Site icon Vistara News

Lingayat CM : ಶಾಮನೂರು ಶಿವಶಂಕರಪ್ಪರಿಗೆ ಸಿಎಂ ಸ್ಪಷ್ಟ ಉತ್ತರ ಕೊಡಬೇಕು: ಬಸವರಾಜ ಬೊಮ್ಮಾಯಿ

CM Siddaramaiah Basavaraj Bommai and Shamanur Shivashankarappa

ಹಾವೇರಿ: ರಾಜ್ಯ ಕಾಂಗ್ರೆಸ್‌ನಲ್ಲಿ ಈಗ ಲಿಂಗಾಯತರ ಅವಗಣನೆ (Neglecting Lingayats) ಮತ್ತು ಲಿಂಗಾಯತರು ಸಿಎಂ (Lingayat CM Demdand) ಆಗಬೇಕು. ಅಲ್ಲದೆ, ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳ ಕಡೆಗಣನೆ ಆಗಿದೆ ಎಂಬ ಲಿಂಗಾಯತ ಸಮುದಾಯದ (Lingayat community) ಹಿರಿಯ ನಾಯಕ, 92 ವರ್ಷದ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರ ಮಾತು ಈಗ ರಾಜಕೀಯವಾಗಿ ತಿರುಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶಾಮನೂರು ಅವರಿಗೆ ಸ್ಪಷ್ಟ ಉತ್ತರ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Former Chief Minister Basavaraj Bommai) ಆಗ್ರಹಿಸಿದ್ದಾರೆ.

ಶಿಗ್ಗಾವಿ ಕ್ಷೇತ್ರದ ಸವಣೂರು ತಾಲೂಕಿನ ಹುರುಳಿಕುಪ್ಪಿ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳಿಗೆ ರಕ್ಷಣೆ ಇಲ್ಲ ಎಂಬ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಜನ ಗಂಭೀರವಾಗಿ ಪರಿಗಣನೆ ಮಾಡುತ್ತಾರೆ ಎಂದು ಹೇಳಿದರು. ‌

ಇದನ್ನೂ ಓದಿ: Lingayat CM : ಶಾಮನೂರು ಹೇಳಿಕೆಗೆ ಪೂರ್ಣ ಬೆಂಬಲವೆಂದ ಬಿಎಸ್‌ವೈ; ನಮ್ಮದು ಜಾತ್ಯತೀತ ಸರ್ಕಾರ ಎಂದ ಸಿಎಂ

ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು. ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದಾರೆ. ಮುಖ್ಯಮಂತ್ರಿಗಳು ಅವರಿಗೆ ಸ್ಪಷ್ಟವಾದ ಉತ್ತರ ಕೊಡಬೇಕು. ಮುಖ್ಯಮಂತ್ರಿಗಳ ಹೇಳಿಕೆ ಬಳಿಕವೂ ನಮ್ಮ ಹೇಳಿಕೆ ಬದ್ಧ ಅನ್ನುವುದನ್ನು ನೋಡಿದರೆ ಶಾಮನೂರು ಶಿವಶಂಕರಪ್ಪ ಹೇಳಿಕೆ ಬಹಳ ಗಂಭೀರವಾಗಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಈ ಸರ್ಕಾರದಲ್ಲಿ ಯಾವುದೂ ಸರಿಯಿಲ್ಲ. ಸಚಿವರ ನಡುವೆ ಹೊಂದಾಣಿಕೆಯಿಲ್ಲ. ಸರ್ಕಾರ ಗೊಂದಲದ ಗೂಡಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ‌.

ಸರ್ಕಾರ ಗೊಂದಲದ ಗೂಡಾಗಿದೆ

ಪ್ರತಿದಿನ ಈ ಸರ್ಕಾರದ ಮಂತ್ರಿಗಳು ಒಂದಿಲ್ಲೊಂದು ಗೊಂದಲದ ಹೇಳಿಕೆ ಕೊಡುವುದನ್ನು ನೋಡಿದರೆ, ಈ ಸರ್ಕಾರದ ಒಳಗಡೆ ಯಾವುದೂ ಸರಿ ಇಲ್ಲ ಸರ್ಕಾರ ಗೊಂದಲದ ಗೂಡಾಗಿದೆ. ಸಚಿವರ ನಡುವೆ ಒಬ್ಬರಿಗೊಬ್ಬರ ಸಹಕಾರ ಇಲ್ಲ. ಕ್ಯಾಬಿನೆಟ್‌ನಲ್ಲಿ ಒಗ್ಗಟ್ಟಿಲ್ಲ ಈ ಬಗ್ಗೆ ಕಾಂಗ್ರೆಸ್ ಶಾಸಕರಲ್ಲಿ ಆಕ್ರೋಶ ಇದೆ. ಕರ್ನಾಟಕದ ಜನರಿಗೆ ಈ ಸರ್ಕಾರದ ಇದೆ ಎಂಬ ಭಾವನೆ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಸಚಿವರ ಮೇಲೆ ಮುಖ್ಯಮಂತ್ರಿಗಳಿಗೆ ನಿಯಂತ್ರಣ ಇಲ್ಲ

