Site icon Vistara News

Congress Government : ಸರ್ಕಾರಕ್ಕೆ 140 ದಿನ; 2,50,993 ಕೋಟಿ ರೂ. ಬಜೆಟ್‌ನಲ್ಲಿ ಬಿಡುಗಡೆಯಾಗಿದ್ದು ಬೊಗಸೆಯಷ್ಟು!

CM Siddaramaiah and budget 2023

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ (Congress Government) ರಚನೆಯಾಗಿ 140 ದಿನ ಕಳೆದಿದೆ. ಆದರೆ, ರಾಜ್ಯ ಸರ್ಕಾರ ಇನ್ನೂ ಟೇಕ್‌ ಆಫ್‌‌ ಆಗಿಲ್ಲ. ಇದು ಶಾಸಕರು ಮತ್ತು ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ವಿಸ್ತಾರ ನ್ಯೂಸ್‌‌ ಎಕ್ಸ್‌ಕ್ಲೂಸಿವ್‌ ರಿಪೋರ್ಟ್‌‌‌ ಅನ್ನು ಬಿಚ್ಚಿಟ್ಟಿದೆ. ಗ್ಯಾರಂಟಿ ಸರ್ಕಾರದಲ್ಲಿ (Congress Guarantee Scheme) ಅಭಿವೃದ್ಧಿಗೆ ಪೆಟ್ಟು ಬಿದ್ದಿದ್ದು, ಗ್ಯಾರಂಟಿಗೆ ಜೈ ಎಂದು ಹೇಳಲಾಗಿದ್ದರೂ ಅಭಿವೃದ್ಧಿಗೆ ಬೈ ಬೈ ಮಾಡಲಾಗಿದೆ ಎಂಬ ಸಂಗತಿ ಅಂಕಿ-ಅಂಶಗಳಿಂದ ಗೊತ್ತಾಗಿದೆ.

ಹೊಸ ಸರ್ಕಾರ ಎಷ್ಟು ಹೊಸ ಕೆಲಸ ಶುರು ಮಾಡಿದೆ? ಹೊಸ ಕಾಮಗಾರಿಗಳಿಗೆ (New Works) ಚಾಲನೆ ಸಿಕ್ಕಿದೆಯಾ? ಹಳೇ ಬಿಲ್‌ ಅನ್ನು ಪಾವತಿ ಮಾಡಲಾಗಿದೆಯೇ? ಗ್ಯಾರಂಟಿ ಸರ್ಕಾರದಲ್ಲಿ ಶಾಸಕರಿಗೆ ಸಿಕ್ಕಿರುವ ಗ್ಯಾರಂಟಿ ಏನು? ಎಂಬ ಬಗ್ಗೆ ಇಲ್ಲಿದೆ ಉತ್ತರ.

ಇದನ್ನೂ ಓದಿ : OBC Reservation : ಒಬಿಸಿಗೆ ರಾಜಕೀಯ ಮೀಸಲಾತಿ; ಯಾವೆಲ್ಲ ಚುನಾವಣೆಗಳಿಗೆ ಅನುಕೂಲ?

ಸಿಎಂ ಸಿದ್ದರಾಮಯ್ಯ (CM Siddaramaiah) ಅವರು 2,50.993 ಕೋಟಿ ರೂಪಾಯಿಗಳ ಬಜೆಟ್‌ (Karnataka Budget) ಅನ್ನು ಘೋಷಣೆ ಮಾಡಿದ್ದರು. 2024ರ ಫೆಬ್ರುವರಿಗೂ ಈ ಬಜೆಟ್‌‌ ಚಾಲ್ತಿಯಲ್ಲಿರಲಿದೆ. ಈ ಬಜೆಟ್‌ಗೆ ಇನ್ನು ಐದು ತಿಂಗಳು ಮಾತ್ರ ಬಾಕಿ ಇದೆ. ಐದು ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ರೂಪಾಯಿಯನ್ನು ಸಿಎಂ ಮೀಸಲಿಟ್ಟಿದ್ದಾರೆ.

