Site icon Vistara News

Cauvery water dispute : ಕಾವೇರಿ ನೆಪದಲ್ಲಿ ಬಿಜೆಪಿ – ಜೆಡಿಎಸ್‌ನಿಂದ ರಾಜಕೀಯ: ಸಿಎಂ ಸಿದ್ದರಾಮಯ್ಯ ಆರೋಪ

CM Siddaramaiah

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ (Cauvery water dispute) ಬಿಜೆಪಿ ಮತ್ತು ಜೆಡಿಎಸ್ (BJP and JDS) ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಅವರು ಸೋಮವಾರ (ಸೆಪ್ಟೆಂಬರ್‌ 25) ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ತಮ್ಮ ರಾಜೀನಾಮೆ ಕೇಳುತ್ತಿರುವ ವಿರೋಧ ಪಕ್ಷಗಳು, ಸರ್ವಪಕ್ಷ ಸಭೆಯಲ್ಲಿ ಹಾಗೆ ಹೇಳಲಿಲ್ಲವಲ್ಲ ಎಂದು ಪ್ರಶ್ನಿಸಿದರು.

ಪ್ರತಿಭಟನೆಗೆ ಅವಕಾಶವಿದೆ

ಕಾವೇರಿ ನೀರಿನ ಸಂಬಂಧ ಸೆಪ್ಟೆಂಬರ್‌ 26ರ ಮಂಗಳವಾರ ಬೆಂಗಳೂರು ಬಂದ್ ಹಾಗೂ ಸೆಪ್ಟೆಂಬರ್‌ 28ರ ಕರ್ನಾಟಕ ಬಂದ್ ಕರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ ಅವರು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರತಿಭಟನೆಗೆ ಅವಕಾಶವಿದೆ. ಅದನ್ನು ನಾವು ಹತ್ತಿಕ್ಕಲು ಹೋಗುವುದಿಲ್ಲ ಎಂದು ತಿಳಿಸಿದರು.

ಇನ್ನಷ್ಟು ಬಲವಾಗಿ ವಾದ ಮಂಡನೆ

ಕಾವೇರಿ ನೀರು ಹರಿಸುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಆದೇಶ ಇದೆ. ನೀರು ಹರಿಸಲು ಸಾಧ್ಯವಿಲ್ಲ ಎಂದು ವಾದ ಮಂಡಿಸಲಾಗಿದೆ. ನಮ್ಮ ಅರ್ಜಿ ವಜಾ ಆಗಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ನಿರ್ವಹಣಾ ಪ್ರಾಧಿಕಾರ ಎರಡರ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದೆವು. ಸುಪ್ರೀಂಕೋರ್ಟ್ ನಮ್ಮ ಹಾಗೂ ತಮಿಳುನಾಡಿನ ಅರ್ಜಿಯನ್ನು ತಿರಸ್ಕಾರ ಮಾಡಿದೆ. ತಮಿಳುನಾಡು 24,000 ಕ್ಯೂಸೆಕ್‌ ನೀರು ಕೇಳಿದ್ದರು. ನಂತರ 7200 ಕ್ಯೂಸೆಕ್‌ ಕೇಳಿದರು. ನಾವು 5000 ಕ್ಯೂಸೆಕ್‌ ನೀರು ಕೂಡ ಕೊಡಲಾಗುವುದಿಲ್ಲ. ನಮ್ಮ ಬಳಿ ನೀರಿಲ್ಲ ಎಂದು ವಾದಿಸಿದ್ದು, ಅದನ್ನು ನ್ಯಾಯಾಲಯ ಒಪ್ಪಿಲ್ಲ. ಪುನಃ ಸೆಪ್ಟೆಂಬರ್ 26 ರಂದು ಸರ್ವೋಚ್ಚ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದ್ದು. ನಮ್ಮ ವಾದವನ್ನು ಇನ್ನಷ್ಟು ಬಲವಾಗಿ ಮಂಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮಳೆ ಬಾರದೇ ಇದ್ದರೆ ಸರ್ಕಾರದಿಂದ ಮೋಡ ಬಿತ್ತನೆ

ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಎದುರಾಗಿದೆ. ಹೀಗಾಗಿ ಈ ಬಗ್ಗೆ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಇನ್ನು ಮೋಡ ಬಿತ್ತನೆ (cloud seeding) ಮಾಡುವ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ಅಭಿಪ್ರಾಯಗಳನ್ನೂ ಪಡೆಯಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಹೇಳಿದ್ದಾರೆ. ಅಲ್ಲದೆ, ಕಾವೇರಿ ಜಲವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ಸೆಪ್ಟೆಂಬರ್‌ 26ರಂದು ಬೆಂಗಳೂರು ಬಂದ್ (Bengaluru bandh) ಹಾಗೂ ಸೆಪ್ಟೆಂಬರ್‌ 28ರಂದು ಕರ್ನಾಟಕ ಬಂದ್‌ (Karnataka bandh) ನಡೆಯುತ್ತಿದೆ. ಈ ವಿಚಾರವಾಗಿ ಜನರು ಪ್ರತಿಭಟನೆ ಮಾಡಲು ನಾವು ಎಲ್ಲ ರೀತಿಯ ಸಹಕಾರವನ್ನು ಕೊಡುತ್ತೇವೆ. ಆದರೆ, ಜನರು ಸಹಕಾರ ಕೊಡಲಿಲ್ಲ ಅಂದರೆ ಆ ಬಂದ್‌ಗೆ ಮರ್ಯಾದೆ ಹೋಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಈಗ ಎರಡು ಮೂರು ದಿನಗಳಿಂದ ಮಳೆ ಆಗಿ ಒಳ ಹರಿವು ಉತ್ತಮವಾಗಿ ಆಗಿದೆ. ಮೋಡ ಬಿತ್ತನೆ ಬಗ್ಗೆಯೂ ನಾವು ಚರ್ಚೆ ಮಾಡಿದ್ದೇವೆ. ಏನಾದರೂ ಮಾಡಲು ಸಾಧ್ಯ ಇದೆಯೇ ಅಂತ ಚರ್ಚೆ ಮಾಡಿದ್ದೇವೆ. ಈ ಸಂಬಂಧ ಎರಡು-ಮೂರು ಅಭಿಪ್ರಾಯಗಳು ಬಂದಿವೆ. ಈಗ ಇರುವ ಪರಿಸ್ಥಿತಿಯಲ್ಲಿ ಮುಂದೆ ನೀರು ಬಿಡೋದು ಕಷ್ಟ ಆಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

ಕೋರ್ಟ್‌ ವಿಚಾರ ನೋಡಿಕೊಂಡು ನಿರ್ಧರಿಸಲಿ

ಎರಡೆರಡು ಬಂದ್ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಪ್ರತಿಭಟನೆ ಸಂಬಂಧ ನಾವು ಜನರ ಜತೆ ಇದ್ದೇವೆ. ಜನಕ್ಕೆ ತೊಂದರೆ ಆಗಬಾರದು. ಜನರು ಸಹಕಾರ ಕೊಡಲಿಲ್ಲ ಅಂದರೆ ಆ ಬಂದ್‌ಗೆ ಮರ್ಯಾದೆ ಹೋಗುತ್ತದೆ. ಅವರಲ್ಲಿಯೇ ಚರ್ಚೆಗಳು ಆಗುತ್ತಿದೆ. ಅದರಲ್ಲಿ ‌ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಕೋರ್ಟ್ ವಿಚಾರವೂ ಅವರಿಗೆ ಗೊತ್ತಿದೆ. ಅದನ್ನು ಅವರು ನೋಡಲಿ ಎಂದು ಹೇಳಿದರು.

Exit mobile version