ಬೆಂಗಳೂರು: ಎಚ್. ಕಾಂತರಾಜು ನೇತೃತ್ವದ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ -2015’ ವರದಿಯನ್ನು (ಜಾತಿ ಗಣತಿ – Caste Census) ಈ ಡಿಸೆಂಬರ್ ಒಳಗೆ ಸಲ್ಲಿಕೆ ಮಾಡುತ್ತೇವೆ. ವರದಿ ಮಿಸ್ ಆಗಿಲ್ಲ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ (Jayaprakash Hegde) ಸ್ಪಷ್ಟೀಕರಣ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಜಯಪ್ರಕಾಶ್ ಹೆಗ್ಡೆ, ಈ ಡಿಸೆಂಬರ್ ಒಳಗೆ ವರದಿಯನ್ನು ಸಲ್ಲಿಕೆ ಮಾಡುತ್ತೇವೆ. ವರದಿ ಮಿಸ್ ಆಗಿಲ್ಲ. ನನ್ನ ಅವಧಿ ಈ ತಿಂಗಳು ಮುಕ್ತಾಯ ಆಗುತ್ತಿತ್ತು. ಆದರೆ, ಸರ್ಕಾರದವರು ನನಗೆ ಈಗ ಅವಧಿಯನ್ನು ಮುಂದುವರಿಸಿದ್ದಾರೆ. ನಮಗೆ ಸಮಯ ಕೊಟ್ಟಿರುವುದರಿಂದ ಪುನಃ ಮರುಪರಿಶೀಲನೆ ಮಾಡಿ ಆರಂಭದಲ್ಲಿ ಮಾಡಲು ಆಗುತ್ತದೆ. ಆದಷ್ಟು ಬೇಗ ವರದಿ ಕೊಡುತ್ತೇವೆ. ಸಿಎಂ ಅವರೇ ಸಮಯ ಕೊಟ್ಟ ಮೇಲೆ ನಮಗೆ ಸುಲಭ ಆಯಿತು ಎಂದು ಹೇಳಿದರು.
ಇದನ್ನೂ ಓದಿ: PSI Scam : ಡಿ.23ಕ್ಕೆ ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ; ಹಿಂದಿನ ಪರೀಕ್ಷೆ ಬರೆದವರಿಗೂ ಅವಕಾಶ
ವರದಿ ಸಾಫ್ಟ್‌ವೇರ್‌ನಲ್ಲಿದೆ
ಜಾತಿ ಗಣತಿ ವರದಿಗೆ ಸಂಬಂಧಿಸಿದಂತೆ ನಮ್ಮ ಬಳಿ ಹಾರ್ಡ್ ಕಾಪಿ, ಸಾಫ್ಟ್ ಕಾಪಿ ಇದೆ. ವರದಿ ಕಾಣೆ ಆಗಿಲ್ಲ. ಮಿಸ್ ಆಗಿರುವುದರ ಬಗ್ಗೆ ಅಂದಿನ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಅಂದಿನ ಸರ್ಕಾರದಿಂದ ನಮಗೆ ಉತ್ತರ ಬಂದಿಲ್ಲ. ಈ ಸರ್ಕಾರ ಬಂದ ಮೇಲೆ ಪುನಃ ಪತ್ರ ಬರೆದಿದ್ದೆವು. ಇರುವ ದತ್ತಾಂಶಗಳ ಮೇಲೆ ವರದಿ ಕೊಡಿ ಎಂದು ಹೇಳಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವರದಿ ಇದಾಗಿದೆ. ಇನ್ನು ವರದಿ ಸೋರಿಕೆ ಆಗಿಲ್ಲ. ಎಲ್ಲವೂ ಸಾಫ್ಟ್‌ವೇರ್‌ನಲ್ಲಿದೆ. ಮೂಲ ಪ್ರತಿ ವರದಿ ಬಗ್ಗೆ ನಾವು ಪತ್ರ ಬರೆದಿದ್ದಾಗಿತ್ತು. ವರದಿ ಬೇರೆ ದತ್ತಾಂಶ ಬೇರೆ. ದತ್ತಾಂಶ ಹಾಗೆಯೇ ನಮ್ಮ ಬಳಿಯಿದೆ. ಕಾಂತರಾಜ್ ವರದಿಯ ಪ್ರಿಂಟೆಡ್ ಕಾಪಿ ನಮ್ಮ ಬಳಿಯಿದೆ. ಮೂಲ ಉದ್ದೇಶ ಹಾಳಾಗಿಲ್ಲ, ಹಾಳಾಗೋದೂ ಇಲ್ಲ. ಡಿಸೆಂಬರ್ ಒಳಗೆ ವರದಿಯನ್ನು ಕೊಡಬಹುದು ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.
