Site icon Vistara News

‌Cauvery water dispute : ಕಾವೇರಿ ಧ್ವನಿ ಎತ್ತದ ಕನ್ನಡ ನಟರ ವಿರುದ್ಧ ಬೆಂಗಳೂರಲ್ಲಿ ಪ್ರತಿಭಟನೆ

Protest Against sandalwood actrors Darshan and sudeep

ಬೆಂಗಳೂರು: ರಾಜ್ಯದಲ್ಲಿ ಕಾವೇರಿ ಜಲ ವಿವಾದ (‌Cauvery water dispute) ಭುಗಿಲೆದ್ದಿದೆ. ಕರ್ನಾಟಕದಲ್ಲಿ ಸಮರ್ಪಕವಾಗಿ ಮಳೆಯಾಗದೆ ಇರುವ ಹಿನ್ನೆಲೆಯಲ್ಲಿ ನೀರಿನ ಕೊರತೆ ಎದುರಾಗಿದೆ. ಇನ್ನು ತಮಿಳುನಾಡಿಗೆ ಹೇಗೆ ನೀರು ಬಿಡುವುದು ಎಂಬ ಚಿಂತೆಯ ಮಧ್ಯೆಯೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದವರು (ಸಿಡಬ್ಲ್ಯೂಎಂಎ – Cauvery Water Management Authority – CWMA) 15 ದಿನಗಳವರೆಗೆ ಪ್ರತಿ ದಿನ 5 ಸಾವಿರ ಕ್ಯೂಸೆಕ್‌ನಂತೆ ನೀರು ಹರಿಸಲು ಸೂಚನೆ ನೀಡಿತ್ತು. ಇದಕ್ಕೆ ರಾಜ್ಯದಲ್ಲಿ ಅಪಸ್ವರಗಳು ಕೇಳಿ ಬಂದಿದ್ದಲ್ಲದೆ, ಪ್ರತಿಭಟನೆಗಳೂ ನಡೆಯುತ್ತಿವೆ. ಆದರೆ, ಈ ಬಗ್ಗೆ ಇನ್ನೂ ಸಹ ಸ್ಯಾಂಡಲ್‌ವುಡ್‌ (Sandalwood actors) ಯಾವೊಬ್ಬ ನಟರೂ ಧ್ವನಿ ಎತ್ತದೇ ಇರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce) ಮುಂದೆ ಪ್ರತಿಭಟನೆ (Protest against Kannada Actors) ನಡೆಸಲಾಗಿದೆ.

ಕನ್ನಡಪರ ಸಂಘಟನೆಗಳು ಹಾಗೂ ಕನ್ನಡಿಗರ ರಕ್ಷಣಾ ವೇದಿಕೆಯಿಂದ ಬುಧವಾರ (ಸೆಪ್ಟೆಂಬರ್‌ 20) ಪ್ರತಿಭಟನೆ ನಡೆಸಲಾಗಿದೆ. ಕಾವೇರಿಯ ಬಗ್ಗೆ ಧ್ವನಿ ಎತ್ತದ ಕನ್ನಡ ಚಲನಚಿತ್ರ ನಟರ ವಿರುದ್ಧ ಧಿಕ್ಕಾರ ಕೂಗಲಾಗಿದೆ. ಕನ್ನಡದ ಚಿತ್ರರಂಗದ ಎಲ್ಲ ನಟರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ತಮಿಳುನಾಡಿಗೆ ಮತ್ತೆ ಕಾವೇರಿ ನೀರು (Cauvery water to Tamil Nadu) ಹರಿಸುತ್ತಿರುವುದನ್ನು ಖಂಡಿಸಿದ್ದಾರೆ.

Protest infront of Karnataka Film Chamber of Commerce

ಇದನ್ನೂ ಓದಿ: Namma Metro : ನಾಳೆ ನೇರಳೆ ಮಾರ್ಗದ ಮೆಟ್ರೋ ಪ್ರಯಾಣದಲ್ಲಿ ವ್ಯತ್ಯಯ; ಈ ಟೈಮಲ್ಲಿ ಸೇವೆ ಇಲ್ಲ!

