Site icon Vistara News

BY Vijayendra : ಯತ್ನಾಳ್‌ ಸೇರಿಸಿ ಎಲ್ಲರಿಗೂ ಹೇಳ್ತಿದ್ದೇನೆ..; ವಿಜಯೇಂದ್ರ ಕೊಟ್ಟ ಎಚ್ಚರಿಕೆ ಏನು?

BY Vijayendra and Basanagowda pateel yatnal

ನವದೆಹಲಿ: ಬಸನಗೌಡ ಪಾಟೀಲ್ ಯತ್ನಾಳ್ (Basanagowda Pateel Yatnal) ಮತ್ತು ಬೇರೆ ಎಲ್ಲರಿಗೂ ಹೇಳ್ತಿದ್ದೇನೆ.. : ಹೀಗೊಂದು ಎಚ್ಚರಿಕೆ ಮಾತನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಆಡಿದ್ದಾರೆ. ‌ ತಾವು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ (BJP State President) ವಿಚಾರದಲ್ಲಿ ಆಕ್ಷೇಪಾರ್ಹ ಮಾತುಗಳನ್ನು ಆಡುತ್ತಿರುವ ಮಂದಿಗೆ ವಿಜಯೇಂದ್ರ ಎಚ್ಚರಿಕೆ (Vijayendra Warning) ನೀಡಿದ್ದಾರೆ. ಇದು ರಾಜ್ಯದಲ್ಲಿ ಪಕ್ಷ ಮತ್ತು ಕಾರ್ಯಕರ್ತರ ಶ್ರಮದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಶನಿವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻʻನಾನು ಅಧ್ಯಕ್ಷ ಮತ್ತು ಯಡಿಯೂರಪ್ಪ ಅವರ ಮಗ ಎಂಬ ಅಹಂಕಾರದಲ್ಲಿ ಮಾತನಾಡುತ್ತಿಲ್ಲ. ನನಗೆ ಅಧಿಕಾರ ಕೊಟ್ಟಿರೋದು ಹೈಕಮಾಂಡ್ ನಾಯಕರು. ನನ್ನ ಮುಂದಿರುವ ಗುರಿ ಲೋಕಸಭಾ ಚುನಾವಣೆ. ಕಾರ್ಯಕರ್ತರು ರಾಜ್ಯದಲ್ಲಿ ತಪಸ್ಸಿನ ರೀತಿಯಲ್ಲಿ ದುಡಿಯುತ್ತಿದ್ದಾರೆ. ಅವರಿಗೆ ಅವಮಾನ ಆಗೋ ರೀತಿ ಯಾವುದೇ ಕೆಲಸ ಮಾಡಬಾರದುʼʼ ಎಂದು ಯತ್ನಾಳ್‌ ಮತ್ತು ಇತರ ನಾಯಕರಿಗೆ ಅವರು ಸೂಚ್ಯವಾಗಿ ಹೇಳಿದ್ದಾರೆ.

ʻʻಯಡಿಯೂರಪ್ಪ ಅವರ ಮಗ ಅನ್ನುವುದಕ್ಕೆ ನನಗೆ ಹೆಮ್ಮೆ ಇದೆ. ಹಲವು ನಾಯಕರನ್ನು ಹುಟ್ಟುಹಾಕಿದ ಧೀಮಂತ ನಾಯಕ ಯಡಿಯೂರಪ್ಪ. ಯಡಿಯೂರಪ್ಪ ಯಾವ‌ ರೀತಿಯ ಶಕ್ತಿ ಎನ್ನುವುದು ಇಡೀ ರಾಜ್ಯಕ್ಕೆ ಗೊತ್ತುʼʼ ಎಂದು ಹೇಳಿದ ಅವರು, ʻʻನಾನು ಯಾರ ವಿರುದ್ಧವೂ ದೂರು ನೀಡುವ ಕೆಲಸ ಮಾಡಿಲ್ಲ. ಎಲ್ಲರ ಪ್ರೀತಿ ವಿಶ್ವಾಸದಿಂದ ನಾನು ಕೆಲಸ ಮಾಡುತ್ತೇನೆʼʼ ಎಂದರು.

