ಬೆಂಗಳೂರು: ವಿಧಾನಸಭೆ ಚುನಾವಣೆಯ ಪ್ರಚಾರ ಉಸ್ತುವಾರಿಯನ್ನು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀಡುವ ಮೂಲಕ ವೀರಶೈವ ಲಿಂಗಾಯತರ ಅಸಮಾಧಾನ ತಣಿಸಲಾಗುತ್ತದೆ ಎಂಬ ಮಾತು ಸುಳ್ಳಾಗಿದ್ದು, ರಾಜ್ಯ ಬಿಜೆಪಿ (BJP Karnataka) ಪ್ರಚಾರ ಸಮಿತಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಅಧ್ಯಕ್ಷರಾಗಿ ಬಿಜೆಪಿ ನೇಮಿಸಿದೆ.
ಈ ಕುರಿತು ಕೇಂದ್ರ ಕಾರ್ಯಾಲಯ ಉಸ್ತುವಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಪ್ರಚಾರ ಸಮಿತಿಯಲ್ಲಿ ಒಟ್ಟು 25 ಸದಸ್ಯರಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷರಾದರೆ ಸದಸ್ಯರಾಗಿ ಬಿ.ಎಸ್. ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಎ. ನಾರಾಯಣಸ್ವಾಮಿ, ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಬಿ. ಶ್ರೀರಾಮುಲು, ಆರ್. ಅಶೋಕ್, ಶಶಿಕಲಾ ಜೊಲ್ಲೆ, ಸಿ.ಸಿ. ಪಾಟೀಲ್, ಎಸ್.ಟಿ. ಸೋಮಶೇಖರ್, ಡಾ. ಕೆ. ಸುಧಾಕರ್, ಪ್ರಭು ಚೌಹಾಣ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ಸಿ.ಟಿ. ರವಿ, ವಿ. ಶ್ರೀನಿವಾಸ ಪ್ರಸಾದ್, ಪಿ.ಸಿ. ಮೋಹನ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ, ಬಿ. ವೈ. ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ನೇಮಕವಾಗಿದ್ದಾರೆ.
ಶೋಭಾ ಕರಂದ್ಲಾಜೆಗೆ ನಿರ್ವಹಣೆ ಹೊಣೆ
ಸಂಸತ್ ಸದಸ್ಯೆಯಾಗಿ ಆಐಕೆಯಾದಾಗಿನಿಂದ ರಾಜ್ಯ ರಾಜಕಾರಣದಿಂದ ಬಹಿರಂಗವಾಗಿ ದೂರವೇ ಉಳಿದಿರುವ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಸ್ಥಾನ ನೀಡಲಾಗಿದೆ.
2018ರ ಚುನಾವಣೆಗೂ ಮುನ್ನ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ʼನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆʼಯ ಸಂಚಾಲಕಿಯಾಗಿ ಶೋಭಾ ಕರಂದ್ಲಾಜೆ ಕಾರ್ಯನಿರ್ವಹಿಸಿದ್ದರು.
ಇದೀಗ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಗೆ ಶೋಭಾ ಕರಂದ್ಲಾಜೆ ಅಧ್ಯಕ್ಷೆಯಾಗಿದ್ದು, ಸದಸ್ಯರಾಗಿ ಭಗವಂತ ಖೂಬಾ, ಕೋಟ ಶ್ರೀನಿವಾಸ ಪೂಜಾರಿ, ಅರವಿಂದ ಲಿಂಬಾವಳಿ, ರಘುನಾಥರಾವ್ ಮಲ್ಕಾಪುರೆ, ನಿರ್ಮಲ್ ಕುಮಾರ್ ಸುರಾಣ, ತೇಜಸ್ವಿನಿ ಅನಂತಕುಮಾರ್, ಎನ್ ರವಿಕುಮಾರ್, ಸಿದ್ದರಾಮು, ಅಶ್ವತ್ಥನಾರಾಯಣ, ಮಹೇಶ್ ಟೆಂಗಿನಕಾಯಿ, ಎಸ್. ಕೇಶವ ಪ್ರಸಾದ್, ಛಲವಾದಿ ನಾರಾಯಣಸ್ವಾಮಿ, ಗೀತಾ ವಿವೇಕಾನಂದ ನೇಮಕವಾಗಿದ್ದಾರೆ.
ಇದನ್ನೂ ಓದಿ: ನಾನು ಲಿಂಗಾಯತ ಪ್ರಚಾರ ಸಮಿತಿ ಅಧ್ಯಕ್ಷನಲ್ಲ ಎಂದ ಎಂ.ಬಿ.ಪಾಟೀಲ್