ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ (Rajyasabha Election) ವಿಪ್ ಉಲ್ಲಂಘಿಸಿದ (Violation of Whip) ನಮಗೆ ಬಿಜೆಪಿ ಕಡೆಯಿಂದ ನೋಟಿಸ್ ಕೊಟ್ಟಿದ್ದಾರೆ (BJP Politics). ಅಡ್ಡ ಮತದಾನ ಮಾಡಿದ ನನಗೆ ಒಂದು ಪುಟದ ನೋಟಿಸ್ ಕೊಟ್ಟಿದ್ದರು. ಅದಕ್ಕೆ 170 ಪುಟದ ಉತ್ತರ ಕೊಟ್ಟಿದ್ದೇನೆ ಎಂದು ಯಶವಂತಪುರದ ಬಿಜೆಪಿ ರೆಬೆಲ್ ಶಾಸಕ ಎಸ್.ಟಿ. ಸೋಮಶೇಖರ್ (ST Somashekhar) ಹೇಳಿದ್ದಾರೆ. ಅದಕ್ಕೆ ಧ್ವನಿಗೂಡಿಸಿರುವ ಇನ್ನೊಬ್ಬ ರೆಬೆಲ್ ಶಾಸಕ ಯಲ್ಲಾಪುರದ ಶಿವರಾಮ್ ಹೆಬ್ಬಾರ್ (Shivarama Hebbar) ನನ್ನದು ಅಡ್ಡ ಮತದಾನವಲ್ಲ, ಮತ ಹಾಕಲು ಹೋಗಿಲ್ಲ. ನಾನು ಸೋಮಶೇಖರ್ ಅವರಿಗಿಂತ ಒಂದೆರಡು ಪುಟ ಕಡಿಮೆಯ ಉತ್ತರ ನೀಡಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿಯ ಬಂಡಾಯ ಶಾಸಕರು (BJP rebel MLAs) ಎಂದು ಗುರುತಿಸಿಕೊಂಡಿರುವ ಈ ಇಬ್ಬರು ಗುರುವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಒಂದೇ ಕಾರಿನಲ್ಲಿ ಆಗಮಿಸಿ, ಗೆಳೆಯರಂತೆ ಹೆಗಲಿಗೆ ಕೈ ಹಾಕಿ ಮನೆಯೊಳಗೆ ತೆರಳಿದರು. ಡಿ.ಕೆ ಶಿವಕುಮಾರ್ ಅವರ ಜತೆ ಮಾತುಕತೆ ನಡೆಸಿ ಹೊರಗೆ ಬಂದ ಸೋಮಶೇಖರ್, ಉಪಮುಖ್ಯಮಂತ್ರಿಗಳು ಒಂದು ತಿಂಗಳಿನಿಂದ ಸಿಕ್ಕಿರಲಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮನವಿ ಮಾಡಿದ್ದೇನೆ. ಯಾವುದೇ ರಾಜಕೀಯ ಮಾತನಾಡಿಲ್ಲ ಎಂದರು. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ನಡೆದ ಈ ಭೇಟಿ ಮಹತ್ವವನ್ನು ಪಡೆದುಕೊಂಡಿದೆ.
ರಾಜ್ಯಸಭೆ ಅಡ್ಡ ಮತದಾನ: ನೋಟಿಸ್ ಉತ್ತರ ಕೊಟ್ಟಿದ್ದೇನೆ ಎಂದ ಸೋಮಶೇಖರ್
ರಾಜ್ಯಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪರವಾಗಿ ಮತ ಹಾಕಿದ್ದಕ್ಕೆ ನನಗೆ ಬಿಜೆಪಿಯಿಂದ ನೋಟಿಸ್ ಬಂದಿದೆ. ಅವರು ಒಂದು ಪುಟದ ನೋಟಿಸ್ ಕೊಟ್ಟಿದ್ದರು. ನಾನು 170 ಪುಟದ ಉತ್ತರ ಕೊಟ್ಟಿದ್ದೇನೆ. ಬೇಕಿದ್ದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು ಸೋಮಶೇಖರ್.
