Site icon Vistara News

Chamarajpet News | ಮೈದಾನಕ್ಕೆ ಬಿಗಿ ಭದ್ರತೆ, 20ಕ್ಕೂ ಹೆಚ್ಚು ಸಿಸಿ ಟಿವಿ, ಆಟವಾಡಲು ಅವಕಾಶ ಇಲ್ಲ

Chamarajpet News

ಚಾಮರಾಜಪೇಟೆ : ಈ ಬಾರಿ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಮೈದಾನದ (Chamarajpet News) ಸುತ್ತ ಬ್ಯಾರಿಕೇಡ್‌ ಹಾಗೂ ಕಬ್ಬಿಣದ ಗೇಟ್‌ನಿಂದ ಭಾನುವಾರ (ಆ.14) ಲಾಕ್‌ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ವ್ಯವಸ್ಥಿತವಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಮೈದಾನ ಸುತ್ತ 20ಕ್ಕೂ ಹೆಚ್ಚು ಸಿಸಿಟಿವಿ ಅಳವಡಿಸಲಾಗಿದೆ. ಭಾನುವಾರ (ಆ.14)ದಿಂದಲೇ ಮೈದಾನಕ್ಕೆ ನಿರ್ಬಂಧ ಹೇರಲಾಗಿದೆ. ಮಕ್ಕಳಿಗೆ ಆಟವಾಡಲು ಅವಕಾಶ ಕಲ್ಪಿಸಿಲ್ಲ ಎನ್ನಲಾಗಿದೆ.

ಚಾಮರಾಜ ಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಸಾರ್ವಜನಿಕರಿಗೆ ಪಾಸ್ ಕೊಡುವ ಚಿಂತನೆ ನಡೆದಿದೆ. ವಂದೇ ಮಾತರಂ ಮತ್ತು ಭಾರತ್ ಮಾತಾಕಿ ಜೈ ಎಂದು ಎರಡೇ ಘೋಷಣೆ ಕೂಗಬೇಕು.ಅದನ್ನು ಹೊರತು ಪಡಿಸಿ ಪಕ್ಷ, ಸಂಘಟನೆ ಬೇರೆ ಯಾವುದೇ ರೀತಿಯ ಘೋಷಣೆಗಳನ್ನು ಮೈದಾನದ ಬಳಿ ಕೂಗುವಂತಿಲ್ಲ ಎನ್ನಲಾಗಿದೆ. ಮಕ್ಕಳನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಪ್ರತ್ಯೇಕ ಗೇಟ್ ಮೂಲಕ ಒಳಗೆ ತಪಾಸಣೆ ಮಾಡಿ ಎಂಟ್ರಿ ನೀಡಲಾಗುತ್ತದೆ.

ಈಗಾಗಲೇ ಧ್ವಜಾರೋಹಣ ಸ್ತಂಭಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಮಾರ್ಕ್‌ ಮಾಡಿದ್ದು, ಮಧ್ಯಾಹ್ನದ ವೇಳೆಗೆ ಮೈದಾನದಲ್ಲಿ ಸಿದ್ಧತೆ ಪೂರ್ಣಗೊಳ್ಳಲಿದೆ. ಹಾಗೂ ಆರ್‌ಎಎಫ್ ಪಡೆಯಿಂದ ಚಾಮರಾಜಪೇಟೆಯಲ್ಲಿ ಪರೇಡ್ ಕೂಡ ನಡೆಯಲಿದೆ. ಮಾಣಿಕ್ ಷಾ ಮೈದಾನದಲ್ಲಿ ಸಿಎಂ ಧ್ಜಜಾರೋಹಣ ಮಾಡುವ ಸಮಯಕ್ಕೆ ಚಾಮರಾಜಪೇಟೆ ಮೈದಾನದಲ್ಲೂ ಧ್ವಜರೋಹಣ ಮಾಡಲಾಗುತ್ತಿದೆ.

ಇದನ್ನೂ ಓದಿ| Amrit Mahotsav | ಮಾಣೆಕ್ ಷಾ ಮೈದಾನಕ್ಕಿಂತ ಚಾಮರಾಜಪೇಟೆ ಮೈದಾನಕ್ಕೇ ಅತಿ ಹೆಚ್ಚು ಖಾಕಿ ಭದ್ರತೆ!

Exit mobile version