಬಾಣ; ಸಿದ್ದರಾಮಯ್ಯ ಕಲೆಕ್ಷನ್ ಮಾಸ್ಟರ್ ಎಂದ ಬಿಜೆಪಿ
ಯಾವ ರಾಜ್ಯಕ್ಕೆ ಎಷ್ಟು ಹಣ ಕೊಡಬೇಕಂತೆ!
ಇನ್ನು ಕರ್ನಾಟಕ ಕಾಂಗ್ರೆಸ್ ಯಾವ ಯಾವ ರಾಜ್ಯಕ್ಕೆ ಎಷ್ಟೆಷ್ಟು ಹಣ ಹಂಚಬೇಕಾಗಿದೆ ಎಂಬ ಲೆಕ್ಕವನ್ನೂ ಅದೇ ನೀಡಿದೆ. ತೆಲಂಗಾಣಕ್ಕೆ 300 ಕೋಟಿ, ಮಿಜೋರಾಂಗೆ 100 ಕೋಟಿ, ಛತ್ತೀಸ್‌ಗಢಕ್ಕೆ 200 ಕೋಟಿ, ರಾಜಸ್ಥಾನಕ್ಕೆ 200 ಕೋಟಿ, ಮಧ್ಯಪ್ರದೇಶಕ್ಕೆ 200 ಕೋಟಿ ರೂ. ನೀಡಬೇಕು ಎಂದು ಕಾಲೆಳೆದಿದೆ.
ರಾಜ್ಯದ @INCKarnataka ಕ್ಕೆ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇ ಹಂತದ ₹1000 ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು?
✔ ತೆಲಂಗಾಣ ಕಾಂಗ್ರೆಸ್‌ಗೆ ₹300 ಕೋಟಿ
✔ ಮಿಜೋರಾಂ ಕಾಂಗ್ರೆಸ್‌ಗೆ ₹100 ಕೋಟಿ
✔ ಛತ್ತಿಸ್‌ಗಢ ಕಾಂಗ್ರೆಸ್‌ಗೆ ₹200 ಕೋಟಿ
✔ ರಾಜಸ್ಥಾನ ಕಾಂಗ್ರೆಸ್‌ಗೆ ₹200 ಕೋಟಿ
✔ ಮಧ್ಯಪ್ರದೇಶ ಕಾಂಗ್ರೆಸ್‌ಗೆ ₹200 ಕೋಟಿ
ಕಮಿಷನ್, ಕಲೆಕ್ಷನ್ ಮೂಲಕ ಸಾವಿರ ಕೋಟಿ ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿ ಬಿದ್ದಿದೆ ಎನ್ನುವುದು ಬಿಜೆಪಿ ವ್ಯಾಖ್ಯಾನ.
ರಾಜ್ಯದ @INCKarnataka ಕ್ಕೆ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇ ಹಂತದ ₹1000 ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು?
— BJP Karnataka (@BJP4Karnataka) October 16, 2023
✔ ತೆಲಂಗಾಣ ಕಾಂಗ್ರೆಸ್‌ಗೆ ₹300 ಕೋಟಿ
✔ ಮಿಜೋರಾಂ ಕಾಂಗ್ರೆಸ್‌ಗೆ ₹100 ಕೋಟಿ
✔ ಛತ್ತಿಸ್‌ಗಢ ಕಾಂಗ್ರೆಸ್‌ಗೆ ₹200 ಕೋಟಿ
✔ ರಾಜಸ್ಥಾನ ಕಾಂಗ್ರೆಸ್‌ಗೆ ₹200 ಕೋಟಿ
✔…