Site icon Vistara News

CM Siddaramaiah: ರಾಜ್ಯಕ್ಕೆ 1 ರೂ. GST ಸಹ ಬಾಕಿ ಇಲ್ಲ; ಸುಳ್ಳುರಾಮಯ್ಯರಿಂದ ಆರ್ಥಿಕ ದುಸ್ಥಿತಿ: ಪ್ರಲ್ಹಾದ್‌ ಜೋಶಿ

Union Minister Pralhad Joshi reacts to state budget

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯವನ್ನು ಆರ್ಥಿಕ ದುಸ್ಥಿತಿಗೆ ತಂದಿದ್ದಾರೆ. ಸುಳ್ಳು ಹೇಳೋದನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ತಮ್ಮ ಸ್ವಭಾವವನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ನಾನು ಅವರನ್ನು ಸುಳ್ಳುರಾಮಯ್ಯ ಎಂದು ಕರೆಯುತ್ತೇನೆ. ಅವರ ಸುಳ್ಳು ಎಷ್ಟರ ಮಟ್ಟಿಗೆ ಇದೆ ಎಂದರೆ, ಅವರ ಮಾತಿನ ಪ್ರಕಾರ ನಡೆದುಕೊಂಡಿದ್ದರೆ, ಇಷ್ಟೊತ್ತಿಗೆ ಕನಿಷ್ಠ ಹತ್ತು ಬಾರಿಯಾದರೂ ರಾಜಕೀಯ ನಿವೃತ್ತಿಯನ್ನು (Political retirement) ಪಡೆಯಬೇಕಾಗಿತ್ತು, ನಾವು ಹೆಚ್ಚುವರಿ ಮಾತ್ರವಲ್ಲ ಅಡ್ವಾನ್ಸ್ ಹಣ ಕೊಡುತ್ತಿದ್ದೇವೆ. ಇನ್ನು ಒಂದೇ ಒಂದು ರೂಪಾಯಿ ಜಿಎಸ್‌ಟಿ ಹಣ ಕೂಡ ಬಾಕಿ ಇಲ್ಲ ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ ಜೋಶಿ (Pralhad Joshi) ಹೇಳಿದರು.

ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪ್ರಲ್ಹಾದ ಜೋಶಿ, ರಾಜ್ಯ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರಿಯಾಗಿ ಸರ್ಕಾರ ನಿರ್ವಹಿಸಲಾಗದೆ ಕೇಂದ್ರದ ಮೇಲೆ ಬೊಟ್ಟು ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ: Border Dispute: ನಮ್ಮ ಭೂಮಿ, ನಮ್ಮ ಭಾಷೆಗೆ ಮೊದಲ ಆದ್ಯತೆ: ಡಿಸಿಎಂ ಡಿ.ಕೆ.ಶಿವಕುಮಾರ್

ಹತ್ತು ಸಲ ನಿವೃತ್ತಿ ಆಗಬೇಕಾಗಿತ್ತು

ಸಿದ್ದರಾಮಯ್ಯ ಪದೇ ಪದೆ ಸುಳ್ಳು ಹೇಳುತ್ತಲೇ ಇರುತ್ತಾರೆ. ಹೇಳೋದೆಲ್ಲವೂ ಸುಳ್ಳೇ. ತಾವು ಸುಳ್ಳು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಈಗಾಗಲೇ ಹೇಳಿದ್ದಾರೆ. ಹಾಗೆ ಅವರು ನಿವೃತ್ತಿ ತೆಗೆದುಕೊಂಡಿದ್ದರೆ ಈವರೆಗೆ ಹತ್ತು ಬಾರಿ ನಿವೃತ್ತಿಯನ್ನು ಪಡೆಯಬೇಕಾಗುತ್ತಿತ್ತು ಎಂದು ಪ್ರಲ್ಹಾದ ಜೋಶಿ ಲೇವಡಿ ಮಾಡಿದರು.

