ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಿಕಾರಿಪುರ ಶಾಸಕ ವಿಜಯೇಂದ್ರ (BY Vijayendra) ಅವರಿಗೆ 49ನೇನೇ ಹುಟ್ಟುಹಬ್ಬದ ಸಂಭ್ರಮ. ಈ ನಿಮಿತ್ತ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಅವರ ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ಬಿಜೆಪಿಯ ನೂರಾರು ಕಾರ್ಯಕರ್ತರು ಭೇಟಿ ನೀಡಿ ಶುಭ ಹಾರೈಸಿದ್ದಾರೆ.
ಕಾರ್ಯಕರ್ತರ ಜತೆಯಲ್ಲಿ ಬಿ.ವೈ. ವಿಜಯೇಂದ್ರ ಅವರು ಕೇಕ್ ಕಟ್ ಮಾಡಿ ಜನ್ಮದಿನವನ್ನು (Vijayendra Birthday) ಆಚರಣೆ ಮಾಡಿದ್ದಾರೆ. ಈ ವೇಳೆ ಮುಂದಿನ ಸಿಎಂ ವಿಜಯೇಂದ್ರ, ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.
ಇದನ್ನೂ ಓದಿ: Kambala Sports : ಬೆಂಗಳೂರು ಕಂಬಳಕ್ಕೆ 1 ಕೋಟಿ ರೂ. ಘೋಷಿಸಿದ ಸಿಎಂ; ಬರಲಿದ್ದಾರೆ ಲಕ್ಷ ಲಕ್ಷ ಜನ!
ಈ ವೇಳೆ ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಸಹಜವಾಗಿ ಹುಟ್ಟುಹಬ್ಬವನ್ನು ಕಾರ್ಯಕರ್ತರು ಆಚರಣೆ ಮಾಡುತ್ತಾರೆ. ಆದರೆ, ರಾಜ್ಯದಲ್ಲಿ ಬರ ಇರುವ ಕಾರಣ ವಿಜೃಂಭಣೆಯಿಂದ ಮಾಡಬೇಡಿ ಅಂತ ಕೇಳಿಕೊಂಡಿದ್ದೇನೆ. ರಾಜ್ಯಾಧ್ಯಕ್ಷ ಯಾರು ಆಗಬೇಕು ಅನ್ನೋದನ್ನು ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಬರಬೇಕು. ಹೀಗಾಗಿ ಕಾರ್ಯಕರ್ತರ ಜತೆಗೆ ರಾಜ್ಯ ಪ್ರವಾಸ ಮಾಡುತ್ತೇನೆ. ಕಾಂಗ್ರೆಸ್ ಹೆಚ್ಚು ಸೀಟ್ ಗೆಲ್ಲುತ್ತದೆ ಎಂದು ಅವರ ನಾಯಕರು ಹೇಳುತ್ತಿರುವುದು ಅವರ ಭ್ರಮ ಅಷ್ಟೇ ಎಂದು ಹೇಳಿದರು.
ನಮಗೆ ಆಪರೇಷನ್ ಮೇಲೆ ವಿಶ್ವಾಸ ಇಲ್ಲ. ಆರ್ಥಿಕ ಸಂಕಷ್ಟದಲ್ಲಿ ಸರ್ಕಾರ ಸಿಲುಕಿದೆ. ಆಡಳಿತ ಪಕ್ಷದ ಶಾಸಕರೇ ಕ್ಷೇತ್ರದಲ್ಲಿ ತಲೆ ಎತ್ತಿಕೊಂಡು ಓಡಾಡದೇ ಇರುವ ಪರಿಸ್ಥಿತಿ ಬಂದಿದೆ. ಆರ್ಥಿಕ ಪರಿಸ್ಥಿತಿ ಬಗ್ಗೆ ಸಿಎಂ ಕೂಡ ಮಾತನಾಡುತ್ತಿಲ್ಲ. ವಿಷಯ ಡೈವರ್ಟ್ ಮಾಡಲು ಆಪರೇಷನ್ ಬಗ್ಗೆ ಮಾತನಾಡುತ್ತಿದ್ದಾರೆ. ನಮಗೆ ಆಪರೇಷನ್ ಬಗ್ಗೆ ವಿಶ್ವಾಸ ಇಲ್ಲ. ಅವರ ಪಕ್ಷದ ಶಾಸಕರೇ ತಿರುಗಿ ಬಿದ್ದು ಸರ್ಕಾರ ಉರುಳಿಸಿದರೂ ಆಶ್ಚರ್ಯ ಇಲ್ಲ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.
ಕಾಂಗ್ರೆಸ್ ಶಾಸಕರೇ ಸರ್ಕಾರ ಬೀಳಿಸುತ್ತಾರೆ
ಇದನ್ನೂ ಓದಿ: Karnataka Politics : ಜೆಡಿಎಸ್ ಬರ ಅಧ್ಯಯನಕ್ಕೆ ಸಿಎಂ ಸ್ವಾಗತ; ಕೇಂದ್ರಕ್ಕೂ ಅನುಭವ ಹೇಳುವಂತೆ ವ್ಯಂಗ್ಯ
ಚಳಿಗಾಲದ ಅಧಿವೇಶನದ ಒಳಗೆ ವಿಪಕ್ಷ ನಾಯಕರ ಆಯ್ಕೆ ಆಗುತ್ತದೆಯೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬಿ.ವೈ. ವಿಜಯೇಂದ್ರ, ಆಗುತ್ತ ಎಂಬ ವಿಶ್ವಾಸದಲ್ಲಿದ್ದೇವೆ ಎಂದು ಹೇಳಿದರು.