Site icon Vistara News

Cauvery water dispute : ಜನ ಸಹಕಾರ ಕೊಟ್ಟರೆ ಬಂದ್; ಇಲ್ಲದಿದ್ದರೆ ಎಲ್ಲಿಯ ಬಂದ್?‌ ಡಿಕೆಶಿ ಪ್ರಶ್ನೆ

DK Shivakumar infront of KRS Dam

ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ (Cauvery water dispute) ಸಂಬಂಧಪಟ್ಟಂತೆ ನಡೆಸುತ್ತರುವ ಬೆಂಗಳೂರು ಬಂದ್‌ (Bangalore bandh) ಬಗ್ಗೆ ಡಿಸಿಎಂ ಶಿವಕುಮಾರ್ (DCM DK Shivakumar) ಪ್ರತಿಕ್ರಿಯೆ ನೀಡಿದ್ದು, ಜನ ಸಹಕಾರ ಕೊಟ್ಟರೆ ಬಂದ್ ಆಗುತ್ತದೆ. ಇಲ್ಲ ಅಂದರೆ ಎಲ್ಲಿ ಬಂದ್ ಆಗುತ್ತದೆ? ಎಂದು ಕೇಳಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಬೆಂಗಳೂರಿನ ನಾಗರಿಕರು, ಸಂಘಟನೆಗಳಿಗೆ ಅಭಿನಂದಿಸುವೆ. ಪ್ರತಿಭಟನೆ ಮಾಡುವವರನ್ನು ಹತ್ತಿಕ್ಕಲ್ಲ, ಅಭಿನಂದಿಸುವೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Cauvery water dispute : ಕಾವೇರಿ ಮಾತುಕತೆಗೆ ನಾವು ಸಿದ್ಧ; ಮೋದಿ ಮನಸ್ಸು ಮಾಡಲಿ ಎಂದ ಸಿದ್ದರಾಮಯ್ಯ

ನೀರಿನ ವಿಷಯದಲ್ಲಿ ಸುಳ್ಳು ಹೇಳಲು ಆಗಲ್ಲ

ದಿವವೂ ಬೆಳಗ್ಗೆ ಮತ್ತು ಸಂಜೆ ನೀರಿನ ಮಟ್ಟವನ್ನು ಪರಿಶೀಲನೆ ಮಾಡುತ್ತಿದ್ದೇನೆ. ನಮ್ಮ ಅಧಿಕಾರಿಗಳು ಏನು ಮಾಡುತ್ತಾರೆ ನೋಡೋಣ. ಕಾವೇರಿ ಕಣಿವೆಗೆ 8ರಿಂದ 10 ಸಾವಿರ ಕ್ಯೂಸೆಕ್‌ ಒಳ ಹರಿವು ಇದೆ. ಅಥಾರಿಟಿಯವರಿಗೆ ನೀರಿನ ಮಟ್ಟದ ಲೆಕ್ಕ ಇದೆ, ಯಾರೂ ಸುಳ್ಳು ಹೇಳಲು ಆಗಲ್ಲ. ಎಷ್ಟು ನೀರು ಬರುತ್ತಿದೆ ಎಂದು ದಾಖಲೆ ಇದೆ. ಬಿಳಿಗೊಂಡ್ಲು ಡ್ಯಾಂನಲ್ಲಿ ದಾಖಲಾಗುತ್ತದೆ. ಸುಳ್ಳು ಹೇಳಲು ಆಗಲ್ಲ, ಟೆಕ್ನಿಕಲ್ ಕಮಿಟಿ ಅವರ ಪಾಯಿಂಟ್ ಅನ್ನು ಮುಂದಿಡುತ್ತಾರೆ ಎಂದು ಹೇಳಿದರು.

12,500 ಸಾವಿರ ಕ್ಯೂಸೆಕ್‌ ನೀರು ಬಿಡಲು ಆಗುತ್ತದೆಯೇ?

ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್‌ ನೀರು ಬಿಡಲು (Cauvery water to Tamil Nadu) ಆಗಲ್ಲ. ಇನ್ನೂ 12,500 ಸಾವಿರ ಕ್ಯೂಸೆಕ್‌ ನೀರು ಬಿಡಲು ಆಗುತ್ತದೆಯೇ? ಅವರು ಎಷ್ಟೇ ಬೇಡಿಕೆ ಇಟ್ಟರೂ ನೀರು ಬಿಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಅನೇಕ ಜಡ್ಜ್‌ಮೆಂಟ್‌ಗಳಿವೆ. ಜನ ಸಹಕಾರ ಕೊಟ್ಟರೆ ಬಂದ್ ಆಗುತ್ತದೆ. ಇಲ್ಲ ಅಂದರೆ ಎಲ್ಲಿ ಬಂದ್ ಆಗುತ್ತದೆ? ಎಂದು ಇದೇ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರಶ್ನೆ ಮಾಡಿದರು.

ಇದನ್ನೂ ಓದಿ: Cauvery water dispute : ತಮಿಳುನಾಡು ಸಿಎಂ ಜತೆ ಮಾತನಾಡಿ; ಸಿದ್ದರಾಮಯ್ಯಗೆ ಕಿಚ್ಚ ಸುದೀಪ್‌ ಸಲಹೆ

ರಾಜಕಾರಣ ಬಿಟ್ಟು, ರಾಜ್ಯದ ಹಿತಾಸಕ್ತಿ ಕಾಪಾಡಲಿ; ಎಚ್‌ಡಿಕೆಗೆ ಡಿಕೆಶಿ ತಿರುಗೇಟು

ಇದು ಸ್ಟಾಲಿನ್ ಅವರ ಬಾಡಿಗೆ ಸರ್ಕಾರವೇ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌, ಅವರ ತಂದೆಯವರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಏನು ಹೇಳಿದ್ದಾರೆ? ಮೊದಲು ಅದನ್ನು ಅರ್ಥ ಮಾಡಿಕೊಳ್ಳಲಿ. ರಾಜಕಾರಣ ಬಿಟ್ಟು, ರಾಜ್ಯದ ಹಿತಾಸಕ್ತಿ ಕಾಪಾಡಲಿ ಎಂದು ತಿರುಗೇಟು ನೀಡಿದರು.

Exit mobile version