Site icon Vistara News

Bangalore IT Raid : ಅಂಬಿಕಾಪತಿ ಬಳಿ ಸಿಕ್ಕ 42 ಕೋಟಿ ರೂ. ಗುತ್ತಿಗೆದಾರರ ಕಮಿಷನ್‌ ಹಣವೇ?: ಯತ್ನಾಳ್‌ ತರಾಟೆ

Former Minister Basanagouda Patil Yatnal

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ನಡೆದ ಐಟಿ ದಾಳಿ (Bangalore IT Raid) ವೇಳೆ ಗುತ್ತಿಗೆದಾರ ಅಂಬಿಕಾಪತಿ (Contractor Ambikapati) ಮನೆಯ ಮಂಚದಡಿ ಸಿಕ್ಕಿದ 42 ಕೋಟಿ ರೂಪಾಯಿ ಬಗ್ಗೆ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌ (Former Minister Basanagouda Patil Yatnal) ಗುಡುಗಿದ್ದಾರೆ. ಈ ಹಣ ಗುತ್ತಿಗೆದಾರರಿಂದ ಪಡೆದ ಕಮಿಷನ್‌ ಹಣವೇ? (Commission Money) ಎಂದು ಪ್ರಶ್ನೆ ಮಾಡಿದ್ದಾರೆ. ಬಿಬಿಎಂಪಿ ಬಿಡುಗಡೆ ಮಾಡಿರುವ 650 ಕೋಟಿ ರೂಪಾಯಿ ಅನುದಾನ ಪಡೆದಿರುವ ಗುತ್ತಿಗೆದಾರರು ಯಾರು? ಅವರ ಹಿನ್ನಲೆ ಏನು? ಬಾಕಿ ಬಿಲ್ಲುಗಳ ವಿವರ ಏನು ಎಂಬ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ಶುರು ಮಾಡಿದೆ ಎಂದು ಕಿಡಿಕಾರಿದ್ದಾರೆ. ಈ ಹಣವನ್ನು ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಹಾಗೂ ಛತ್ತೀಸಘಡ ಚುನಾವಣೆಗೆ ರವಾನೆ ಮಾಡಲು ಸಂಗ್ರಹ ಮಾಡಿದ್ದು ಎಂದೂ ಸಹ ಆರೋಪಿಸಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ ಮೂಲಕ ಪೋಸ್ಟ್‌ ಮಾಡಿರುವ ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಪರ್ಸೆಂಟೇಜ್‌ ದಂಧೆ ಬಗ್ಗೆ ಮಾತನಾಡಿದ್ದಾರೆ.

ಯತ್ನಾಳ್‌ ಪೋಸ್ಟ್‌ನಲ್ಲೇನಿದೆ?

“ಈ ಐಟಿ ರೇಡ್‌ನಲ್ಲಿ ಕಾಂಗ್ರೆಸ್ ಏಜೆಂಟ್‌ ಅಂಬಿಕಾಪತಿಯ ಮನೆಯಲ್ಲಿ ದೊರೆತ 42 ಕೋಟಿ ರೂಪಾಯಿ ಹಣದ ಮೂಲವನ್ನು ಹುಡುಕುವುದು ಬಹಳ ಸುಲಭ.

  1. ಬಿಬಿಎಂಪಿ ಬಿಡುಗಡೆ ಮಾಡಿರುವ 650 ಕೋಟಿ ಅನುದಾನ ಪಡೆದಿರುವ ಗುತ್ತಿಗೆದಾರರು ಯಾರು? ಅವರ ಹಿನ್ನಲೆ ಏನು? ಬಾಕಿ ಬಿಲ್ಲುಗಳ ವಿವರ!
  2. 650 ಕೋಟಿ ರೂ.ಗಳಿಗೆ ಎಷ್ಟು ಪರ್ಸೆಂಟೇಜ್ ಫಿಕ್ಸ್ ಮಾಡಲಾಗಿತ್ತು?
  3. ಈ ಹಣ ತಮಿಳುನಾಡಿನಿಂದ ತೆಲಂಗಾಣಕ್ಕೆ ಕಳುಹಿಸಲು ಯಾಕೆ ಯೋಜನೆ ಮಾಡಲಾಗಿತ್ತು?
  4. ತೆಲಂಗಾಣಕ್ಕೆ ಕಳುಹಿಸುವುದಾದರೆ ಚುನಾವಣೆಗಾಗಿ ಅಲ್ಲವೇ?
  5. ಕುಮಾರಕೃಪಾ ಗೋಡೆಗಳನ್ನು ಕೇಳಿದರೂ ಹೇಳುವುದು ಈ ಹಣ ನೀಡಿರುವ ಸುಮಾರು 23 ಗುತ್ತಿಗೆದಾರರು ಯಾರೆಂದು!
  6. ಕೆಂಪಣ್ಣ ಆ್ಯಂಡ್ ಕಂಪನಿಗೆ ಈ ಮಾಹಿತಿ ಇಲ್ಲವೇ?”

