Site icon Vistara News

BJP Karnataka: ಫೆ.9ರಿಂದ ಗ್ರಾಮ ಚಲೋ ಅಭಿಯಾನ; ಹೇಗಿರಲಿದೆ ಕಾರ್ಯತಂತ್ರ?

vidhana soudha BJP Karnataka Sunil Kumar

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ದೇಶ ಹಾಗೂ ರಾಜ್ಯ ಮಟ್ಟದಲ್ಲಿ ಗ್ರಾಮಗಳನ್ನು ತಲುಪುವುದಕ್ಕಾಗಿ ಬಿಜೆಪಿಯಿಂದ (BJP Karnataka) “ಗ್ರಾಮ ಚಲೋ” ಅಭಿಯಾನವನ್ನು (Gram Chalo Abhiyan) ಫೆ. 9ರಿಂದ ಮೂರು ದಿನಗಳ ಕಾಲ ಆರಂಭಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.

ಅಭಿಯಾನದ ಸಂಚಾಲಕರಾಗಿರುವ ವಿ. ಸುನಿಲ್‌ ಕುಮಾರ್‌ ಅವರು ಬಿಜೆಪಿ ಕಚೇರಿಯಲ್ಲಿ ಸಿದ್ಧತಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಫೆಬ್ರವರಿ 9ರಿಂದ 11ರವರೆಗೆ ಗ್ರಾಮ ಚಲೋ ಅಭಿಯಾನ ನಡೆಯಲಿದೆ. ಕರ್ನಾಟಕದ 28 ಸಾವಿರ ಕಂದಾಯ ಗ್ರಾಮಗಳು ಹಾಗೂ 19 ಸಾವಿರ ನಗರ ಬೂತ್‌ಗಳನ್ನು ಸಂಪರ್ಕಿಸಲಾಗುವುದು. ಸುಮಾರು 40 ಸಾವಿರ ಕಾರ್ಯಕರ್ತರನ್ನು ಈ ಅಭಿಯಾನಕ್ಕೆ ಜೋಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಫೆ. 9, 10 ಹಾಗೂ 11ರಂದು ಮೂರು ದಿನಗಳ ಕಾಲ ಮೊದಲ ಹಂತದಲ್ಲಿ ಅಭಿಯಾನ ನಡೆಯುತ್ತದೆ. ಕಾರ್ಯಕರ್ತರು ತಾವು ನಿಯೋಜನೆಗೊಂಡ ಗ್ರಾಮವನ್ನು ಬಿಟ್ಟು ಬೇರೆ ಗ್ರಾಮಕ್ಕೆ ಹೋಗಿ 24 ಗಂಟೆ ಕಾಲ ವಾಸ್ತವ್ಯವಿದ್ದು, ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಆಶಯಗಳ ಬಗ್ಗೆ ಜಾಗೃತಿ ಮೂಡಿಸಬೇಕಾಗುತ್ತದೆ. ತಳಮಟ್ಟದಲ್ಲಿ ಪ್ರತಿಯೊಬ್ಬರನ್ನೂ ತಲುಪುವ ಜತೆಗೆ ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧವೂ ಜನಜಾಗೃತಿ ರೂಪಿಸಲಾಗುತ್ತದೆ ಎಂದು ಹೇಳಿದರು.

ಏನಿದರ ಮುಖ್ಯಾಂಶ?

ಇದನ್ನೂ ಓದಿ: Jagadish Shetter: ಅಮಿತ್‌ ಶಾ ಭೇಟಿ ಮಾಡಿದ ಜಗದೀಶ್‌ ಶೆಟ್ಟರ್;‌ ಬಿಜೆಪಿ ಸೇರ್ಪಡೆ ಬಹುತೇಕ ಖಚಿತ

ಬೆಂಕಿ ಹಾಕಿದವರ ಮೇಲೆ ಇನ್ನಷ್ಟು ಕ್ರಮ ಆಗಬೇಕು

ಮಂಗಳೂರಿನ ಸಮಾವೇಶದಲ್ಲಿ ಮುಸ್ಲಿಂ ಬೇಡಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ವಿ. ಸುನೀಲ್ ಕುಮಾರ್, ಬೇಡಿಕೆಗಳನ್ನು ಎಲ್ಲರೂ ಕೇಳ್ತಾರೆ. ಸರ್ಕಾರ ಯಾವ ರೀತಿ ಬಜೆಟ್ ಮಂಡಿಸುತ್ತದೆ ಎಂಬುದನ್ನು ನೋಡೋಣ. ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣವನ್ನು ಇಡಿ ದೇಶ ನೋಡಿದೆ. ಉದ್ರಿಕ್ತ ಗುಂಪು ಹೇಗೆ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿತ್ತು? ಯಾವ ರೀತಿಯಲ್ಲಿ ಧ್ವಂಸ ಮಾಡಲಾಗಿತ್ತು? ಎಂಬುದನ್ನು ಜನ ಗಮನಿಸಿದ್ದಾರೆ. ದಲಿತ ಶಾಸಕನ ಮನೆ ಮೇಲೆ ದಾಳಿ ಮಾಡಿದ್ದು ಜಗಜ್ಜಾಹೀರಾಗಿದೆ. ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದವರು, ಪೊಲೀಸ್ ಠಾಣೆ ಬೆಂಕಿ ಹಾಕಿದವರು ಇವರಿಗೆ ಅಮಾಯಕರು. ಈ ರೀತಿಯಲ್ಲಿ ಸರ್ಕಾರಕ್ಕೆ ಅನಿಸಿದ್ದರೆ ಇದಕ್ಕಿಂತ ದುರಂತ ಯಾವುದೂ ಇಲ್ಲ. ಬೆಂಕಿ ಹಾಕಿದವರ ಮೇಲೆ ಇನ್ನಷ್ಟು ಕ್ರಮ ಆಗಬೇಕು. ಕೋಮುವಾದದ ನೆಪ ಇಟ್ಟುಕೊಂಡು ಅಮಾಯಕರು ಅಂತ ಕರೆಯುವುದು ಸರಿಯಲ್ಲ ಎಂದು ಹೇಳಿದರು.

Exit mobile version