ಇದನ್ನೂ ಓದಿ: BY Vijayendra: ರಾಜ್ಯ ಬಿಜೆಪಿ ನಾಯಕರ ಅಸಮಾಧಾನ ಸರಿಪಡಿಸುತ್ತೇವೆ: ವಿಜಯೇಂದ್ರಗೆ ಅಮಿತ್‌ ಶಾ ಭರವಸೆ

ಬಿವೈ ವಿಜಯೇಂದ್ರ ಅವರು ಇದೀಗ ದಿಲ್ಲಿಯಲ್ಲಿದ್ದು, ಕಳೆದ ಕೆಲವು ದಿನಗಳಿಂದ ಪಕ್ಷದ ಉನ್ನತ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆಗೆ ಪಕ್ಷದ ಚುನಾವಣಾ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಮಿತ್‌ ಶಾ ಅವರ ಭೇಟಿಯ ಸಂದರ್ಭದಲ್ಲಿ ರಾಜ್ಯ ಬಿಜೆಪಿಯಲ್ಲಿರುವ ಭಿನ್ನಮತ, ಕೆಲವು ನಾಯಕರು‌ ಪಕ್ಷ ವಿರೋಧಿ ಹೇಳಿಕೆ ನೀಡುತ್ತಿರುವುದರ ಚರ್ಚೆಯೂ ನಡೆದಿತ್ತು ಎನ್ನಲಾಗಿದೆ. ಆಗ ಅಮಿತ್‌ ಶಾ ಅವರು, ಈ ಯಾವ ವಿಚಾರದ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಡಿ. ನೀವು ಲೋಕಸಭಾ ಚುನಾವಣೆಯ ಮೇಲೆ ಗಮನ ಕೊಡಿ, ಉಳಿದ ವಿಚಾರ ನಮಗೆ ಬಿಡಿ ಎಂದಿದ್ದರು.

ಈ ಎಲ್ಲ ಹಿನ್ನೆಲೆಯಲ್ಲಿ ಬಿವೈ ವಿಜಯೇಂದ್ರ ಅವರು, ಪಕ್ಷಕ್ಕೆ ಹಾನಿಯಾಗುವ, ಕಾರ್ಯಕರ್ತರ ಶ್ರಮಕ್ಕೆ ನೋವುಂಟು ಮಾಡುವ ಹೇಳಿಕೆ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.

ಮತ್ತೆ ಹಿಜಾಬ್‌ಗೆ ಅವಕಾಶ ಬೇಜವಾಬ್ದಾರಿ ಕ್ರಮ ಎಂದ ಬಿವೈ ವಿಜಯೇಂದ್ರ

ನವದೆಹಲಿ: ರಾಜ್ಯದ ಶಾಲೆ ಕಾಲೇಜುಗಳಲ್ಲಿ ಮತ್ತೆ ಹಿಜಾಬ್‌ಗೆ (Hijab Row) ಅವಕಾಶ ನೀಡಲಾಗುವುದು ಎಂಬ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಹೇಳಕೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿದ್ದು ಮತ್ತು ದ್ವೇಷವನ್ನು ಸೃಷ್ಟಿಸುವ ಪ್ರಯತ್ನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಆಕ್ರೋಶ ವ್ಯಕ್ತಪಡಿಸಿದರು. ಮತ್ತೆ ಹಿಜಾಬ್‌ಗೆ ಅವಕಾಶ ನೀಡುವ ಸಿದ್ದರಾಮಯ್ಯ ಹೇಳಿಕೆ ನಾಡಿನ ಪಾಲಿಗೆ ಒಂದು ದುರದೃಷ್ಟದ ಸಂಗತಿ ಎಂದರು.

ಹಿಜಾಬ್‌ ರಾಜಕೀಯ ಮಕ್ಕಳ ಮನಸ್ಸನ್ನು ಸಹ ಕಲುಷಿತ ಮಾಡಿದೆ. ಅವರು ಏನೇ ರಾಜಕೀಯ ಮಾಡಲಿ. ಆದರೆ, ಕನಿಷ್ಠ ಶಾಲೆಗೆ ಹೋಗೋ ಮಕ್ಕಳನ್ನು ಆದರೂ ರಾಜಕೀಯದಿಂದ ದೂರ ಇಡ್ಬೇಕಿತ್ತು ಎಂದು ಹೇಳಿದರು ವಿಜಯೇಂದ್ರ. ʻʻಹಿಜಾಬ್ ಧರಿಸಿಕೊಂಡು ಶಾಲೆಗೆ ಹೋಗಲು ಅವಕಾಶ ಕೊಡ್ತೇವೆ ಅಂದಿದ್ದಾರೆ. ಇದೇ ಸರ್ಕಾರ ಕಲ್ಬುರ್ಗಿಯಲ್ಲಿ ಪರೀಕ್ಷೆಗೆ ಹೋಗುವ ಹೆಣ್ಮಕ್ಕಳ ತಾಳಿ, ಕಾಲುಂಗುರ ತೆಗೆಸಿದೆ. ಇದು ಯಾವ ನ್ಯಾಯʼ ಎಂದು ಅವರು ಪ್ರಶ್ನಿಸಿದರು.

Exit mobile version