ಬಿಜೆಪಿಯವರು ನೀಡಿದ್ದ ನೋಟಿಸ್‌ಗೆ ದೀರ್ಘ ಉತ್ತರ ನೀಡಿದ್ದೇವೆ. ಯಾವ್ಯಾವ ರಾಜ್ಯದಲ್ಲಿ ಕೋರ್ಟ್ ತೀರ್ಪು ಏನು ಬಂದಿದೆ? ಯಾವ್ಯಾವ ರಾಜ್ಯದಲ್ಲಿ ಬಿಜೆಪಿ ಇಂತಹ ವಿಚಾರದಲ್ಲಿ ಯಾವ ನಿರ್ಧಾರ ಕೈಗೊಂಡಿದೆ? ಎಲ್ಲಾ ದಾಖಲೆ ಸೇರಿಸಿ 170 ಪುಟಗಳ ಉತ್ತರ ಕೊಟ್ಟಿದ್ದೇನೆ ಎಂದು ಸೋಮಶೇಖರ್ ಹೇಳಿದರು. ಹರಿಯಾಣ, ಗುಜರಾತ್‌ನಲ್ಲಿ ಬಿಜೆಪಿ ನಿರ್ಧಾರ ಏನಾಗಿತ್ತು. ಅಲ್ಲಿ ಬೇರೆ ನಿಲುವು, ಇಲ್ಲಿ ಬೇರೆ ನಿಲುವು ಇರುವುದಕ್ಕೆ ಹೇಗೆ ಸಾಧ್ಯ ಎಂಬ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದೇನೆ. ಕ್ರಮಕ್ಕಾಗಿ ಕಾಯುತ್ತಿದ್ದೇನೆ ಎಂದು ಎಸ್ ಟಿ ಸೋಮಶೇಖರ್ ಹೇಳಿದರು.
ಸೋಮಶೇಖರ್ ಅವರದ್ದು ಅಡ್ಡ ಮತದಾನ. ನನ್ನದು ಮತದಾನಕ್ಕೆ ಗೈರು. ಹಾಗಾಗಿ ನೋಟಿಸ್‌ಗೆ ಬೇರೆ ರೀತಿಯ ಉತ್ತರ ಕೊಟ್ಟಿದ್ದೇನೆ. ನನ್ನದು ಸೋಮಶೇಖರ್ ಉತ್ತರಕ್ಕಿಂತ 2 ಪುಟ ಕಡಿಮೆ ಇರಬಹುದು. ಆದರೆ ಎಲ್ಲಾ ದಾಖಲೆ ಸಹಿತ ಉತ್ತರ ಕೊಟ್ಟಿದ್ದೇನೆ ಎಂದು ಶಿವರಾಂ ಹೆಬ್ಬಾರ್ (Shivaram Hebbar) ಹೇಳಿದರು.
ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಸೋಮಶೇಖರ್ ಕಾಂಗ್ರೆಸ್ ಪರವಾಗಿ ಅಡ್ಡ ಮತದಾನ ಮಾಡಿದ್ದರೆ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರು ಹಾಜರಿ ಹಾಕಿದ್ದರು. ವಿಪ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು.
ಇದನ್ನೂ ಓದಿ : HD Kumaraswamy : ಮಿಸ್ಟರ್ ಶಿವಕುಮಾರ್ ಆಸ್ಪತ್ರೆಗೆ ಹೋಗಿ ಬರ್ತೀನಿ, ಆಮೇಲೆ ನೋಡ್ಕೊತೀನಿ!
BJP Politics : ಶೋಭಾ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದ ಸೋಮಶೇಖರ್
ಬೆಂಗಳೂರು ಉತ್ತರದ ಲೋಕಸಭಾ ಅಭ್ಯರ್ಥಿಯಾಗಿರುವ ಶೋಭಾ ಕರಂದ್ಲಾಜೆ ಅವರು ನನ್ನ ವಿರುದ್ಧ ಮಾತನಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಬಂದು ಬೆಂಕಿ ಉಂಡೆ ಉಗುಳಿದ್ದಾರೆ, ದ್ವೇಷ ಭಾಷಣ ಮಾಡಿದ್ದಾರೆ. ನನ್ನ ಕ್ಷೇತ್ರದಲ್ಲಿ ನಾನೇ ಪೊಲೀಸ್ ಪ್ರೋಟೆಕ್ಷನ್ ತಗೊಂಡು ಓಡಾಡುವ ಪರಿಸ್ಥಿತಿ ಬಂದಿದೆ. ನಾನು ಯಾಕೆ ಅವರ ಪರ ಕೆಲಸ ಮಾಡಲಿ. ನನ್ನ ವಿರುದ್ಧ ಮಾತನಾಡುವವರ ಪರ ಕೆಲಸ ಮಾಡಲ್ಲ. ನನ್ನ ತಪ್ಪಿದ್ರೆ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.