ನವ ದೆಹಲಿ: ರಾಜ್ಯದಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ (BJP Candidates List) ಬಿಡುಗಡೆಯಾಗಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರವೊಂದನ್ನು ಬಿಟ್ಟು ಉಳಿದ ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ರಾಯಚೂರು ಹಾಗೂ ಬೆಳಗಾವಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ರಾಜ್ಯದ ಬಿಜೆಪಿ ಅಭ್ಯರ್ಥಿಗಳ (BJP Karnataka) ಮೊದಲ ಪಟ್ಟಿಯನ್ನು ಮಾರ್ಚ್ 13ರಂದು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ಒಟ್ಟು 20 ಮಂದಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿತ್ತು. ಮಿತ್ರಕೂಟದಲ್ಲಿರುವ ಜೆಡಿಎಸ್‌ಗೆ ಮೂರು ಸ್ಥಾನಗಳನ್ನು ನೀಡಲು ನಿರ್ಧರಿಸಿರುವ ಬಿಜೆಪಿ ಉತ್ತರ ಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಕ್ಷೇತ್ರಗಳನ್ನು ಪೆಂಡಿಂಗ್ ಉಳಿಸಿಕೊಂಡಿತ್ತು.
ಮೊದಲ ಪಟ್ಟಿ ಬಿಡುಗಡೆಯ ಬೆನ್ನಿಗೇ ಒಂದಿಷ್ಟು ಬಂಡಾಯ ಚಟುವಟಿಕೆಗಳು ಆರಂಭಗೊಂಡಿತ್ತು. ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿರುವ ಡಿ.ವಿ. ಸದಾನಂದ ಗೌಡ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಕೊಪ್ಪಳ ಶಾಸಕ ಸಂಗಣ್ಣ ಕರಡಿ ಸೇರಿದಂತೆ ಹಲವರು ಟಿಕೆಟ್ ಮಿಸ್ ಆಗಿದ್ದಕ್ಕೆ ತಮ್ಮ ಆಕ್ರೋಶ ಹೊರಹಾಕಿದ್ದರು.
2ನೇ ಪಟ್ಟಿಯಲ್ಲಿ ಟಿಕೆಟ್ ಪಡೆದವರು ಇವರು
ಚಿಕ್ಕಬಳ್ಳಾಪುರ – ಡಾ.ಕೆ. ಸುಧಾಕರ್
ಉತ್ತರ ಕನ್ನಡ – ವಿಶ್ವೇಶ್ವರ ಹೆಗಡೆ ಕಾಗೇರಿ
ರಾಯಚೂರು – ಅಮರೇಶ್ವರ ನಾಯಕ್
ಬೆಳಗಾವಿ – ಜಗದೀಶ್ ಶೆಟ್ಟರ್
BJP Candidates List : ಮಾರ್ಚ್ 13ರ ಮೊದಲ ಪಟ್ಟಯಲ್ಲಿ ಟಿಕೆಟ್ ಪಡೆದ 20 ಅಭ್ಯರ್ಥಿಗಳು
- ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ
- ಬಾಗಲಕೋಟೆ: ಪಿ.ಸಿ. ಗದ್ದಿಗೌಡರ್
- ವಿಜಯಪುರ: ರಮೇಶ್ ಜಿಗಜಿಣಗಿ
- ಕಲಬುರಗಿ: ಡಾ. ಉಮೇಶ್ ಜಾಧವ್
- ಬೀದರ್: ಭಗವಂತ್ ಖೂಬಾ
- ಕೊಪ್ಪಳ: ಡಾ. ಬಸವರಾಜ ಕ್ಯಾವತೂರು
- ಬಳ್ಳಾರಿ: ಬಿ. ಶ್ರೀರಾಮುಲು
- ಹಾವೇರಿ: ಬಸವರಾಜ ಬೊಮ್ಮಾಯಿ
- ಧಾರವಾಡ: ಪ್ರಹ್ಲಾದ್ ಜೋಶಿ
- ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್
- ಶಿವಮೊಗ್ಗ: ಬಿವೈ ರಾಘವೇಂದ್ರ
- ಉಡುಪಿ ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ
- ದಕ್ಷಿಣ ಕನ್ನಡ: ಕ್ಯಾಪ್ಟನ್ ಬ್ರಿಜೇಶ್ ಚೌಟ
- ತುಮಕೂರು: ವಿ ಸೋಮಣ್ಣ
- ಮೈಸೂರು: ಯದುವೀರ್ ಕೃಷ್ಣ ದತ್ತ ಒಡೆಯರ್
- ಚಾಮರಾಜನಗರ: ಎಸ್. ಬಾಲರಾಜ್
- ಬೆಂಗಳೂರು ಗ್ರಾಮಾಂತರ: ಡಾ. ಸಿ.ಎನ್. ಮಂಜುನಾಥ್
- ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ
- ಬೆಂಗಳೂರು ಸೆಂಟ್ರಲ್: ಪಿ.ಸಿ. ಮೋಹನ್
- ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ
ಇದನ್ನೂ ಓದಿ: Lok Sabha Election 2024: ಸಿಎಂ ಸಿದ್ದರಾಮಯ್ಯ, ಜಯಪ್ರಕಾಶ್ ಹೆಗ್ಡೆ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ಈ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ
ಮೈತ್ರಿ ಒಪ್ಪಂದದಂತೆ ಹಾಸನ, ಮಂಡ್ಯ, ಕೋಲಾರ ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಜೆಪಿ ಬಿಟ್ಟುಕೊಟ್ಟಿದೆ. ಹಾಸನಕ್ಕೆ ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಹಾಸನದಲ್ಲಿ ಬುಧವಾರ (ಮಾ. 13) ಘೋಷಣೆ ಮಾಡಿದ್ದರು. ಮಂಡ್ಯದಿಂದ ಸ್ವತಃ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿದ್ದಾರೆ ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಹೇಳಿದ್ದಾರೆ. ಕೋಲಾರದಲ್ಲಿ ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.