Site icon Vistara News

CM Siddaramaiah: ಹೊಸ ಹುದ್ದೆ ಸೃಷ್ಟಿಸಿದ ಸಿಎಂ ಸಿದ್ದರಾಮಯ್ಯ; ರಾಜ್ಯ ಸರ್ಕಾರಕ್ಕೆ ಐವರು ವಕ್ತಾರರ ನೇಮಕ!

Cm Siddaramaiah creates new post Five spokespersons appointed for state government

ಬೆಂಗಳೂರು: ರಾಜ್ಯ ಸರ್ಕಾರ ಈಚೆಗೆ ಹೊಸ ಹೊಸ ಹುದ್ದೆಗಳನ್ನು ಸೃಷ್ಟಿ ಮಾಡಿ ಸುದ್ದಿಯಾಗುತ್ತಲೇ ಇದೆ. ಇಲ್ಲಿಯವರೆಗೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ‌(Congress Government) ಯಾವುದೇ ವಕ್ತಾರರನ್ನು ನೇಮಕ ಮಾಡಿದ ಉದಾಹರಣೆ ಇಲ್ಲ. ಈಗ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಸಂಪುಟದ ಐವರು ಸಚಿವರನ್ನು ರಾಜ್ಯ ಸರ್ಕಾರದ ವಕ್ತಾರರನ್ನಾಗಿ ನೇಮಕ (spokespersons appointed for state government) ಮಾಡಿ ಆದೇಶ ಹೊರಡಿಸಿದ್ದಾರೆ.

ಯಾವೆಲ್ಲ ಸಚಿವರ ನೇಮಕ?

ಈ 5 ಸಚಿವರನ್ನು ರಾಜ್ಯ ಸರ್ಕಾರವು ವಕ್ತಾರರನ್ನಾಗಿ ನೇಮಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಇವರು ಸರ್ಕಾರದ ಸಾಧನೆಗಳನ್ನು ಸಮರ್ಥನೆ ಮಾಡಿಕೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ಆಯಾ ಇಲಾಖೆಗಳ ಮುಖ್ಯಸ್ಥರು ತಮ್ಮ ತಮ್ಮ ಇಲಾಖೆಗಳ ಸಾಧನೆಗಳ ಎಲ್ಲ ದಾಖಲೆಗಳು ಮತ್ತು ಸರ್ಕಾರದ ಮಾಹಿತಿಗಳನ್ನು ಈ 5 ಐದೂ ಸಚಿವರಿಗೆ ನೀಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ: Lok Sabha Election 2024: ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ; ಸಿ.ಟಿ. ರವಿ ವಿರುದ್ಧ ಶೋಭಾ ಪರೋಕ್ಷ ವಾಗ್ದಾಳಿ

ಇದೇ ಮೊದಲು!

ರಾಜ್ಯ ಸರ್ಕಾರಕ್ಕೆ ವಕ್ತಾರರನ್ನು ಈವರೆಗೆ ಯಾವ ಸರ್ಕಾರಗಳೂ ನೇಮಕ ಮಾಡಿಲ್ಲ. ಕೇವಲ ಅವರವರ ಪಕ್ಷಗಳಿಗೆ ವಕ್ತಾರರನ್ನು ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಅವರು ತಮ್ಮ ಪಕ್ಷವನ್ನು ಮಾಧ್ಯಮಗಳ ಮುಂದೆ ಸಮರ್ಥನೆ ಮಾಡಿಕೊಳ್ಳುತ್ತಿದ್ದರು. ಈಗ ರಾಜ್ಯ ಸರ್ಕಾರಕ್ಕೇ ನೇಮಕ ಮಾಡಿಕೊಳ್ಳಲಾಗಿದೆ.

ಏಕೆ ಈ ನಿರ್ಧಾರ?

ಲೋಕಸಭಾ ಚುನಾವಣೆ ಸಮೀಪ ಬರುತ್ತಿದೆ. ಈಗ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನೇನು ಚುನಾವಣೆ ದಿನಾಂಕಗಳು ಘೋಷಣೆಯಾಗಲಿವೆ. ಪ್ರಧಾನಿ ನರೇಂದ್ರ ಮೋದಿ ಸಹಿತ ಕೇಂದ್ರದ ಹಲವು ನಾಯಕರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಸಾಕಷ್ಟು ಆರೋಪಗಳ ಪಟ್ಟಿಯನ್ನು ರಾಜ್ಯದ ಜನತೆಯ ಮುಂದಿಡಲಿದ್ದಾರೆ. ಇದನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಎಲ್ಲವನ್ನೂ ಸಿಎಂ ಸಿದ್ದರಾಮಯ್ಯ ಅವರಾಗಲೀ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಾಗಲೀ ಸಮರ್ಥನೆ ಮಾಡುತ್ತಾ ಕೂರಲು ಆಗುವುದಿಲ್ಲ. ಹೀಗಾಗಿ ಸರ್ಕಾರದ ಸಾಧನೆಯನ್ನು ಹಿಡಿದು ಬಾಯಿ ಮುಚ್ಚಿಸುವ ಕೆಲಸವನ್ನು ಮಾಡುವ ಸಂಬಂಧ ಈ ನೇಮಕ ಮಾಡಲಾಗಿದೆ ಎಂದು ಹೇಳಲಾಗಿದೆ.

Exit mobile version