“ಐಟಿ ದಾಳಿ ವೇಳೆ ದೊರೆತಿದ್ದ ಕಾಂಗ್ರೆಸ್ ನಾಯಕಿಯ ಪತಿಯ ಹಣ ಗುತ್ತಿಗೆದಾರರಿಂದ ಪಡೆದ ಕಮಿಷನ್ ಆಗಿದೆ. ಯಾರ ಪರವಾಗಿ ಕಮಿಷನ್ ಪಡೆಯಲಾಗಿತ್ತು” ಎಂದು ಸಹ ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರಶ್ನೆ ಮಾಡಿದ್ದಾರೆ.

ಅವರಿಗೆ ವಿಧಾನಸೌಧ, ಜನರಿಗೆ ಲಾಲಬಾಗ್!

“ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ!

ಮಹದೇವಪ್ಪನ ದುಡ್ಡು
ಕಾಕಪಾಟಿಲನ ದುಡ್ಡು
ದಯಾನಂದನ ದುಡ್ಡು

1/4ರಷ್ಟು ರಾಜಸ್ಥಾನಕ್ಕೆ
1/4ರಷ್ಟು ಮಧ್ಯಪ್ರದೇಶಕ್ಕೆ
1/4ರಷ್ಟು ತೆಲಂಗಾಣಕ್ಕೆ
1/4 ರಷ್ಟು ಛತ್ತೀಸಘಡಕ್ಕೆ!!

ಅವರಿಗೆ ವಿಧಾನಸೌಧ,
ಜನರಿಗೆ ಲಾಲಬಾಗ್!” ಎಂದು ಸಹ ಬಸನಗೌಡ ಪಾಟೀಲ್‌ ಯತ್ನಾಳ್‌ ಕಿಡಿಕಾರಿದ್ದಾರೆ.

ಇದನ್ನೂ ಓದಿ: HD Kumaraswamy : ಮಂಚದ ಕೆಳಗೆ 42 ಕೋಟಿ!; ಇದು ಕಮಿಷನ್‌ ಕಲೆಕ್ಷನ್‌ ಹಣವೇ ಎಂದು ಕೇಳಿದ HDK

ಯಾವ ರಾಜಕಾರಣಿ ಪುತ್ರನಿಗೆ ಅಂಬಿಕಾಪತಿ ಆಪ್ತ?

ಅಂಬಿಕಾಪತಿ ಯಾರ ಪರವಾಗಿ ಹಣ ಸಂಗ್ರಹಿಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ಗುತ್ತಿಗೆದಾರರು ಮುಂದೆ ಬರಬೇಕು ಎಂದು ಹೇಳಿರುವ ಬಸನಗೌಡ ಪಾಟೀಲ್‌ ಯತ್ನಾಳ್‌, ಅಂಬಿಕಾಪತಿ ಅವರು ಕರ್ನಾಟಕ ಸರ್ಕಾರದ ಹಿರಿಯ ರಾಜಕಾರಣಿಯೊಬ್ಬರ ‘ಚಿರಂಜೀವಿ’ಗೆ (ಪುತ್ರನಿಗೆ) ಆಪ್ತರು ಎಂದು ಸಹ ಹೇಳಿದ್ದಾರೆ.

Exit mobile version