Site icon Vistara News

Blast in Bengaluru : ಬ್ರಾಂಡ್‌ ಬೆಂಗಳೂರು VS ಬಾಂಬ್‌ ಬೆಂಗಳೂರು; ಬಿಜೆಪಿ ಲೇವಡಿಗೆ ಡಿಕೆಶಿ ಗರಂ

Blast in Bengalluru DKShivakumar

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ (Rameshwaram Cafe) ಬಾಂಬ್‌ ಸ್ಫೋಟ ಪ್ರಕರಣಕ್ಕೆ (Blast in Bengaluru) ಸಂಬಂಧಿಸಿ ಬಿಜೆಪಿ ಮತ್ತು ಕಾಂಗ್ರೆಸ್‌ (BJP Vs Congress) ನಡುವೆ ಭಾರಿ ಜಗಳ್ಬಂದಿ ನಡೆದಿದೆ. ಕಾಂಗ್ರೆಸ್‌ ಸರ್ಕಾರ ಬ್ರಾಂಡ್‌ ಬೆಂಗಳೂರು (Brand Bengaluru) ಮಾಡುತ್ತೇವೆ ಎಂದು ಹೇಳಿತ್ತು, ಈಗ ಬಾಂಬ್‌ ಬೆಂಗಳೂರು (Bomb Bengaluru) ಮಾಡಿದೆ ಎಂದು ಬಿಜೆಪಿ ಲೇವಡಿ ಮಾಡಿದೆ. ಇದನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Sihivakumar) ತೀವ್ರವಾಗಿ ಖಂಡಿಸಿದ್ದಾರೆ. ಬಿಜೆಪಿ ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿ ರಾಜಕೀಯ ಮಾಡುತ್ತಿದ್ದು, ಬೆಂಗಳೂರಿನ ಇಮೇಜ್‌ಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿದ್ದಾರೆ.

ನಾವು ರಾಜೀನಾಮೆ ಕೊಡಬೇಕಾ? ಕೊಡ್ತೀವಿ ತಗೊಳ್ಳಿ ಎಂದ ಡಿ.ಕೆ ಶಿವಕುಮಾರ್‌

ಬೆಂಗಳೂರಿನಲ್ಲಿ ನಡೆದ ಸ್ಪೋಟಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಸರ್ಕಾರ ರಾಜೀನಾಮೆ ನೀಡಬೇಕು ಎಂಬ ಬಿಜೆಪಿ ಆಗ್ರಹಕ್ಕೆ ಉತ್ತರಿಸಿದ ಅವರು, ಬಿಜೆಪಿಯವರಿಗೇನು ನಾವು ರಾಜೀನಾಮೆ ಕೊಡಬೇಕಾ? ಅವರಿಗೇನು ರಾಜೀನಾಮೆ ಬೇಕೋ ಕಳಿಸ್ತೀವಿ ತೆಗೆದುಕೊಳ್ಳಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬಿಜೆಪಿಯವರು ಕೇವಲ ರಾಜಕೀಯ ಮಾಡ್ತಿದ್ದಾರೆ ಅಷ್ಟೇ. ಕರ್ನಾಟಕದ ಘನತೆಗೆ ಧಕ್ಕೆ ತರುತ್ತಿದ್ದಾರೆ. ಬೆಂಗಳೂರಿನ ಇಮೇಜ್‌ಗೆ ಧಕ್ಕೆ ತರುತ್ತಿದ್ದಾರೆ ಎಂದರು.

ಅವರ ಅವಧಿಯಲ್ಲಿ ಕರ್ನಾಟಕದಲ್ಲಿ ಏನೆಲ್ಲಾ ಆಯ್ತು ಎಂಬುದನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ. ಈ ವಿಚಾರವಾಗಿ ರಾಜಕೀಯ ಮಾಡಲು ನನಗೆ ಇಚ್ಛೆ ಇಲ್ಲ. ಈ ಸಮಯದಲ್ಲಿ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿ ಬಗ್ಗೆ ಅರಿವಿರಬೇಕು ಎಂದು ಡು.ಕೆ. ಶಿವಕುಮಾರ್‌ ಹೇಳಿದರು ಹೇಳಿದರು.

ಇದನ್ನು ಓದಿ : Blast in Bengaluru: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಕೇಸ್‌; ಅಗತ್ಯ ಬಿದ್ರೆ ಎನ್‌ಐಎಗೆ ವಹಿಸುತ್ತೇವೆ ಎಂದ ಸಿಎಂ

ಜವಾಬ್ದಾರಿ ಇಲ್ಲದೆ ಮಾತನಾಡುತ್ತಿರುವ ಬಿಜೆಪಿ

ಬಿಜೆಪಿಯವರು ಕರ್ನಾಟಕದ ಜನತೆಗೆ, ದೇಶಕ್ಕೆ ನೋವನ್ನುಂಟು ಮಾಡುತ್ತಿದ್ದು, ತಮ್ಮ ಗೌರವವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದ ಡಿಕೆ ಶಿವಕುಮಾರ್‌, ಅವರಿಗೆ ಕನಿಷ್ಠ ಪರಿಜ್ಞಾನವೂ ಇಲ್ಲ. ಸಮಯ ಪ್ರಜ್ಞೆ, ತಮ್ಮ ಜವಾಬ್ದಾರಿಯ ಅರಿವು ಇಲ್ಲದವರು ಈ ರೀತಿ ಮಾತನಾಡುತ್ತಾರೆ ಎನ್ನುವ ಮೂಲಕ ಇದು ಬ್ರಾಂಡ್ ಬೆಂಗಳೂರು ಅಲ್ಲ ಬಾಂಬ್ ಬೆಂಗಳೂರು ಎಂಬ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ತನಿಖೆ ವಿಚಾರವಾಗಿ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ಆಯಾಮದಲ್ಲೂ ತನಿಖೆ ಮಾಡಲಾಗುತ್ತಿದೆ. ಬೆಂಗಳೂರಿನ ಗೌರವ ರಕ್ಷಣೆಗೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್‌ ಹೇಳಿದರು.

ಬಾಂಬ್‌ ಬೆಂಗಳೂರು: ಡಿಕೆಶಿ ಕಿಡಿಗೆ ಅಶೋಕ್‌ ತಿರುಗೇಟು

ಬೆಂಗಳೂರನ್ನು ಬ್ರಾಂಡ್‌ ಬೆಂಗಳೂರು ಬದಲು ಬಾಂಬ್‌ ಬೆಂಗಳೂರು ಮಾಡಲಾಗುತ್ತಿದೆ ಎಂಬ ಬಿಜೆಪಿ ಟ್ವೀಟ್‌ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅದಕ್ಕೆ ತಿರುಗೇಟು ನೀಡಿದ ಆರ್‌ ಅಶೋಕ್‌ ಅವರು, ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಅಮೆರಿಕ, ಮಂಡ್ಯ, ಬೆಳಗಾವಿಯಲ್ಲಿ ಆಗಿಲ್ಲ. ಬೆಂಗಳೂರಲ್ಲಿ ಆಗಿದ್ದಕ್ಕೆ ಬಾಂಬ್ ಬೆಂಗಳೂರು ಅಂದಿದೀನಿ. ಡಿಕೆಶಿ ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರೆ, ಆದ್ರೆ ಅದು ಬಾಂಬ್ ಬೆಂಗಳೂರು ಆಗ್ತಿದೆ. ಅದನ್ನೇ ನಾನು ಹೇಳಿರೋದುʼʼ ಎಂದು ಆರ್‌ ಅಶೋಕ್‌ ನುಡಿದರು.

Exit mobile version