Site icon Vistara News

Janatha Darshan : ಹಣ ಲೂಟಿ ಯಾಕೆ; ಜನತಾ ದರ್ಶನ ಮಾಡುತ್ತಿರುವ ಸಿಎಂಗೆ ಬಿಜೆಪಿಯಿಂದ 9 ಪ್ರಶ್ನೆ!

CM Janatha Darshan BJP

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಎರಡನೇ ಅವಧಿಯಲ್ಲೂ ಬಹು ಜನಪ್ರಿಯ ಜನತಾ ದರ್ಶನವನ್ನು (Janatha Darshan) ಮತ್ತೆ ಆರಂಭ ಮಾಡಿದ್ದಾರೆ. ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ (Home Office Krishna) ಆರಂಭಗೊಂಡ ಜನತಾ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಸಿಎಂ ಅವರು ಕೂಡಾ ಭಾರಿ ಮುತುವರ್ಜಿಯಿಂದ ಇದರಲ್ಲಿ ಪಾಲ್ಗೊಳ್ಳುತ್ತಿದ್ದು, ಸ್ವೀಕರಿಸುವ ಪ್ರತಿಯೊಂದು ದೂರಿನ ಬಗ್ಗೆ ಕಾಳಜಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಇದರ ನಡುವೆಯೇ ಭಾರತೀಯ ಜನತಾ ಪಕ್ಷ (BJP Questions) ಈ ಜನತಾ ದರ್ಶನಕ್ಕೆ ಸಂಬಂಧಿಸಿ ಕೆಲವೊಂದು ಪ್ರಶ್ನೆಗಳನ್ನು ಮುಂದಿಟ್ಟಿದೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಈ ಜನತಾ ದರ್ಶನದಲ್ಲಿ ಯಾವ್ಯಾವ ಪ್ರಶ್ನೆಗಳು ಎದುರಾಗಬಹುದು ಎಂಬುದನ್ನು ಉಲ್ಲೇಖಿಸಿ ಬಿಜೆಪಿ ಪ್ರಶ್ನೆಗಳನ್ನು ಮುಂದಿಟ್ಟಿದೆ. ಇದು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ರಾಜಕೀಯ ಕದನವನ್ನು ಪ್ರತಿಫಲಿಸಿದೆ.

ಇದನ್ನೂ ಓದಿ : Janatha Darshan : ಸಿಎಂ ತಲೆಗೆ ಕೈ ಇಟ್ಟು ಆಶೀರ್ವದಿಸಿದ ಅಜ್ಜಿ; ಹೆಗಲುಮುಟ್ಟಿ ಸಿಎಂ ಸಾಂತ್ವನ

ಬಿಜೆಪಿ ಕೇಳಿದ ಪ್ರಶ್ನೆಗಳೇನು?

ಕನ್ನಡಿಗರ ಕಿವಿ ಮೇಲೆ ಹೂವಿಟ್ಟು ಛೀ ಥೂ ಎನಿಸಿಕೊಳ್ಳುತ್ತಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ
ಅವರಿಗೆ ಜನತಾ ದರ್ಶನದಲ್ಲಿ ಎದುರಾಗುವ ಪ್ರಶ್ನೆಗಳು ಇವು- ಎಂದು ಬಿಜೆಪಿ ಹೇಳಿದೆ.

1. ಮೋದಿ ಸರ್ಕಾರದ 5 ಕೆಜಿ ಅಕ್ಕಿ ನೀವು ಕೊಡುತ್ತಿಲ್ಲ ಏಕೆ?
2. ನೀವೇ ಹೇಳಿದ ಹತ್ತು ಕೆಜಿ ಅಕ್ಕಿ ಕೊಟ್ಟಿಲ್ಲ ಏಕೆ?
3. ಗೃಹ ಲಕ್ಷ್ಮಿ ಹೆಸರಲ್ಲಿ ಸ್ವಾಭಿಮಾನಿ ಮಹಿಳೆಯರನ್ನು ವಂಚಿಸಿದ್ದು ಏಕೆ?
4. ಕನ್ನಡಿಗರ ಹಣವನ್ನು ಲೂಟಿ ಮಾಡಿ ಹೈಕಮಾಂಡ್ ಹೊಟ್ಟೆ ತುಂಬಿಸುತ್ತಿರುವುದು ಸರಿಯೇ?
5. ಬರಗಾಲವನ್ನು ನಿರ್ವಹಣೆ ಮಾಡಲಿಲ್ಲ, ಪರಿಹಾರವೂ ಕೊಟ್ಟಿಲ್ಲ ಏಕೆ?
6. ನಾಡಿನ ಜನತೆ ಸಂಕಷ್ಟದಲ್ಲಿರುವಾಗ ನಿಮಗೆ ಪಂಚ ರಾಜ್ಯ ಚುನಾವಣೆ ಮುಖ್ಯವೇ?
7. ನಮ್ಮನ್ನು ಉದ್ಧಾರ ಮಾಡುತ್ತೇವೆಂದು ಬಂದು ಬೆಲೆ ಏರಿಕೆ ಮೂಲಕ ತುಳಿದಿದ್ದು ಸರಿಯೇ?
8. ಕಾವೇರಿಯನ್ನು ಕಳ್ಳತನದಿಂದ ಬಿಟ್ಟು ನಮಗೆ ವಂಚಿಸಿದ್ದೇಕೆ?
9.ತೆಲಂಗಾಣ ಚುನಾವಣೆ ಹಣವನ್ನು ಮಂಚದ ಕೆಳಗೆ ಬಚ್ಚಿಟ್ಟಿದ್ದು ಅಲ್ಲದೆ ಮೋಜು ಮಾಡಲು ಸರ್ಕಾರ ಅಲ್ಲಿಗೆ ಟೂರ್ ಹೋಗಿದ್ದೇಕೆ?
ಸ್ವಯಂಘೋಷಿತ ಆರ್ಥಿಕ ತಜ್ಞ ಮಜವಾದಿ ಸಿದ್ದರಾಮಯ್ಯ ಅವರ ಬಳಿ ಜನರ ಈ ಪ್ರಶ್ನೆಗಳಿಗೆ ಒಂದಕ್ಕಾದರೂ ಉತ್ತರವಿದೆಯೇ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

Exit mobile version