Site icon Vistara News

Cabinet Meeting : ಸಿದ್ದರಾಮಯ್ಯ, ಡಿಕೆಶಿ ಮೇಲಿನ ಕೇಸ್‌ ವಾಪಸ್‌, ಲೋಕಾಯುಕ್ತ ಬಲೆಗೆ ಬಿದ್ದ ಡಾಕ್ಟರ್ಸ್‌ ಸೇವೆಯಿಂದ ಔಟ್‌

Siddaramaiah and DK Shivakumar in Mekedaru protest

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DCM DK Shivakumar), ಗೃಹ ಸಚಿವ ಜಿ. ಪರಮೇಶ್ವರ್‌ (Home Minister G Parameshwar) ಅವರ ಮೇಲೆ ಕೋವಿಡ್‌ ನಿಯಮ ಉಲ್ಲಂಘನೆಗಾಗಿ (Covid rules Violation) ದಾಖಲಿಸಲಾಗಿದ್ದು ಕೇಸುಗಳನ್ನು ವಾಪಸ್‌ (Case withdrawal) ಪಡೆಯಲು ರಾಜ್ಯ ಸಚಿವ ಸಂಪುಟ (State Cabinet Meeting) ತೀರ್ಮಾನ ಮಾಡಿದೆ. ಇದೇ ವೇಳೆ, ಲೋಕಾಯುಕ್ತ ದಾಳಿಗೆ ಒಳಗಾದ ವೈದ್ಯರನ್ನು ಸೇವೆಯಿಂದ ನಿವೃತ್ತಿಗೊಳಿಸಲೂ (Doctors retirement) ಅದು ಒಪ್ಪಿಗೆ ನೀಡಿದೆ.

ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದೂ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್‌.ಕೆ ಪಾಟೀಲ್‌ ತಿಳಿಸಿದರು.

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮತ್ತು ಪರಮೇಶ್ವರ್‌ ಮೊದಲಾದ ಕಾಂಗ್ರೆಸ್‌ ನಾಯಕರು ಮೇಕೆದಾಟು ಪ್ರದೇಶದಿಂದ ಬೆಂಗಳೂರುವರೆಗೆ ನಡೆದ ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಅಂದು ದೂರು ದಾಖಲಾಗಿತ್ತು. ಡಿ.ಕೆ. ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯಕ್ರಮದ ಆಯೋಜಕರಾಗಿದ್ದರಿಂದ ಅವರ ವಿರುದ್ಧದ ಪ್ರಕರಣ ಕೋರ್ಟ್‌ ಕಟ್ಟೆಯನ್ನೂ ಏರಿತ್ತು. ಅಲ್ಲಿ ತಡೆಯಾಜ್ಞೆ ಸಿಕ್ಕಿತ್ತು. ಇದೀಗ ಆ ಎಲ್ಲ ಕೇಸ್‌ಗಳನ್ನು ಹಿಂಪಡೆಯಲಾಗಿದ್ದು, ನಾಯಕರಿಗೆ ಮುಕ್ತಿ ನೀಡಲಾಗಿದೆ. ಇವರ ವಿರುದ್ಧ ಒಟ್ಟು ಒಂಬತ್ತು ಪ್ರಕರಣಗಳು ದಾಖಲಾಗಿದ್ದವು.

ವೈದ್ಯರ ವಜಾ ಮತ್ತು ಸೇವಾ ನಿವೃತ್ತಿ ಶಿಕ್ಷೆ

ಕರ್ತವ್ಯದಲ್ಲಿರುವಾಗ ಹಣಕಾಸು ದುರುಪಯೋಗ ಮಾಡಿಕೊಂಡು, ಲಂಚದ ಬೇಡಿಕೆ ಇಟ್ಟು ಲೋಕಾಯುಕ್ತ ಬಲೆಗೆ ಬಿದ್ದ ಕಲೆವು ವೈದ್ಯರಿಗೆ ಗೇಟ್‌ ಪಾಸ್‌ ನೀಡಲಾಗಿದೆ. ಹಣಕಾಸು ದುರುಪಯೋಗದ ಹಿನ್ನೆಲೆಯಲ್ಲಿ ಡಾ.ಎನ್ ಎಚ್ ನಾಗೇಶ್ ಅವರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಲು ತೀರ್ಮಾನ ಮಾಡಲಾಗಿದೆ. ಇವರಿಗೆ ಸೆಷನ್ಸ್‌ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು.

ಲಂಚ ಸ್ವೀಕಾರದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ರಾಮನಗರದ ಸರ್ಕಾರಿ ವ್ಯದ್ಯೆ ಡಾ. ಉಷಾ ಕುಂದರಗಿ, ಡಾ. ಎಸ್‌.ಟಿ. ನಾಗಮಣಿ ಅವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿ ಮಾಡಲು ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಬಿಇಓ ಗದಗ ಜಿಲ್ಲೆಯ ಮುಂಡರಗಿ ಎಸ್ ಎನ್ ಹಳ್ಳಿ ಗುಡಿ ಅವರನ್ನು ಸೇವೆಯಿಂದ ವಜಾಗೊಳಿಸಲು ತೀರ್ಮಾನ ಮಾಡಲಾಗಿದೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹೆಸರು ಬದಲಾವಣೆ

