ಚಿಕ್ಕಮಗಳೂರು: ನಾನು ಅಧಿಕಾರಕ್ಕಾಗಿ ಬಂದ ವಲಸೆ ಪ್ರಾಣಿ ಅಲ್ಲ. ಅಧಿಕಾರಕ್ಕಾಗಿ ಬೇರೆ-ಬೇರೆ ಪಕ್ಷಗಳನ್ನು ಬದಲಾವಣೆ ಮಾಡುವವನೂ ಅಲ್ಲ ಎಂದು ಕಾಂಗ್ರೆಸ್ ಹಿರಿಯ ರಾಜಕಾರಣಿ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಕೆಲವರು ಕಾಂಗ್ರೆಸ್ಸೇ ನಮ್ದು ಅಂತಿದ್ದಾರೆ. ಅದಕ್ಕೆ ನಮ್ಮ ಅಸಮಾಧಾನ ಅಷ್ಟೇ. ಸಮಾಧಾನ-ಅಸಮಾಧಾನ ತಿಳಿದುಕೊಂಡವರಿಗೆ ಗೊತ್ತಾಗುತ್ತದೆ. ಸಿದ್ದರಾಮಯ್ಯ ಅವರು ರಾಜ್ಯದ ಸಿಎಂ. ಅವರ ಮೇಲೆ ಏಕೆ ಸಿಟ್ಟಾಗೋಣ? ಎಂದು ಹೇಳಿದರು.
ನಿಗಮ ಮಂಡಳಿ ನೇಮಕ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಬಿ.ಕೆ. ಹರಿಪ್ರಸಾದ್, ಅದನ್ನು ನೀವು ಸರ್ಕಾರದವರನ್ನೇ ಕೇಳಬೇಕು, ನಾನು ಸರ್ಕಾರದಲ್ಲಿ ಇಲ್ಲ. ನಾನು ಹೊರಗಡೆ ಇದ್ದೇನೆ. ಯಾವ ಮಾನದಂಡದಲ್ಲಿ ನಿಗಮ – ಮಂಡಳಿ ಮಾಡಿತ್ತಿದ್ದಾರೋ ಅವರನ್ನೇ ಕೇಳಬೇಕು. ಯಾವ ಮಾನದಂಡದಲ್ಲಿ ಮಾಡುತ್ತಿದ್ದಾರೆ ಎಂಬುದು ನನಗೇ ಗೊತ್ತಿಲ್ಲ. ಅಲ್ಲದೆ, ಮಾಡುತ್ತಿರುವುದೂ ಗೊತ್ತಿಲ್ಲ, ನಿಂತಿರುವುದೂ ಗೊತ್ತಿಲ್ಲ. ಮುಂದಾಗುವುದೂ ಗೊತ್ತಿಲ್ಲ ಎಂದು ಹೇಳಿದರು.
ನಾನೇಕೆ ಕಾಂಗ್ರೆಸ್ ಮೇಲೆ ಅಸಮಾಧಾನ ಹೊಂದಲಿ. ನಾನು ವಿದ್ಯಾರ್ಥಿ ಆಗಿದ್ದಾಗಿಂದಲೂ ಕಾಂಗ್ರೆಸ್ಸಿನಲ್ಲಿ ಇದ್ದೇನೆ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.
