ಬೆಂಗಳೂರು: ಯಾವ ಕಮಿಷನ್ ಅಸ್ತ್ರದ (Commission Politics) ಮೂಲಕ ಬಿಜೆಪಿಯನ್ನು ಮಣಿಸಿ ಕಾಂಗ್ರೆಸ್ ರಾಜ್ಯದಲ್ಲಿ (Karnataka Congress) ಅಧಿಕಾರಕ್ಕೆ ಏರಿತ್ತೋ ಅದೇ ಕಮಿಷನ್ ಅಸ್ತ್ರ ಇದೀಗ ಕೈಪಾಳಯಕ್ಕೆ ತಿರುಗುಬಾಣವಾಗಿದೆ. ಇದುವರೆಗೆ ವರ್ಗಾವಣೆಯಲ್ಲಿ ಕಮಿಷನ್, ಗುತ್ತಿಗೆಯಲ್ಲಿ ಕಮಿಷನ್ ಎಂಬ ಆಪಾದನೆಗಳನ್ನು ಮಾಡುತ್ತಿದ್ದ ಬಿಜೆಪಿಗೆ ಈಗ ಗುತ್ತಿಗೆದಾರ ಅಂಬಿಕಾ ಪತಿ (Contractor Ambikapati) ಮನೆಯಲ್ಲಿ ಸಿಕ್ಕಿರುವ 42 ಕೋಟಿ ರೂ. ವರವಾಗಿ ಪರಿಣಮಿಸಿದೆ.
ಕಾಂಗ್ರೆಸ್ ಹೈಕಮಾಂಡ್ (Congress High command) ಪಾಲಿಗೆ ರಾಜ್ಯ ಎಟಿಎಂ ಸರ್ಕಾರ್ (ATM Sarkar) ಆಗಲಿದೆ ಎಂದು ಬಿಜೆಪಿ ಹಿಂದಿನಿಂದಲೇ ಆರೋಪಿಸಿಕೊಂಡು ಬಂದಿದೆ. ಅದಕ್ಕೆ ಪೂರಕವಾಗಿ ಪಂಚರಾಜ್ಯ ಚುನಾವಣೆಯ ಹೊತ್ತಿನಲ್ಲಿ ಸಿಕ್ಕಿರುವ ದೊಡ್ಡ ಮೊತ್ತದ ಹಣವನ್ನು ಈ ಆರೋಪಕ್ಕೆ ಸಾಕ್ಷಿಯಾಗಿ ನೀಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಮಿಷನ್ ಅಸ್ತ್ರವನ್ನು ಬಿಜೆಪಿ ಬಿಟ್ಟಿದೆ.
ಬಿಜೆಪಿಯ ಹಿರಿಯ ನಾಯಕರಾದ ಪ್ರಹ್ಲಾದ್ ಜೋಶಿ, ಸಿ.ಟಿ. ರವಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದಾರೆ. ಪಂಚರಾಜ್ಯಗಳ ಚುನಾವಣೆ ಗೆ ಗೆಲ್ಲಲು ಕಮಿಷನ್ ಕಲೆಕ್ಷನ್ ಮಾಡಿ ಕಳಿಸಿಕೊಡಿ ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ತಾಕೀತು ಮಾಡಿದೆ ಎನ್ನುವುದು ಪ್ರಲ್ದಾಹ್ ಜೋಶಿ ಮತ್ತು ಸಿ.ಟಿ. ರವಿ ಆರೊಪ. ಪ್ರಲ್ಹಾದ್ ಜೋಶಿ ಅವರು 1000 ಕೋಟಿ ರೂ. ಟಾರ್ಗೆಟ್ ಎಂದರೆ ಸಿ.ಟಿ ರವಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 2000 ಕೋಟಿ ಕಲೆಕ್ಷನ್ ಮಾಡುವ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರ ಜತೆಗೆ ರಾಜ್ಯ ಬಿಜೆಪಿ ಸಿದ್ದರಾಮಯ್ಯ ಅವರನ್ನು ಕಲೆಕ್ಷನ್ ಮಾಸ್ಟರ್ ಎಂದು ಚಿತ್ರಿಸಿ ಪೋಸ್ಟರ್ ಬಿಡುಗಡೆ ಮಾಡಿದೆ.
Karnataka CM – Karnataka Collection Master. pic.twitter.com/yEB5ekdtNo
— BJP Karnataka (@BJP4Karnataka) October 16, 2023
ಯಾವ ರಾಜ್ಯಕ್ಕೆ ಎಷ್ಟು ಹಣ?
ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇ ಹಂತದ ₹1000 ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು? ಎಂದು ಪ್ರಶ್ನೆ ಮಾಡಿ ತಾನೇ ಉತ್ತರ ಕೊಟ್ಟಿದೆ ಬಿಜೆಪಿ
ತೆಲಂಗಾಣ ಕಾಂಗ್ರೆಸ್‌ಗೆ ₹300 ಕೋಟಿ
ಮಿಜೋರಾಂ ಕಾಂಗ್ರೆಸ್‌ಗೆ ₹100 ಕೋಟಿ
ಛತ್ತಿಸ್‌ಗಢ ಕಾಂಗ್ರೆಸ್‌ಗೆ ₹200 ಕೋಟಿ
ರಾಜಸ್ಥಾನ ಕಾಂಗ್ರೆಸ್‌ಗೆ ₹200 ಕೋಟಿ
ಮಧ್ಯಪ್ರದೇಶ ಕಾಂಗ್ರೆಸ್‌ಗೆ ₹200 ಕೋಟಿ
ಕಮಿಷನ್, ಕಲೆಕ್ಷನ್ ಮೂಲಕ ಸಾವಿರ ಕೋಟಿ ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿ ಬಿದ್ದಿದೆ.
ರಾಜ್ಯದ @INCKarnataka ಕ್ಕೆ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇ ಹಂತದ ₹1000 ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು?
— BJP Karnataka (@BJP4Karnataka) October 16, 2023
✔ ತೆಲಂಗಾಣ ಕಾಂಗ್ರೆಸ್‌ಗೆ ₹300 ಕೋಟಿ
✔ ಮಿಜೋರಾಂ ಕಾಂಗ್ರೆಸ್‌ಗೆ ₹100 ಕೋಟಿ
✔ ಛತ್ತಿಸ್‌ಗಢ ಕಾಂಗ್ರೆಸ್‌ಗೆ ₹200 ಕೋಟಿ
✔ ರಾಜಸ್ಥಾನ ಕಾಂಗ್ರೆಸ್‌ಗೆ ₹200 ಕೋಟಿ
✔…
ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾದ ಬಿಜೆಪಿ
ಕಮಿಷನ್ ಅಸ್ತ್ರವನ್ನು ಹಿಡಿದುಕೊಂಡು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ. ಸೋಮವಾರದಿಂದಲೇ ಸರ್ಕಾರದ ವಿರುದ್ಧ 224 ಕ್ಷೇತ್ರಗಳಲ್ಲೂ ಕಮಿಷನ್ ಸರ್ಕಾರ ಎಂದು ಪ್ರತಿಭಟನೆಗೆ ಬಿಜೆಪಿ ರೆಡಿ ಆಗಿದೆ.
ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವ ನಾಯಕರಿಗೆ ಈ ಟಾಸ್ಕ್ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ಈ ಕಲೆಕ್ಷನ್ ನಡೆಸುತ್ತಿರುವುದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಂದು ಹೇಳಿದ್ದಾರೆ.
2023ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಂದಿನ ಬಿಜೆಪಿ ಸರ್ಕಾರದ ವಿರುದ್ಧ ಬಳಸಿದ್ದ ಅಸ್ತ್ರವನ್ನು ಈಗ ಕಾಂಗ್ರೆಸ್ ವಿರುದ್ಧ ಬಳಸಲು ನಿರ್ಧಾರ ಮಾಡಲಾಗಿದೆ. ಅಂದು 40% ಹಾಗೂ ಪೇಸಿಎಂ ಅಭಿಯಾನ ಮಾಡಿ ಜನಮನದಲ್ಲಿ ಬಿಜೆಪಿ ವಿರೋಧಿ ಅಲೆ ಸೃಷ್ಟಿ ಮಾಡಿಸಿದಂತೆ ಈಗ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಕಮಿಷನ್ ಅಸ್ತ್ರ ಬಳಸಲು ತೀರ್ಮಾನ ಮಾಡಲಾಗಿದೆ.
ಇದನ್ನೂ ಓದಿ: Karnataka Politics : ರಾಜ್ಯ ಕಾಂಗ್ರೆಸ್ ಸರ್ಕಾರ ʼಪರ್ಸೆಂಟೇಜ್ ಪಟಾಲಂʼ: ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯ
ಕೆಪಿಸಿಸಿ ಅಂದ್ರೆ ಕರ್ನಾಟಕ ಪ್ರದೇಶ ಕಮಿಷನ್ ಕಮಿಟಿ!
ರಾಜ್ಯದ ಎಲ್ಲ 224 ಕ್ಷೇತ್ರಗಳ ಪ್ರತಿ ಬೂತ್‌ಗೂ ಕಮಿಷನ್ ಅಸ್ತ್ರವನ್ನು ತೆಗೆದುಕೊಂಡು ಹೋಗಲು ನಿರ್ಧಾರ ಮಾಡಲಾಗಿದೆ ಈ ವೇಳೆ ಕೆಪಿಸಿಸಿ ಅಂದ್ರೆ ಕರ್ನಾಟಕ ಪ್ರದೇಶ ಕಮಿಷನ್ ಕಮಿಟಿ ಎಂದು ಪ್ರಚಾರ ಮಾಡಲು ನಿರ್ಧಾರ ಮಾಡಲಾಗಿದೆಯಂತೆ.