ಮೀಸಲಿಟ್ಟ ಹಣ ಎಷ್ಟು?

ಇನ್ನೂ ಆಗದ ಅನುಷ್ಠಾನ

ಬಜೆಟ್‌ ಮಂಡನೆ ಮಾಡಿ ಐದು ತಿಂಗಳು ಮುಗಿದರೂ ಅನುಷ್ಠಾನ ಮಾತ್ರ ಇಲ್ಲ. ಕೇವಲ ಚಾಲ್ತಿಯಲ್ಲಿ ಇರುವ ಯೋಜನೆಗಳಿಗೆ ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದೆ. ಲೋಕೋಪಯೋಗಿ, ಜಲ ಸಂಪನ್ಮೂಲ, ಬೆಂಗಳೂರು ಅಭಿವೃದ್ಧಿಗೆ ಅನುದಾನದ ಕೊರತೆ ಎದುರಾಗಿದೆ.

ಶಿಕ್ಷಣ, ಸಮಾಜ ಕಲ್ಯಾಣ, ಆರೋಗ್ಯಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆಯಾದರೂ ತೀವ್ರ ಕಡಿಮೆ ಅನುದಾನವನ್ನು ನೀಡಲಾಗಿದೆ. ಕೃಷಿಯ ಹೊಸ ಯೋಜನೆಗಳಿಗೆ ಒಂದು ರೂಪಾಯಿ ಸಹ ಬಿಡುಗಡೆ ಮಾಡಿಲ್ಲ. ಸರ್ಕಾರ ಬಂದ ಬಳಿಕ ಒಂದು ಟೆಂಡರ್‌ ಸಹ ಅನುಮೋದನೆಗೊಂಡಿಲ್ಲ. ಶಾಸಕರ ವಿಶೇಷ ಅನುದಾನಕ್ಕೆ ಬೇಡಿಕೆ ಬಂದಿದ್ದರೂ ಇನ್ನೂ ಆಗಿಲ್ಲ.

ಲೋಕೋಪಯೋಗಿ, ಸಾರಿಗೆ, ಪಂಚಾಯತ್‌ ರಾಜ್‌‌, ಆರೋಗ್ಯ ಮತ್ತು ಶಿಕ್ಷಣಕ್ಕೆ ಮಾತ್ರ ಅನುದಾನ ನೀಡಲಾಗಿದೆ. ಈ ಇಲಾಖೆಗಳ ಅಡಿಯಲ್ಲಿ ಈಗಾಗಲೇ ಚಾಲ್ತಿಯಲ್ಲಿ ಇರುವ ಕೆಲಸಕ್ಕೆ ಮಾತ್ರ ಅನುದಾನ ನೀಡಲಾಗಿದ್ದು, ಹೊಸ ಕಾಮಗಾರಿಗಳಿಗೆ ಹಣ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅನುದಾನ ಕೇಳಿದ ಶಾಸಕರಿಗೆ ಸಿಎಂ ಹೇಳಿದ್ದೇನು?

ಶಾಸಕರ ವಿಶೇಷ ಅನುದಾನ ಕೊಡಿ ಎಂದು ಶಾಸಕರ ಮನವಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ನವೆಂಬರ್‌ವರೆಗೂ ಇತ್ತ ಬರಬೇಡಿ ಎಂದು ಹೇಳಿದ್ದಾರೆ. ನಿಮ್ಮ ಕೆಲಸಗಳ ಪಟ್ಟಿ ಮಾಡಿಕೊಳ್ಳಿ ನವೆಂಬರ್‌ಗೆ ಸರ್ಕಾರದ ಆದಾಯ ಹೆಚ್ಚಾಳವಾಗಲಿದೆ. ಬಳಿಕ ನಿಮಗೆ ಅನುದಾನ ಕೊಡುತ್ತೇವೆ ಎಂದು ಹೇಳಿ ಕಳಿಸಿದ್ದಾರೆ.

