Site icon Vistara News

BJP Politics: ಒಂದು ಚುನಾವಣೆ ಗೆದ್ದರೆ ಮರಿ ಹುಲಿಯ?; ನಮ್ಮನ್ನು ತುಳಿಯಲು ಬಂದ್ರೆ ಸುಮ್ಮನಿರೊಲ್ಲ: ಬಿ.ವೈ. ವಿಜಯೇಂದ್ರ ವಿರುದ್ಧ ಅರುಣ್‌ ಸೋಮಣ್ಣ ವಾಗ್ದಾಳಿ

bjp politics Arun Somanna speaks against Vijayendra

#image_title

ಬೆಂಗಳೂರು: ಬಿಜಪಿಯಿಂದ (BJP Politics) ಸಚಿವ ವಿ. ಸೋಮಣ್ಣ ಹೊರಗೆ ಹೋಗಲು ನಡೆಸುತ್ತಿರುವ ಪ್ರಯತ್ನಗಳು ಹಾಗೂ ಈ ಕುರಿತ ಸುದ್ದಿಗಳಿಗೆ ಮೂಲ ಕಾರಣ ಈಗ ಬಹುತೇಕ ಸ್ಪಷ್ಟವಾಗಿದ್ದು, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಸೋಮಣ್ಣ ಪುತ್ರ ಅರುಣ್‌ ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.

ಮೂಡಲಪಾಳ್ಯದ ಕುರುಬರ ಸಂಘದ ಸಭೆಯಲ್ಲಿ ಅರುಣ್‌ ಸೋಮಣ್ಣ ಮಾತನಾಡಿದ ವಿಡಿಯೋ ತುಣುಕು ಎಲ್ಲೆಡೆ ಹರಿದಾಡುತ್ತಿದೆ. “ನಮ್ಮ ಪಕ್ಷದಲ್ಲಿ ಬಹಳ ಹಿರಿಯ ನಾಯಕರಿದ್ದಾರೆ. ಅವರ ಸೀಟನ್ನೇ ತ್ಯಾಗ ಮಾಡಿ ಈಗ ಮಗನ ಕೂರಿಸುತ್ತಿದ್ದಾರೆ. ಕರ್ನಾಟಕಕ್ಕೆ ಅವನೇ ನೆಕ್ಸ್ಟ್‌ ಲೀಡರ್‌ ಎನ್ನುತ್ತಿದ್ದಾರೆ. ಅವನಿಗೆ ಫೋನ್‌ ಮಾಡಿದರೆ ಏಕ ವಚನದಲ್ಲಿ ಮಾತನಾಡುವ ಮಹಾಪುರುಷ. ನನಗೂ ಹೀಗೆ ಮಾತನಾಡಲು ಬರುತ್ತದೆ ಎಂದು ನಾನೂ ಏಕವಚನದಲ್ಲಿ ಮಾತನಾಡಿದೆ” ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

ಈ ಕುರಿತು ಅರುಣ್‌ ಸೋಮಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಯಾವುದೋ ಕಾರ್ಯಕ್ರಮದಲ್ಲಿ ಮಾತನಾಡಿದನ್ನ ಅವರಿಗೆ ಅನುಕೂಲ ಆಗುವ ರೀತಿ ಬಳಸಿಕೊಳ್ಳುತ್ತಿದ್ದಾರೆ. ನಾನು ಆ ಮನುಷ್ಯನ ಜತೆ ಮಾತನಾಡಿದ್ದು ನಿಜ. ನನಗೆ ಏಕವಚನದಲ್ಲಿ ಮಾತನಾಡಿದ್ರು, ನಾನು ಏಕವಚನದಲ್ಲಿ ಮಾತನಾಡಿದೆ. ನನ್ನ ಪ್ರಕಾರ ಕೂಲಿ ಕೆಲಸ ಮಾಡೋನಿಗೆ ಅವನಿಗೆ ಆದ ಗೌರವ ಇರುತ್ತೆ. ಎಲ್ಲರಿಗೂ ಅವರದ್ದವರದ್ದೇ ಗೌರವ ಇರುತ್ತೆ.