ಹಾಲಿ ಇರುವ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹೆಸರು ಬದಲಿಸಿ ಕರಾವಳಿ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಬದಲಾವಣೆ ಮಾಡಲು ಸಂಪುಟದಲ್ಲಿ ನಿರ್ಧಾರ ಮಾಡಲಾಗಿದೆ. ಇದುವರೆಗೆ ಕರಾವಳಿಯ ಮೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದ್ದ ಇದಕ್ಕೆ ಚಿಕ್ಕಮಗಳೂರು ಜಿಲ್ಲೆಯನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಉತ್ತರ ಕನ್ನಡದ ಎಲ್ಲ ಜಿಲ್ಲೆಗಳ ಸೇರ್ಪಡೆಯಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ, ಸಿಟಿ ಸ್ಕ್ಯಾನ್‌

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಯಂತ್ರ ಅಳವಡಿಸಲು 47.41 ಕೋಟಿ ಬಿಡುಗಡೆಗೆ ತೀರ್ಮಾನ ಮಾಡಲಾಗಿದೆ. ಬೆಂಗಳೂರಿನ ಸಿ.ವಿ ರಾಮನ್ ನಗರ, ಕೆಸಿ ಜನರಲ್ ಆಸ್ಪತ್ರೆ, ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ – ಸಿಟಿ ಸ್ಕ್ಯಾನ್ ಯಂತ್ರ ಒದಗಿಸಲಾಗುತ್ತದೆ.

ಎಂಆರ್ಐ ಸ್ಕ್ಯಾನ್ ಯಂತ್ರ ಅಳವಡಿಕೆ ಎಲ್ಲೆಲ್ಲಿ?: ಬಾಗಲಕೋಟೆ, ಹಾವೇರಿ, ರಾಮನಗರ, ಯಾದಗಿರಿ, ಮೈಸೂರು, ಉಡುಪಿ, ಚಿಕ್ಕಮಗಳೂರು, ವಿಜಯನಗರ, ಚಿಕ್ಕೋಡಿ, ಅರಸೀಕೆರೆ, ಬೆಂಗಳೂರಿನ ಕೆ.ಸಿ. ಜನರಲ್‌, ಜಯನಗರ, ಇಂದಿರಾ ನಗರ ಆಸ್ಪತ್ರೆ.

ಇತರ ಪ್ರಮುಖ ನಿರ್ಧಾರಗಳು

  1. ಬೆಂಗಳೂರಿನಲ್ಲಿ ಏರೋ ಸ್ಪೇಸ್ ಹಾಗೂ ರಕ್ಷಣಾ ಉತ್ಕೃಷ್ಟತಾ ಕೇಂದ್ರ ನಿರ್ಮಾಣ ಮಾಡಲು ತೀರ್ಮಾನ. 391 ಕೋಟಿ ರೂಪಾಯಿ ಬಿಡುಗಡೆಗೆ ಅನುಮೋದನೆ.
  2. ಸೈಬರ್ ಅಪರಾಧಗಳ ತನಿಖೆಗಾಗಿ ವಿಶೇಷ ಸಾಫ್ಟ್‌ವೇರ್ ತಯಾರಿಸುವ ಕಂಪನಿ ಆರಂಭಕ್ಕೆ ಸಮ್ಮತಿ
  3. ಬೆಳಗಾವಿ ವೈದ್ಯಕೀಯ ವಿವಿ ಯಲ್ಲಿ ಸೂಪರ್ ಸ್ಪೇಷಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹೆಚ್ಚುವರಿ 34 ಕೋಟಿ ರೂ. ಬಿಡುಗಡೆ. ಹಿಂದೆ 140 ಕೋಟಿ ಬಿಡುಗಡೆ ಮಾಡಲಾಗಿತ್ತು
  4. ಸೈಬರ್ ಭದ್ರತೆ ನೀತಿಗೆ ಅನುಮೋದನೆ: ಫೇಕ್ ನ್ಯೂಸ್‌ಗಳಿಗೆ ಕಡಿವಾಣ ಹಾಕುವುದಕ್ಕೆ ನೀತಿ ವಿಸ್ತಾರಣೆ ಆಗಬಹುದು.
  5. ಪಾಮ್‌ ಆಯಿಲ್‌ ಬಗ್ಗೆ ಕೆಲವು ದೂರುಗಳು ಇರುವುದದಿಂದ ಅದರ ಬದಲು ಸೂರ್ಯಕಾಂತಿ ಎಣ್ಣೆ ಬಳಕೆಗೆ ಉತ್ತೇಜನ 66 ಕೋಟಿ ತೆಗೆದಿಡಲು ತೀರ್ಮಾನ.
  6. ಮಹಾನಗರ ಪಾಲಿಕೆಗಳಲಿನ ಅಕ್ರಮ ಕಟ್ಟಡಗಳ ಮೇಲಿನ ತೆರಿಗೆ ವಿಧಿಸುವ ಬಗ್ಗೆ ಸಂಪುಟ ಉಪಸಮಿತಿ ರಚನೆಗೆ ಸಂಬಂಧಿಸಿ ಆದಷ್ಟು ಬೇಗ ರಿಪೋರ್ಟ್ ಕೊಡುವಂತೆ ಸೂಚನೆ
Exit mobile version