ಕರ್ನಾಟಕದಲ್ಲಿ ರೈತರು ಸಂಕಷ್ಟದಲ್ಲಿ ಇದ್ದಾರೆ. ಅಲ್ಲದೆ, ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳದ ಸುತ್ತಮುತ್ತ ಕುಡಿಯುವ ನೀರಿಗೆ ಬಹಳವೇ ತೊಂದರೆಯಾಗಲಿದೆ. ಇಷ್ಟಾದರೂ ನಮ್ಮ ಕನ್ನಡ ಚಲನಚಿತ್ರ ನಟರು ಧ್ವನಿ ಎತ್ತಿಲ್ಲ. ಕಾವೇರಿ ನೀರಿಗೂ ಅವರಿಗೂ ಸಂಬಂಧವೇ ಇಲ್ಲವೇ? ನಮ್ಮ ನಾಡಿನ ಅನ್ನ, ನೀರನ್ನು ಬಳಸುವ ಅವರು ಇದರ ಪರ ಧ್ವನಿ ಎತ್ತಬೇಕಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Protest infront of Karnataka Film Chamber of Commerce

ನಮ್ಮ ನಾಡಿಗೆ ಆಗುತ್ತಿರುವ ಅನ್ಯಾಯವನ್ನು ನೋಡಿಕೊಂಡು ಸುಮ್ಮನೆ ಕುಳಿತಿದ್ದಾರೆ. ಈ ಕೂಡಲೇ ಎಲ್ಲ ಚಲನಚಿತ್ರ ನಟರು ಕಾವೇರಿ ಪರವಾಗಿ ಧ್ವನಿ ಎತ್ತಬೇಕು. ಸಿನಿಮಾಗಳಲ್ಲಿ ಹೇಳುವ ಹೇಳಿಕೆಯನ್ನು ನಿಜ ಜೀವನದಲ್ಲಿ ತೋರಿಸಬೇಕು. ಕನ್ನಡ ನಾಡು – ನುಡಿ, ಜಲದ ಬಗ್ಗೆ ಅವರೂ ಸಹ ಬೀದಿಗೆ ಇಳಿಯಬೇಕು. ಈ ಮೂಲಕ ನಮ್ಮ ಸಮಸ್ಯೆಯ ತೀವ್ರತೆಯನ್ನು ಅರಿಯಬೇಕು. ಸಂಬಂಧಪಟ್ಟವರಿಗೂ ಗೊತ್ತಾಗುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೆ, ಕನ್ನಡಪರ ಸಂಘಟನೆಗಳವರು ಕನ್ನಡ ನಟರ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೆ, ನಟರಾದ ಶಿವರಾಜಕುಮಾರ್‌, ಯಶ್‌, ದರ್ಶನ್‌, ಸುದೀಪ್‌ ಅವರುಗಳ ಭಾವಚಿತ್ರವನ್ನು ಹಾಕಿ ಅವರ ಬಾಯಿಗೆ ಟೇಪ್‌ ಹಾಕಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಜತೆಗೆ “ಕಾವೇರಿಯ ಬಗ್ಗೆ ಧ್ವನಿ ಎತ್ತದ ಕನ್ನಡ ಚಲನಚಿತ್ರ ನಟರಿಗೆ ಧಿಕ್ಕಾರ ಧಿಕ್ಕಾರ” ಎಂದು ಬರೆದುಕೊಂಡಿದ್ದಾರೆ.

Protest infront of Karnataka Film Chamber of Commerce

ಇದನ್ನೂ ಓದಿ: Congress Politics : 3 ಡಿಸಿಎಂ ಹುದ್ದೆ ಸೃಷ್ಟಿ ಮಾಡದಿದ್ದರೆ ಈ ಸರ್ಕಾರ ಉಳಿಯಲ್ಲ: ಕೆ.ಎನ್.‌ ರಾಜಣ್ಣ ಸ್ಫೋಟಕ ಹೇಳಿಕೆ

ಈ ಮೂಲಕ ಚಂದನವನದ ನಟರು ಇನ್ನಾದರೂ ಕಾವೇರಿ ನೀರಿನ ಪರವಾಗಿ ಧ್ವನಿ ಎತ್ತಿ ಜನರ ಪರವಾದ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Exit mobile version