ಸೋಮಣ್ಣ ಅವರ ಕಾಣಿಕೆ ಪಕ್ಷಕ್ಕೆ ದೊಡ್ಡದು. ನಮ್ಮ ತಂದೆಗೆ ಅಪಮಾನವಾದ್ರೆ ಸಹಿಸಲ್ಲ. ಹೀಗಾಗಿ ನಾನು ಮಾತನಾಡಿದ್ದೇನೆ. ಸೋಮಣ್ಣ 2008 ರಲ್ಲಿ ಸೋಲೋಕೆ ಯಾರು ಕಾರಣ? 2013 ರಲ್ಲಿ ಸೋಲೋಕೆ ಕಾರಣ ಯಾರು? ಎಲ್ಲ ಚರ್ಚೆಗೆ ನಾನು ಸಿದ್ದನಿದ್ದೇನೆ. ಇಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿ ಮುಖ್ಯವಲ್ಲ. ಶ್ಯಾಮಾಪ್ರಸಾದ್ ಮುಖರ್ಜಿ ಅವರನ್ನ ಪಕ್ಷ ಅಂತ ಹೇಳಲ್ಲ. ನಮ್ಮ ನಾಯಕರು ಎಂದು ಹೇಳ್ತೀವಿ. ಇವರನ್ನ ಪಕ್ಷದ ಭಾಗ ಎನ್ನದೇ ಇವರೇ ಬಿಜೆಪಿ ಎಂದು ಹೇಳಲು ಸಾಧ್ಯವೆ?

ಸೋಮಣ್ಣ ನಮ್ಮ ತಂದೆ ಆಗಿರಬಹುದು. ಅವರಿಗೆ ಕೊಟ್ಟ ಎಲ್ಲ ಜವಾಬ್ದಾರಿ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಹಲವು ಚುನಾವಣೆಗಳನ್ನ ಗೆಲ್ಲಿಸಿಕೊಂಡು ಬಂದಿದ್ದಾರೆ. ಒಂದು ಚುನಾವಣೆ ಗೆದ್ದ ತಕ್ಷಣ ರಾಜಾಹುಲಿ, ಮಗ ಮರಿಹುಲಿ ಎಂದು ಕರೆದ್ರೆ? ಚುನಾವಣೆಯಲ್ಲಿ ಎಲ್ಲರ ಪಾತ್ರವೂ ಇರುತ್ತೆ. ನಮ್ಮ ತಂದೆಗೆ ಅಪಮಾನವಾದ್ರೆ ಸಹಿಸುವ ಪ್ರಶ್ನೆಯೇ ಇಲ್ಲ.

ನನಗೂ ವಿಜೇಯೇಂದ್ರ ಗೂ ವೈಯುಕ್ತಿಕ ದ್ವೇಷ ಇಲ್ಲ. ಆದ್ರೆ ನಮ್ಮ ಅಪ್ಪ 1994 ರಲ್ಲಿ ಶಾಸಕರಾಗಿದ್ರು ಆಗ ಅವರ ತಂದೆ ಎಲ್ಲಿದ್ರು ಅನ್ನೋದನ್ನ ತಿಳಿದುಕೊಳ್ಳಲಿ. ಆನಂತಕುಮಾರ್ ಜತೆ ಮಾತುಕತೆ ಆಡಿ ಸಮಾಧಾನ ಮಾಡಿದ್ದು ಯಾರು ಎಂದು ತಿಳಿದುಕೊಳ್ಳಲಿ. ಅದು ಬಿಟ್ಟು ನಮ್ಮನ್ನ ತುಳಿಯಲು ಬಂದ್ರೆ ನಾವು ಸಹಿಸುವುದಿಲ್ಲ ಎಂದರು.

ಈ ವಿಡಿಯೋ ಲಿಕ್ ಹಿಂದೆ ಕೃಷ್ಣಪ್ಪ ಮತ್ತು ಮಗನ ಕೈವಾಡ ಸಹ ಇರುತ್ತೆ. ಜತೆಗೆ ನಮ್ಮ ಹಿತೈಷಿಗಳ ಕೈವಾಡ ಸಹ ಇರುತ್ತೆ. ನಾನು ಯಾರನ್ನು ಸಹ ದ್ವೇಷ ಮಾಡಲ್ಲ. ಈಗಲೂ ವಿಜೇಯೇಂದ್ರ ಕರೆದ್ರೆ ಮಾತನಾಡಕ್ಕೆ ರೆಡಿ ಇದ್ದೇನೆ. ಇಲ್ಲ ನನ್ನ ವಿರುದ್ಧ ಚರ್ಚೆ ಬರುತ್ತಾರಾ ಬರಲಿ. ಎಲ್ಲ ವಿಚಾರಗಳನ್ನ ಸಹ ಚರ್ಚೆ ಮಾಡೋಣ, ನಾನು ಚರ್ಚೆಗೆ ಸಿದ್ದನಿದ್ದೇನೆ. ನಾನು ಹೆದರಿಕೊಳ್ಳುವುದು ಬರೀ ನನ್ನ ತಂದೆ ತಾಯಿ ಮತ್ತು ದೇವರಿಗೆ ಮಾತ್ರ. ಇವರಿಗೆಲ್ಲ ನಾನು ಹೆದರಿಕೊಳ್ಳುವುದಿಲ್ಲ ಎಂದರು.

Exit mobile version