Site icon Vistara News

BJP Karnataka: ಚುನಾವಣೆ ತಯಾರಿಗೆ ಬಿ.ಎಲ್‌. ಸಂತೋಷ್‌ ನೇತೃತ್ವದಲ್ಲಿ ಮಹತ್ವದ ಸಭೆ

bjp-karnataka-meeting regarding assembly election

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಸಂಗಟನೆಯನ್ನು ( BJP Karnataka) ಸಜ್ಜುಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶೀ ಬಿ.ಎಲ್‌. ಸಂತೋಷ್‌ ಅಧ್ಯಕ್ಷತೆಯಲ್ಲಿ ಪ್ರಮುಖ ಸಭೆ ನಡೆಯಿತು.

ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪ್ರಣಾಳಿಕೆ ಸಲಹಾ ಸಂಗ್ರಹ ತಂಡ, ಫಲಾನುಭವಿಗಳ ಸಮ್ಮೇಳನ ತಂಡ, ವಿಜಯ ಸಂಕಲ್ಪ ರಥಯಾತ್ರೆಗಳ ಉಸ್ತುವಾರಿ ತಂಡ, ವೀಡಿಯೋ ಪ್ರಚಾರ ತಂಡಗಳ ಸಂಚಸಲಕರ ಜತೆ ಸಮಾಲೋಚನೆ ನಡೆಯಿತು.

ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ರಥಯಾತ್ರೆ, ಫಲಾನುಭವಿಗಳ ಸಮಾವೇಶ, ಪ್ರಚಾರ, ಪ್ರಣಾಳಿಕೆ ರಚನೆ ಕುರಿತು ಚರ್ಚೆ ನಡೆದಿದೆ. ರಾಜ್ಯದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ರಥಯಾತ್ರೆ ನಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಬೇಕು. ಡಬಲ್‌ ಇಂಜಿನ್‌ ಸರ್ಕಾರದ ಲಾಭವನ್ನು ಒಮ್ಮೆ ಜನರು ಮನಗಂಡರೆ ಅರ್ಧ ಚುನಾವಣೆ ಗೆದ್ದಂತೆ.

ವಿಶೇಷವಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳ ನಿರ್ಧಾರ, ಬಂಜಾರ ಸಮುದಾಯಕ್ಕೆ ಹಕ್ಕುಪತ್ರ ನೀಡಿಕೆಯಂತಹ ವಿಷಯಗಳನ್ನು ಆಯಾ ಸಮುದಾಯಗಳಿಗೆ ತಲುಪಿಸಬೇಕು ಎಂದು ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಸಂತೋಷ್‌ ವಿರುದ್ಧ ಅಸಂತೋಷ, ಬಿಎಸ್‌ವೈ ಬಗ್ಗೆ ಸಿಹಿ ಮಾತು: ಕುತೂಹಲ ಕೆರಳಿಸಿದ ಎಚ್‌.ಡಿ. ಕುಮಾರಸ್ವಾಮಿ ಮಾತು

ಸಭೆಯಲ್ಲಿ ಸಚಿವರಾದ ಸುಧಾಕರ್, ಹಾಲಪ್ಪಾ ಆಚಾರ್, ಬಿ ಸಿ ನಾಗೇಶ್, ಎಸ್ ಟಿ ಸೋಮಶೇಖರ್, ಸಿ ಸಿ ಪಾಟೀಲ್ ಮತ್ತಿತರರು ಭಾಗಿಯಾಗಿದ್ದರು. ಮೋರ್ಚಾ ಸಮಾವೇಶಗಳ ತಂಡದ ಸಹ ಸಂಚಾಲಕರು ಸಹ ಭಾಗಿಯಾಗಿದ್ದರು.

ಸಿಎಂ ಮನೆಯಲ್ಲೂ ಸಭೆ

ಬಿಜೆಪಿ ಕಚೇರಿಯಲ್ಲಿನ ಸಭೆಯ ನಂತರ ಸಿಎಂ ಬಸವರಾಜ ಬೊಮ್ಮಾಯಿ ಅವರ ರೇಸ್‌ ಕೋರ್ಸ್‌ ನಿವಾಸದಲ್ಲೂ ಸಭೆ ನಡೆಯಿತು. ಬಿಜೆಪಿಯ ರಥಯಾತ್ರೆ ಅಂತಿಮ ರೂಪುರೇಷೆ ಕುರಿತು ಚರ್ಚೆ ನಡೆಯಿತು. ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು , ಬಿ.ಎಲ್. ಸಂತೋಷ್ , ಆರ್‌. ಅಶೋಕ್, ಮುನ್ನಿರತ್ನ, ಬೈರತಿ ಬಸವರಾಜು, ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ, ಮುರುಗೇಶ್‌ ನಿರಾಣಿ, ಎಸ್. ಟಿ. ಸೋಮಶೇಖರ್‌, ವಿ. ಸುನೀಲ್ ಕುಮಾರ್, ಬಸನಗೌಡ ಪಾಟೀಲ್‌ ಯತ್ನಾಳ್ ಸೇರಿದಂತೆ ಸಚಿವರು ಶಾಸಕರು ಭಾಗಿಯಾಗಿದ್ದರು.

Exit mobile version