Site icon Vistara News

BJP Karnataka: 24ಕ್ಕೆ ಪ್ರಗತಿ ರಥ ಚಾಲನೆ, 27ಕ್ಕೆ ಬೆಳಗಾವಿಗೆ ನರೇಂದ್ರ ಮೋದಿ ಭೇಟಿ: ಬಿಜೆಪಿಯಿಂದ ಭರ್ಜರಿ ಕಾರ್ಯಕ್ರಮಗಳು

Modi in tumakuru new bjp-karnataka-pragathi ratha will be launched and modi visit on card as election fever in rise

#image_title

ಬೆಂಗಳೂರು: ಚುನಾವಣೆಗಳು ಹತ್ತಿರವಾದಂತೆ ಬಿಜೆಪಿ(BJP Karnataka) ತನ್ನ ಪ್ರಚಾರ ತಂತ್ರಗಳನ್ನು ಬಿರುಗೊಳಿಸಿದ್ದು, ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲೂ ಸಂಚರಿಸುವ ಪ್ರಗತಿ ರಥಕ್ಕೆ ಫೆ. 24ಕ್ಕೆ ಚಾಲನೆ ನೀಡಲಿದೆ. ಇದೇ ವೇಳೆ ಫೆ. 27ರಂದಯ ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಚಾಲನೆ ನಡೆಸಲಿದ್ದಾರೆ. ಈ ಕುರಿತು ರಾಜ್ಯ ಬಿಜೆಪಿ ಕಚೇರಿಯಲ್ಲಿ ಎರಡು ಪ್ರತ್ಯೇಖ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಗಿದೆ.

ವಿಧಾನಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮ ಮಾಡುತ್ತೇವೆ. ಇದಕ್ಕಾಗಿ 135 ಎಲ್‌ಇಡಿ ರಥಗಳ ತಯಾರಿ ಮಾಡಲಾಗಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಲಿದೆ. ಆಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಲೈವ್ ಸ್ಟ್ರೀಮ್ ಅಳವಡಿಸಲಾಗಿದೆ. ಪ್ರಧಾನಿ ಸೇರಿದಂತೆ ಎಲ್ಲ ಕಾರ್ಯಕ್ರಮ ಲೈವ್ ಕೊಡಬಹುದು. GPS ಅಳವಡಿಕೆ ಮೂಲಕ ಮಾನಿಟರಿಂಗ್ ಮಾಡಲಾಗುವುದು.

ಪ್ರತಿ ಗ್ರಾಮಕ್ಕೆ ಹೋಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲಹಾ ಪೆಟ್ಟಿಗೆ ಇಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಿಂದ 10ಸಾವಿರ ಸಲಹೆ ಕೇಳಲು ನಿರ್ಧಾರ ಮಾಡಲಾಗಿದೆ. QR ಕೊಡ್ ಅಳವಡಿಸೋ ಮೂಲಕ ಅದರಿಂದಲೂ ಸಲಹೆ ನೀಡಬಹುದು. ರಥರದಲ್ಲಿರುವ ಸಲಹಾ ಪತ್ರಗಳನ್ನು ತಂದು ಕೇಂದ್ರ ಕಚೇರಿಯಲ್ಲಿ ಮಾನಿಟರಿಂಗ್ ಮಾಡಲಾಗುವುದು.

ಫೆ.24 ರಿಂದ ವಿಧಾನಸಭೆ ಕ್ಷೇತ್ರಗಳಿಗೆ ಪ್ರಗತಿ ರಥ ವಾಹನಗಳು ಪ್ರವೇಶಿಸಲಿವೆ. ಪ್ರಗತಿ ರಥವನ್ನು ಫೆ.೨೪ ರಂದು ಸಿಎಂ ಬೊಮ್ಮಾಯಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರಿನ ಬಿಟಿಂಎಂ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಉದ್ಘಾಟನೆ ಆಗಲಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ೧೫ ದಿನ
ರಥ ಸಂಚಾರ ಮಾಡಲಿದೆ. ದೊಡ್ಡ ವಿಧಾನ ಸಭಾ ಕ್ಷೇತ್ರದಲ್ಲಿ ೧೫ ಕ್ಕಿಂತ ಹೆಚ್ಚು ದಿನ ಸಂಚಾರ ಮಾಡಲಿದೆ ಎಂದರು.

ಇದನ್ನೂ ಓದಿ: JP Nadda : ಶೃಂಗೇರಿ ಶಾರದೆಯ ದರ್ಶನ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ; ಸುಪ್ರಭಾತ ಪೂಜೆಯಲ್ಲಿ ಭಾಗಿ

ಮತ್ತೊಂದು ಸುದ್ದಿಗೋಷ್ಠಿ ನಡೆಸಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಜೆಟ್ ಮಂಡಿಸಿವೆ. ರೈತರಿಗೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗಿದೆ. ಮಾರ್ಚ್‌ 27 ರಂದು ರಾಜ್ಯಕ್ಕೆ ಮೋದಿ ಭೇಟಿ ನೀಡಲಿದ್ದಾರೆ. ಬೆಳಗಾವಿಗೆ ESI ಆಸ್ಪತ್ರೆ ಕೊಡುಗೆ ನೀಡಲಿದ್ದಾರೆ. ರೈತರ ಆದಾಯ ಹೆಚ್ಚಿಸಲು ಕೃಷಿ ಕ್ಷೇತ್ರವೂ ಬೆಳೆಸಲು ಒತ್ತು ನೀಡಲಾಗಿದೆ. ಕೃಷಿ ಕ್ಷೇತ್ರವನ್ನೂ ಡಿಜಿಟಲ್ ತಂತ್ರಜ್ಞಾನ ಅಳವಡಿಸಲು ನಿರ್ಧಾರ ಮಾಡಲಾಗಿದೆ.

ಫೆಬ್ರವರಿ 27ರಂದು ಮಧ್ಯಾಹ್ನ ಪ್ರಧಾನಿ ಮೋದಿ ಬೆಳಗಾವಿಗೆ ಬರಲಿದ್ದಾರೆ. 190 ಕೋಟಿ ವೆಚ್ಚದ ಬೆಳಗಾವಿ ರೈಲ್ವೇ ನಿಲ್ದಾಣ ಮೇಲ್ದರ್ಜೆಗೆ ಏರಿಸಲಾಗಿದೆ. ಹೊಸ ರೈಲ್ವೇ ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. 1,809 ಕೋಟಿ ರೂ. ಅನುದಾನ ಬೆಳಗಾವಿ ಜಿಲ್ಲೆಗೆ ಮೀಸಲಿಡಲಾಗಿದೆ.ಹರ್ ಘರ್ ಜಲ್, ಹರ್ ಘರ್ ನಲ್ ಉದ್ಘಾಟನೆ ಮಾಡಲಿದ್ದಾರೆ.

927 ಕೋಟಿ ರೂ. ವೆಚ್ಚಮಾಡಿ ಲೋಂಡಾದಿಂದ ಬೆಳಗಾವಿವರೆಗೆ ಡಬ್ಲಿಂಗ್ ರೈಲ್ವೇ ಲೇನ್‌ ಮಾಡಲಾಗಿದ್ದು, ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.

Exit mobile version