Site icon Vistara News

KSRTC Bus: ಕೆಎಸ್‌ಆರ್‌ಟಿಸಿ ಬಸ್‌ಗಳ ದುರವಸ್ಥೆ ಬಗ್ಗೆ ಬಿಜೆಪಿ ವಿಧಾನ ಪರಿಷತ್‌ ಸದಸ್ಯನಿಂದಲೇ ಆಕ್ಷೇಪ: ಜನಸಾಮಾನ್ಯರ ಪಾಡೇನು ಎಂದ ಕೇಶವ ಪ್ರಸಾದ್‌

BJP Council Member complains about ksrtc-bus break down

#image_title

ಬೆಂಗಳೂರು: ಪ್ರಮುಖ ಕಾರ್ಯಕ್ರಮಗಳನ್ನು ನಿಶ್ಚಿಯಿಸಿಕೊಂಡು ತೆರಳುವಾಗ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ( KSRTC Bus) ನೆಚ್ಚಿಕೊಂಡರೆ ಏನು ಗತಿ ಎಂದು ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಎಸ್‌. ಕೇಶವ ಪ್ರಸಾದ್‌ ಆಕ್ಷೇಪಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಕೇಶವ ಪ್ರಸಾದ್‌ ಬರೆದುಕೊಂಡಿದ್ದಾರೆ.

ಧಾರವಾಡ ಸನ್ಮಾನ್ಯ ಪ್ರಧಾನಿಗಳ ಐಐಟಿ ಲೋಕಾರ್ಪಣೆ ಕಾರ್ಯಕ್ರಮ ದಿ.12.03.2023 ಸಿದ್ಧತೆ ಗಮನಿಸಲು KSRTC, AC ಸ್ಲೀಪರ್ ಕೋಚ್ನಲ್ಲಿ ಪ್ರಯಾಣ ಮಾಡುತ್ತಿದ್ದೆ. ಶಬ್ದವೇ ಇಲ್ಲದಂಥ ಅನುಭವ, ಬಸ್ ಕೆಟ್ಟು ನಿಂತಿದೆ ದಾವಣಗೆರೆ ಬಳಿ.

ನಿರ್ವಾಹಕ ಮತ್ಹೊಂದು Sleep like a Baby Multi Axle Bus ಗೆ ನಮ್ಮನ್ನು ವರ್ಗಾಯಿಸಿದ, ಸಮಯ ಬೆಳಗ್ಗೆ 4.30. ಅರ್ಧ ಗಂಟೆ ಪ್ರಯಾಣದ ನಂತರ ಬಸ್ ನಿಂತ್ ಬಿಡ್ತು. ಡ್ರೈವರ್-ಕಂಡಕ್ಟರ್ ಬಸ್ ಸ್ವಿಚ್ ಆಫ್ ಮಾಡಿ ಕುಳಿತರು. ಕೆಟ್ಟಿದೆ Sir, ಸ್ಟಾರ್ಟ್ ಆದರೆ ಸರಿ, ಇಲ್ಲ ಅಂದ್ರೆ ಏನೂ ಮಾಡಲು ಆಗದು ಎಂದು ನಿರ್ವಾಹಕ ನುಡಿದ. ಬಸ್ನಲ್ಲಿ ಕುಳಿತಿದ್ದೇವೆ, ಮುಂದೇನು ಎಂದು ತಿಳಿಯದು.

ಇದನ್ನೂ ಓದಿ: 2nd PUC Exam 2023: ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಪ್ರಯಾಣ ಉಚಿತ

ಬೆಳಗ್ಗಿನ ಜಾವ ಕೆಲಸ ನಿಶ್ಚಯಿಸಿ KSRTC ಬಸ್ನಲ್ಲಿ ಹೊರಟರೆ ತಲುಪುವುದು ಯಾವಾಗ? ರೊಕ್ಕ ಕೊಟ್ಟು ಕುಳಿತ ಜನರ ಪಾಡೇನು? ನನಗಾದರೋ ಉಚಿತ ಎಂದು ಕೇಶವ ಪ್ರಸಾದ್‌ ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ, ಕೆಟ್ಟು ನಿಂತ ಬಸ್‌ನ ಫೋಟೊವನ್ನೂ ಸಹ ಅಪ್‌ಲೋಡ್‌ ಮಾಡಿದ್ದಾರೆ.

Exit mobile version