ರಾಜ್ಯದಲ್ಲಿ ಬರ ಬಂದರೆ ನೆರವಿಲ್ಲ, ಕಾವೇರಿ ವಿಚಾರದಲ್ಲಿ ನೆರವಾಗುತ್ತಿಲ್ಲ. ನಾಲ್ಕು ತಿಂಗಳಲ್ಲಿ ಈ ಸರ್ಕಾರ ಜನರ ಪ್ರೀತಿಯನ್ನು ಕಳೆದಕೊಂಡಿದೆ. ಸಚಿವರ ಮೇಲೆ ಮುಖ್ಯಮಂತ್ರಿಗಳಿಗೆ ನಿಯಂತ್ರಣ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಕಾವೇರಿ ವಿಚಾರದಲ್ಲಿ ಗೊಂದಲ

ಕಾವೇರಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿಗಳು ನ್ಯಾಯಮೂರ್ತಿಗಳ ಸಭೆಯಲ್ಲಿ ಒಂದು ಹೇಳುತ್ತಾರೆ, ಹೊರಗೊಂದು ಹೇಳುತ್ತಾರೆ‌. ನ್ಯಾಯಮೂರ್ತಿಗಳ ಮಿಟಿಂಗ್‌ನಲ್ಲಿ ನಾವು ಅಪೀಲ್ ಹೊಗುತ್ತೇವೆ. ನೀರು ನಿಲ್ಲಿಸುತ್ತೇವೆ ಅಂತ ಸಭೆಯಲ್ಲಿ ಹೇಳಿದ್ದರು. ಆದರೆ, ಹೊರಗಡೆ ಬಂದು ಅಪೀಲ್ ಹೊಗುತ್ತೇವೆ. ಆದರೆ, ನೀರು ನಿಲ್ಲಿಸಲು ಆಗುವುದಿಲ್ಲ ಅಂತ ಹೇಳಿದ್ದಾರೆ.‌ ಯಾಕೆ ನಿಲ್ಲಿಸಲು ಆಗಲ್ಲ ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು‌.

ಇದನ್ನೂ ಓದಿ: Senior Citizens : ಹಿರಿಯ ನಾಗರಿಕರಿಗೆ ಗುಡ್‌ ನ್ಯೂಸ್;‌ ಶೀಘ್ರ ಮಾಸಾಶನ ಹೆಚ್ಚಳ

ಸರ್ಕಾರದಿಂದ ದ್ವಂದ್ವ ನೀತಿ

ನೀರು ನಿಲ್ಲಿಸಿದರೆ ನ್ಯಾಯಾಂಗ ನಿಂದನೆ ಆಗುತ್ತದೆ‌. ಸರ್ಕಾರ ವಜಾ ಆಗುತ್ತದೆ. ಡ್ಯಾಂ ವಶಪಡಿಸಿಕೊಳ್ಳುತ್ತಾರೆ ಅಂತ ಮುಖ್ಯಮಂತ್ರಿಗಳು ಹೇಳುತ್ತಾರೆ. ನೀವು ಇನ್ನೂ ಸುಪ್ರಿಂ ಕೊರ್ಟ್‌ಗೆ ಹೋಗುವುದಿದೆ. ಅಲ್ಲಿಗೆ ಹೋಗುವ ಮುನ್ನ ಹೆದರಿಕೊಂಡು ಈ ತರಹ ಹೇಳಿಕೆ ಕೊಟ್ಟರೆ, ನೀರು ಬಿಡುವಂತೆ ಕೋರ್ಟ್ ಹೇಳುತ್ತದೆ. ಮುಖ್ಯಮಂತ್ರಿಗಳಿಗೆ ಅಷ್ಟಾದರೂ ವ್ಯವಧಾನ ಬೇಡವೇ? ಈ ಸರ್ಕಾರ ಈ ತರಹ ದ್ವಂದ್ವ ನೀತಿ ಅನುಸರಿಸುತ್ತಾ ಬಂದಿದೆ. ರಾಜ್ಯದ ನೆಲ ಜಲ ಉಳಿಸಲು ಈ ಸರ್ಕಾರದಿಂದ ಸಾಧ್ಯ ಇಲ್ಲ ಅನ್ನುವುದು ಜನರಿಗೆ ಗೊತ್ತಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Exit mobile version