ಸರ್ಕಾರಕ್ಕೆ ಪತ್ರ ಬರೆದಿದ್ದ ಜಯಪ್ರಕಾಶ್ ಹೆಗ್ಡೆ
ಜಾತಿ ಗಣತಿ – Caste Census) ಮೂಲ ಅಥವಾ ಹಸ್ತ ಪ್ರತಿ ಲಭ್ಯವಿಲ್ಲ. ಅಲ್ಲದೆ, ಮುದ್ರಿತ ಮುಖ್ಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲ. ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂಬ ಸ್ಪಷ್ಟನೆಯನ್ನು ಕೋರಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ (Backward Classes Commission) ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ (Backward Classes Welfare Department) ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಕೋರಿದ್ದಾರೆ.
ಇದನ್ನೂ ಓದಿ: Caste Census : ಜಾತಿ ಗಣತಿ ವರದಿ ಮೂಲ ಪ್ರತಿ ಕಾಣೆ ಬಗ್ಗೆ ಗೊತ್ತಿಲ್ಲವೆಂದ ಸಿಎಂ ಸಿದ್ದರಾಮಯ್ಯ!
ಮುದ್ರಿತ ಮುಖ್ಯವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲದೆ ಇರುವುದು ಆಯೋಗವು ಗಮನಿಸಿರುತ್ತದೆ. ಮುಖ್ಯ ವರದಿಯ ಮೂಲ ಅಥವಾ ಹಸ್ತಪ್ರತಿ ಸೀಲ್ಸ್ ಬಾಕ್ಸಿನಲ್ಲಿ ಲಭ್ಯವಿಲ್ಲದಿರುವುದರಿಂದ ಸದರಿ ಹಸ್ತಪ್ರತಿಯನ್ನು ಕೂಡಲೇ ಆಯೋಗದ ಕಛೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿತ್ತು. ಸದರಿಯವರು ಸೂಚನೆಗೆ ಉತ್ತರವನ್ನು ನೀಡಿದ್ದು, ಅದರ ಪ್ರತಿಯನ್ನು ಲಗತ್ತಿಸಿದೆ ಎಂದು ಜಯಪ್ರಕಾಶ್ ಹೆಗ್ಡೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಪತ್ರದಲ್ಲಿ ಏನಿದೆ?
ದಿನಾಂಕ: 26.08.2021 ರಂದು ಆಯೋಗದ ಕಛೇರಿಯಲ್ಲಿರಿಸಲಾಗಿದ್ದ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರಲ್ಲಿ ಸಂಗ್ರಹಿಸಿದ ಅಂಕಿ ಅಂಶಗಳು ಹಾಗೂ ಇತರ ವಿವರಗಳನ್ನೊಳಗೊಂಡ ಸೀಲ್ಡ್ ಬಾಕ್ಸ್‌ಗಳನ್ನು ಆಯೋಗದ ಅಧ್ಯಕ್ಷರು, ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಮಹಜರ್ ನಡೆಸಿ ತೆರೆಯಲಾಗಿರುತ್ತದೆ. ಮುದ್ರಿತ ಮುಖ್ಯ ವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲದೆ ಇರುವುದು ಆಯೋಗವು ಗಮನಿಸಿರುತ್ತದೆ. ಇದರೊಂದಿಗೆ ಇದಕ್ಕೆ ಸಂಬಂಧಿಸಿದ ಮುಖ್ಯ ವರದಿಯ ಮೂಲ ಅಥವಾ ಹಸ್ತಪ್ರತಿ ಸೀಲ್ಸ್ ಬಾಕ್ಸಿನಲ್ಲಿ ಲಭ್ಯವಿಲ್ಲದಿರುವುದರಿಂದ ಸದರಿ ಹಸ್ತಪ್ರತಿಯನ್ನು ಕೂಡಲೇ ಆಯೋಗದ ಕಛೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿತ್ತು.
ಜಯಪ್ರಕಾಶ್ ಹೆಗ್ಡೆ ಹೇಳಿಕೆ ಇಲ್ಲಿದೆ; ನೋಡಿ ಇ ವಿಡಿಯೊ
ಇದನ್ನೂ ಓದಿ: Caste Census : ಜಾತಿ ಗಣತಿ ವರದಿ ಕದ್ದಿದ್ದು ಯಾರು? ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡುತ್ತೀರಾ?
ಸದರಿಯವರು ಸೂಚನೆಗೆ ಉತ್ತರವನ್ನು ನೀಡಿದ್ದು, ಅದರ ಪ್ರತಿಯನ್ನು ಲಗತ್ತಿಸಿದೆ. ಸದರಿ ವಿಷಯವನ್ನು ಸರ್ಕಾರದ ಗಮನಕ್ಕೆ ತರಬಯಸುತ್ತಾ, ಮುಂದೆ ಈ ವಿಷಯಕ್ಕೆ ಸಂಬಂಧಪಟ್ಟಂತೆ. ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಹಂತದಲ್ಲಿ ಸ್ಪಷ್ಟ ಪಡಿಸುವಂತೆ ಕೋರುತ್ತೇನೆ” ಎಂದು ಜಯಪ್ರಕಾಶ್ ಹೆಗ್ಡೆ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.