ಒಂದೇ ಒಂದು ರೂಪಾಯಿ ಜಿಎಸ್‌ಟಿ ಹಣ ಬಾಕಿ ಇಲ್ಲ

ಎನ್‌ಡಿಆರ್‌ಎಫ್‌ (NDRF) ಫಂಡ್​ನಲ್ಲಿ ಯುಪಿಎ ಯಾವತ್ತೂ ಹೆಚ್ಚು ಹಣ ಕೊಟ್ಟಿಲ್ಲ. ಆದರೆ, ನಾವು ಹೆಚ್ಚುವರಿ ಮಾತ್ರವಲ್ಲ ಅಡ್ವಾನ್ಸ್ ಹಣ ಕೊಡುತ್ತಿದ್ದೇವೆ. ಇನ್ನು ಒಂದೇ ಒಂದು ರೂಪಾಯಿ ಜಿಎಸ್‌ಟಿ ಹಣ ಕೂಡ ಬಾಕಿ ಇಲ್ಲ. 10 ವರ್ಷ ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಕೇಂದ್ರದ ಪಾಲಿನ ತೆರಿಗೆ ಹಂಚಿಕೆಯಲ್ಲಿ 2.85 ಲಕ್ಷ ಕೋಟಿ ರೂಪಾಯಿ ಕೊಟ್ಟಿದ್ದೇವೆ ಎಂದು ಪ್ರಲ್ಹಾದ ಜೋಶಿ ವಿವರಿಸಿದರು.

6279 ಕೋಟಿ ರೂಪಾಯಿ ಬಡ್ಡಿ ರಹಿತ ಸಾಲ ಕೊಟ್ಟಿದ್ದೇವೆ

ಕೇಂದ್ರದಿಂದ ಯಾವುದೇ ವಿಶೇಷ ಗ್ರ್ಯಾಂಟ್ ಕೊಟ್ಟಿಲ್ಲ ಅಂತೀದಾರೆ. ಆದರೆ, ಕರ್ನಾಟಕ ಸರ್ಕಾರಕ್ಕೆ 50 ವರ್ಷ ಅವಧಿಗೆ 6279 ಕೋಟಿ ರೂಪಾಯಿ ಬಡ್ಡಿ ರಹಿತ ಸಾಲ ಕೊಟ್ಟಿದ್ದೇವೆ ಎಂದು ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದರು.

ಕೊಟ್ಟ ಅನುದಾನ ಬಳಕೆ ಮಾಡಿಲ್ಲ

ಕೇಂದ್ರ ಸರ್ಕಾರ ವಿವಿಧ ಯೋಜನೆಗಳಲ್ಲಿ ನೀಡಿದ ಅನುದಾನ ಸಂಪೂರ್ಣ ಬಳಕೆಯೇ ಆಗಿಲ್ಲ. ಫೆಬ್ರವರಿ ಅಂತ್ಯ ಬಂದರೂ ಶೇ. 30 ರಿಂದ 38ರಷ್ಟು ಅನುದಾನ ಖರ್ಚು ಆಗದೇ ಉಳಿದಿದೆ ಎಂದು ಪ್ರಲ್ಹಾದ ಜೋಶಿ ಕಿಡಿಕಾರಿದರು.

ಇದನ್ನೂ ಓದಿ: Karnataka Budget Session 2024: ಸವಳು-ಜವಳು ಭೂಮಿ ಸುಧಾರಣೆಗೆ ಕ್ರಮ: ಎನ್.ಚಲುವರಾಯಸ್ವಾಮಿ

ಅನುದಾನದ ಮಾಹಿತಿ ಡಿಲೀಟ್

ಅನುದಾನ ವಿಚಾರವಾಗಿ ರಾಜ್ಯ ಸರ್ಕಾರದ ಡ್ಯಾಶ್ ಬೋರ್ಡ್‌ನಲ್ಲಿ ಎಲ್ಲ ಮಾಹಿತಿ ಹಾಕಿದ್ದರು. ಅದನ್ನು ಡೌನ್​ಲೋಡ್ ಮಾಡಲು ಬಿಜೆಪಿ ನಾಯಕರಿಗೆ ಸೂಚಿಸಿದ್ದೆ. ಅಷ್ಟರಲ್ಲಿ ಆಗಲೇ ಅಂಕಿ-ಅಂಶವೇ ಡಿಲೀಟ್ ಆಗಿದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇಲ್ಲಸಲ್ಲದ್ದನ್ನು ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಲ್ಹಾದ ಜೋಶಿ ಗಂಭೀರ ಆರೋಪ ಮಾಡಿದರು.

Exit mobile version