Site icon Vistara News

Basavaraja Rayareddy : ನಾನು ಆರ್ಥಿಕ ಸಲಹೆಗಾರ, ಸಂಬಳ ತಗೊಳ್ಳಲ್ಲ ಎಂದ ರಾಯರೆಡ್ಡಿ

Basavara Rayareddy and CM SiddaramaiahBasavara Rayareddy and CM Siddaramaiah

ಬೆಂಗಳೂರು : ಅಸಮಾಧಾನ ಶಮನ ಮಾಡುವ ಉದ್ದೇಶದಿಂದ ನನಗೆ ಸಿಎಂ ಅವರ ಆರ್ಥಿಕ ಸಲಹೆಗಾರ (Economic Advisor) ಹುದ್ದೆ ನೀಡಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ಯಾಕೆಂದರೆ, ನನಗೆ ಯಾವುದೇ ಅಸಮಾಧಾನ ಇಲ್ಲ. ಅಸಮಾಧಾನದ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬಸವರಾಜ ರಾಯರೆಡ್ಡಿ (Basavaraja Rayareddy) ಹೇಳಿದ್ದಾರೆ.

ಮೊದಲ ಬಾರಿಗೆ ಸಿಎಂ ಅವರ ಆರ್ಥಿಕ ಸಲಹೆಗಾರ ಹುದ್ದೆಯನ್ನು ಅಲಂಕರಿಸಲಿರುವ ರಾಯರೆಡ್ಡಿ ಅವರು ಮಾಧ್ಯಮಗಳ ಜತೆ ಮಾತನಾಡಿ, ನಮ್ಮ ಸಿಎಂ, ‌ವರಿಷ್ಠರು,‌ ಕೆಪಿಸಿಸಿ ಅಧ್ಯಕ್ಷರು ಸಿಎಂಗೆ ಆರ್ಥಿಕ ಸಲಹೆಗಾರರು‌ ಬೇಕೆಂದು ಕೊಟ್ಟಿದ್ದಾರೆ. ಈ ಸ್ಥಾನಕ್ಕೆ ಒಪ್ಪಿಕೊಂಡ್ರೆ ರಾಜ್ಯಕ್ಕೆ‌ ಒಳ್ಳೆಯದಾಗುತ್ತೆ ಅಂದ್ರು, ಅದಕ್ಕೆ ಒಪ್ಪಿಕೊಂಡೆ. ಇದು ಮೊದಲನೇ ಸಲ‌‌ ಆರ್ಥಿಕ ಸಲಹೆಗಾರರ ಹುದ್ದೆಗೆ ನೇಮಕ ಆಗಿರುವುದು. ಇದು ಚಾಲೆಂಜಿಂಗ್ ಜಾಬ್. ರಾಜ್ಯಕ್ಕೆ, ಸರ್ಕಾರಕ್ಕೆ ‌ಏನೆಲ್ಲಾ ಪ್ರಯೋಜನ ಆಗಬೇಕೋ ಆ ರೀತಿಯ ಸಲಹೆ ಕೊಡ್ತೇನೆ ಎಂದು ಹೇಳಿದರು.

ರಾಜಕೀಯದಲ್ಲಿ ಸೀನಿಯಾರಿಟಿ, ಜ್ಯೂನಿಯಾರಿಟಿ‌ ಬರೋದಿಲ್ಲ. ಎಲ್ಲರೂ ಅವರವರ ಮಟ್ಟದಲ್ಲಿ ಬುದ್ಧಿವಂತರೇ ಇರ್ತಾರೆ. ನನ್ನ ಮಟ್ಟಿಗೆ ಇದೊಂದು ಉದ್ಯೋಗ ಅಲ್ಲ. ನಾನು ಶಾಸಕನಾದಾಗಲೂ ಸ್ಯಾಲರಿ ತೆಗೆದುಕೊಂಡಿಲ್ಲ.. ಈಗಲೂ ಸ್ಯಾಲರಿ ತೆಗೆದುಕೊಳ್ಳಲ್ಲ ಎಂದು ಹೇಳಿದರು ಬಸವರಾಜ ರಾಯರೆಡ್ಡಿ.

ಸಿದ್ದರಾಮಯ್ಯಗೆ ಯಾಕೆ ಬೇಕು ಆರ್ಥಿಕ ಸಲಹೆಗಾರ, ಬಸವರಾಜ ರಾಯರೆಡ್ಡಿಗೆ ಸಲಹೆ ನೀಡಲು ಏನು ಗೊತ್ತು ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ʻʻನನ್ನ ಜೊತೆ‌ ಕುಮಾರಸ್ವಾಮಿ ಕೂರಲಿ,ಚರ್ಚೆ ಮಾಡಲಿ. ಪ್ರತಿಯೊಬ್ಬರಿಗೂ ಅವರದೇ ಆದ‌ ನೈಪುಣ್ಯತೆ ಇರುತ್ತದೆ. ಹಾಗೆಲ್ಲ ಹಗುರವಾಗಿ‌ ಮಾತಾಡಬಾರದು ಎಂದರು.

ಪ್ರಧಾನಿ ಹುದ್ದೆಗೆ ನನ್ನ ಆಯ್ಕೆ ಖರ್ಗೆ ಎಂದ ರಾಯರೆಡ್ಡಿ

ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಗೊಂದಲಗಳಿವೆಯೇ? ಎಲ್ಲರೂ ಖರ್ಗೆ ಅವರ ಹೆಸರು ಹೇಳಿದರೆ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ ಹೆಸರು ಹೇಳುತ್ತಿದ್ದಾರೆ ಎಂದು ಕೇಳಿದಾಗ ಉತ್ತರ ನೀಡಿದ ರಾಯರೆಡ್ಡಿ ಅವರು, ʻʻಪ್ರಧಾನಿ ಆಯ್ಕೆಗೆ ಗೊಂದಲಗಳು ಇಲ್ಲ.. ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೆ.. ನಾನು ಈ ಹಿಂದೆಯೇ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಆಗಬೇಕು ಎಂದು ಹೇಳಿದ್ದೆ.. ಇವತ್ತು ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದರೆ‌ ವೈಯಕ್ತಿಕವಾಗಿ ನಾನು ಸಂತೋಷ ಪಡ್ತೇನೆ. ಹೈಕಮಾಂಡ್‌ ವೈಯಕ್ತಿಕವಾಗಿ ಕೇಳಿದರೂ ನಾನು ಖರ್ಗೆ ಹೆಸರೇ ಹೇಳುತ್ತೇನೆ. ರಾಹುಲ್ ಗಾಂಧಿ ಅವರನ್ನು ಘೋಷಿಸಿದ್ರೂ ಸಂತೋಷವೆ. ರಾಹುಲ್ ಗಾಂಧಿ‌ ಪಿಎಂ ಆಗಬೇಕೆಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಎಂದರು. ನಾವು ಯಾರು ಏನೇ ಹೇಳಿದರೂ ಅಂತಿಮವಾಗಿ ಹೈಕಮಾಂಡೇ ತೀರ್ಮಾನ ಮಾಡುವುದು ಎಂದರು ರಾಯರೆಡ್ಡಿ.

ಇದನ್ನೂ ಓದಿ : Congress Politics : ರೆಬೆಲ್‌ ಕೈ ನಾಯಕರಿಗೆ ಸ್ಪೆಷಲ್‌ ಹುದ್ದೆ; ರಾಯರೆಡ್ಡಿ, ಪಾಟೀಲ್‌, ದೇಶಪಾಂಡೆಗೆ ಬಂಪರ್

Exit mobile version