ಯಾವ ಇಲಾಖೆಗೆ ಎಷ್ಟು ಹಣ ಬಿಡಗಡೆ?

ಬೆಂಗಳೂರು ಅಭಿವೃದ್ಧಿ ಅಡಿಯಲ್ಲಿ ಯಾವುದೇ ಹೊಸ ಕಾಮಗಾರಿ ಆಗಿಲ್ಲ. 2023ರ ಮೇ ತಿಂಗಳಿಂದ ಇಂದಿನವರೆಗೂ 650 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಹಳೇ ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿಗಳನ್ನು ಮುಂದುವರಿಕೆ ಮಾಡಲಾಗಿದೆ.

ಬಿಲ್‌ ನೋಡಿ ಕ್ಲಿಯರ್‌ ಹಳೇ ಬಾಕಿ 650 ಕೋಟಿ ರೂಪಾಯಿಯನ್ನು ಸರ್ಕಾರ ಕ್ಲಿಯರ್‌ ಮಾಡಿದೆ. ಜಲ ಸಂಪನ್ಮೂಲ ಇಲಾಖೆಗೆ ಇಲ್ಲಿಯವರೆಗೂ 4200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸಣ್ಣ ನೀರಾವರಿ ಯೋಜನೆಗೆ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಹೊಸ ಸರ್ಕಾರದಲ್ಲಿ ಟೆಂಡರ್‌ ಆಗಿಲ್ಲ. ಮೇ ತಿಂಗಳಿಂದ ಆದ ಕೆಲಸಗಳಿಗೆ ಹಣ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ : Ration Card : ಪಡಿತರ ಚೀಟಿ ಅಪ್ಡೇಟ್‌ ಶುರು; 6 ವರ್ಷದ ಒಳಗಿನ, ನಂತರದ ಮಕ್ಕಳ ಸೇರ್ಪಡೆಗೆ ಯಾವ ದಾಖಲೆ ಬೇಕು?

ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಆಗಿಲ್ಲ ಹೊಸ ಟೆಂಡರ್

ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 1000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಯಾವುದೇ ಹೊಸ ಟೆಂಡರ್‌ ಆಗಿಲ್ಲ. ಹಳೇ ಬಿಲ್‌ ಕ್ಲಿಯರ್‌ ಮಾಡಲಾಗುತ್ತಿದೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ 1500 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕೃಷಿ ಇಲಾಖೆಯ ನಡೆಯುತ್ತಿರುವ ಕೆಲಸಗಳಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ, ಕೃಷಿ ಹೊಂಡ ಯೋಜನೆಗೆ ಅನುದಾನ ಬಿಡುಗಡೆ ಮಾಡಲಾಗಿಲ್ಲ. ಲೋಕೋಪಯೋಗಿ ಇಲಾಖೆಗೆ ಮೀಸಲಿಟ್ಟ ಹಣ 10133 ಕೋಟಿ ರೂಪಾಯಿಯಾಗಿದೆ. ಇದರಲ್ಲಿ 5000 ಸಾವಿರ ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ. ಎರಡು ಕಾಮಗಾರಿಗಳಿಗೆ ಕ್ಯಾಬಿನೆಟ್ ಅನುಮೋದನೆ ಸಿಕ್ಕಿದೆ. ಕೆಲಸ ಪೂರ್ತಿ ಆಗಿರುವುದಕ್ಕೆ ಮಾತ್ರ ಹಣ ಬಿಡುಗಡೆ ಮಾಡಲಾಗುತ್ತಿದೆ. ಈ ಇಲಾಖೆಯಲ್ಲೂ ಇನ್ನೂ ಹೊಸ ಟೆಂಡರ್‌ ಆಗಿಲ್ಲ. ಪಂಚಾಯತ್‌ ರಾಜ್‌ ಇಲಾಖೆಯಲ್ಲೂ ಹೊಸ ಟೆಂಡರ್‌ ಆಗಿಲ್ಲ. 6000 ಕೋಟಿ ರೂಪಾಯಿ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ.

Exit mobile version