Ram Mandir: ನಾವು ಭೂತದ ಪೂಜೆ ಮಾಡೋರು ದೈವದ ಬಳಿಗೇ ಹೋಗ್ತೇವೆ: ಬಿ.ಕೆ. ಹರಿಪ್ರಸಾದ್
ಅಯೋಧ್ಯೆ ರಾಮಜನ್ಮಭೂಮಿಯ (Ram Janmabhoomi) ರಾಮ ಮಂದಿರದಲ್ಲಿ (Ram Mandir) ಜನವರಿ 22ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೋಗುವುದಕ್ಕೆ ನನಗೆ ಆಮಂತ್ರಣ ಏನೂ ಬೇಡ. ಆದರೆ, ಅಯೋಧ್ಯೆಯಲ್ಲಿ ಜಗದ್ಗುರು ಇಲ್ಲ, ಇರೋದು ವಿಶ್ವಗುರು. ನಾವು ಭೂತ, ದೈವದ ಪೂಜೆ ಮಾಡೋರು. ಹೀಗಾಗಿ ಭೂತದ ಬಳಿಯೇ ಹೋಗುತ್ತೇವೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ (BK Hariprasad) ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಸೋಮವಾರ (ಜ. 22) ರಾಮ ಮಂದಿರ ಉದ್ಘಾಟನೆಯಾಗುತ್ತಿದೆ. ದೇವರ ಕಾರ್ಯಕ್ರಮಕ್ಕೆ ಆಮಂತ್ರಣ-ಗೀಮಂತ್ರಣ ಬೇಡ. ಆದರೆ, ಅಲ್ಲಿ ಜಗದ್ಗುರು ಇಲ್ಲ. ಇರೋದು ವಿಶ್ವಗುರುವಾಗಿದ್ದಾರೆ. ದೇಶದಲ್ಲಿ ಮೊದಲು ಹೇಳಿಕೆ ನೀಡಿದ್ದೇ ನಾನು. ಚಿಕ್ಕವರಿದ್ದಾಗ ಶಂಕರಾಚಾರ್ಯರು ಹಿಂದು ಧರ್ಮದ ಮುಖ್ಯಸ್ಥರು ಎಂದು ಹೇಳಿಕೊಟ್ಡಿದ್ದಾರೆ. ಶಂಕರರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡಿದರೆ ಅದು ಧಾರ್ಮಿಕ ಕಾರ್ಯಕ್ರಮವಾಗುತ್ತದೆ. ಆದರೆ, ಅಲ್ಲಿಗೆ ಶಂಕರಾಚಾರ್ಯರು ಹೋಗಿಲ್ಲ. ಅಲ್ಲಿಗೆ ಹೋಗಿರೋದು ವಿಶ್ವಗುರು ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ವಿಶ್ವಗುರು ಜಗದ್ಗುರು ಅಲ್ಲ. ವಿಶ್ವಗುರು ಏನೆಂದು ದೇಶಕ್ಕೆ ಗೊತ್ತು. ನಾಲ್ಕು ಶಂಕರಾಚಾರ್ಯರಲ್ಲಿ ಇಬ್ಬರು ಈ ಕಾರ್ಯಕ್ರಮದ ವಿರುದ್ಧ ನಿಂತಿದ್ದರೆ, ಮತ್ತಿಬ್ಬರು ತಟಸ್ಥರಾಗಿ ಉಳಿದಿದ್ದಾರೆ. ಅದು ಬಿಜೆಪಿಯ ವಿಶ್ವಗುರು ನಡೆಸುತ್ತಿರುವ ರಾಜಕೀಯ ಕಾರ್ಯಕ್ರಮವಾಗಿದೆ. ಆಮಂತ್ರಣ ಕೊಡೋಕೆ ಇವರು ಯಾರು? ರಾಮ ಫೋನ್ ಮಾಡಿ ಹೇಳಿದ್ದನಾ? ಈ ಕಾರ್ಯಕ್ರಮವನ್ನು ಶಂಕರಾಚಾರ್ಯರು ಮಾಡಿದ್ದರೆ ನಮಗೆ ಆಮಂತ್ರಣ ಬೇಡವಾಗಿತ್ತು ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.
ಇದನ್ನೂ ಓದಿ: Ram Mandir: ಫ್ಯಾಮಿಲಿ ಜತೆ ಅಯೋಧ್ಯೆಯತ್ತ ಎಚ್.ಡಿ ದೇವೇಗೌಡ; ಐತಿಹಾಸಿಕ ಕಾರ್ಯಕ್ರಮವೆಂದ ಮಾಜಿ ಪ್ರಧಾನಿ
ಭೂತದ ಬಳಿಯೇ ಹೋಗುತ್ತೇವೆ
ದೇಶದಲ್ಲಿ 33 ಕೋಟಿ ದೇವರಿದ್ದಾರೆ. ಎಲ್ಲಾದರೂ ಹೋಗುತ್ತೇವೆ. ದೇವರ ಬಳಿ ಹೋಗಬೇಕು, ಇಂಥ ದೇವರ ಬಳಿಯೇ ಹೋಗಬೇಕಾ? ನಾವು ಭೂತ, ದೆವ್ವದ ಪೂಜೆ ಮಾಡುವವರು, ಭೂತದ ಬಳಿಯೇ ಹೋಗುತ್ತೇವೆ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.