Site icon Vistara News

Congress Guarantee : ಗೃಹಲಕ್ಷ್ಮಿ – ಅನ್ನಭಾಗ್ಯ ಕಾಸು ಜಮೆಗೆ ಡೆಡ್‌ಲೈನ್; ಇದು ಗ್ಯಾರಂಟಿ ಗುಡ್ ನ್ಯೂಸ್!

Grihalakshmi and Annabhagya scheme

ಬೆಂಗಳೂರು: ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಈಗ ಗ್ಯಾರಂಟಿ (Congress Guarantee Scheme) ಗುಡ್ ನ್ಯೂಸ್‌ವೊಂದನ್ನು ಕೊಟ್ಟಿದೆ. ಗೃಹಲಕ್ಷ್ಮಿ (Gruha Lakshmi Scheme) ಹಾಗೂ ಅನ್ನಭಾಗ್ಯ ಯೋಜನೆಯ (Anna Bhagya Scheme) ಹಣವು ಫಲಾನುಭವಿಗಳ ಖಾತೆಗೆ ಜಮೆ ಆಗಲು ಗಡುವು ವಿಧಿಸಿ ಆದೇಶಿಸಲಾಗಿದೆ. ಅನ್ನಭಾಗ್ಯದ ದುಡ್ಡನ್ನು ಪ್ರತಿ ತಿಂಗಳ 15ರೊಳಗೆ ಹಾಗೂ ಗೃಹಲಕ್ಷ್ಮಿ ದುಡ್ಡನ್ನು ಪ್ರತಿ ತಿಂಗಳ 20ರೊಳಗೆ ಜಮಾ ಮಾಡುವಂತೆ ಆರ್ಥಿಕ ಇಲಾಖೆ ಸುತ್ತೋಲೆ ಹೊರಡಿಸಿದೆ.

ಈ ಮೂಲಕ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಬ್ರೇಕ್‌ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಅಲ್ಲದೆ, ಲೋಕಸಭಾ ಚುನಾವಣೆ ಒಳಗೆ ಈ ಬಗ್ಗೆ ಇರುವ ಗೊಂದಲಕ್ಕೆ ತೆರೆ ಎಳೆದು ಲಾಭ ಪಡೆದುಕೊಳ್ಳಲು ಮುಂದಾಗಲಾಗಿದೆ.

ಅನ್ನಭಾಗ್ಯ ಯೋಜನೆಯ ಹಣವನ್ನು ಪ್ರತಿ ತಿಂಗಳು 10ನೇ ತಾರೀಖಿನಿಂದ 15ನೇ ತಾರೀಖಿನೊಳಗೆ ಜಮೆ ಮಾಡಲು ಸೂಚನೆ ನೀಡಲಾಗಿದೆ. ಹಾಗೆಯೇ ಗೃಹಲಕ್ಷ್ಮಿ ಹಣವನ್ನು ತಿಂಗಳ 15- 20 ರೊಳಗೆ ಜಮೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಲೋಕಸಭಾ ಚುನಾವಣೆ ಲೆಕ್ಕಾಚಾರ

ಎಂಪಿ ಎಲೆಕ್ಷನ್ ಬೆನ್ನಲ್ಲೆ ಗ್ಯಾರಂಟಿ ಸಮರ್ಪಕ ಜಾರಿಗೆ ಸರ್ಕಾರ ಕಸರತ್ತು ಮಾಡಲಾಗುತ್ತಿದೆ. ರಾಜ್ಯದಲ್ಲಿ ಅನ್ನಭಾಗ್ಯ ಗೃಹಲಕ್ಷ್ಮಿ ದುಡ್ಡು ವಿಳಂಬವಾಗುತ್ತಿರುವುದರಿಂದ ಪ್ರತಿಪಕ್ಷಗಳು ಸೇರಿದಂತೆ ನಾಗರಿಕರು ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ, ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂದೆಲ್ಲ ಆರೋಪಗಳನ್ನು ಮಾಡಲಾಗಿದೆ. ಅಲ್ಲದೆ, ಅಭಿವೃದ್ಧಿಗೂ ಹಣ ಇಲ್ಲ. ಗ್ಯಾರಂಟಿ ಯೋಜನೆಗಳೂ ಸಮರ್ಪಕವಾಗಿ ಹಣ ನೀಡುತ್ತಿಲ್ಲ ಎಂದು ಆರೋಪ ಮಾಡಲಾಗಿತ್ತು.

ಹೀಗಾಗಿ ಆರ್ಥಿಕ ಇಲಾಖೆಯಿಂದ ಫಲಾನುಭವಿಗಳಿಗೆ ದುಡ್ಡು ತಲುಪಿಸಲು ನಿಗದಿತ ಗಡುವನ್ನು ವಿಧಿಸಲಾಗಿದೆ. ಡಿಬಿಟಿ ಪಾವತಿ ಸರಿಯಾಗಿ ಪ್ರಕ್ರಿಯೆ ಸರಿಯಾಗಿರುವಂತೆ ಸೂಚನೆ ನೀಡಲಾಗಿದೆ. ಇಲಾಖೆಯ ಡಿಡಿಒಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ರಾಜ್ಯ ಸರ್ಕಾರ ನೀಡಿದೆ.

ಪಾವತಿ ಪ್ರಕ್ರಿಯೆ ಹಾಗೂ ಫಲಾನುಭವಿಗಳ ಅಕೌಂಟ್‌ಗೆ ದುಡ್ಡು ತಲುಪಲು ಪ್ರತಿ ತಿಂಗಳಿಗೂ ದಿನಾಂಕವನ್ನು ನಿಗದಿ ಮಾಡಲಾಗಿದ್ದು, ತಪ್ಪದೇ ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಇದು ಈ ತಿಂಗಳಿಂದಲೇ ಜಾರಿಯಾಗುತ್ತಲಿದೆ.

ಇದನ್ನೂ ಓದಿ: Drought in Karnataka : ಕರ್ನಾಟಕಕ್ಕೆ ʼಬರʼ ಸಿಡಿಲು; ಬರ್ಬರ ಕ್ಷಾಮಕ್ಕೆ ತುತ್ತಾಯ್ತು 223 ತಾಲೂಕು!

ವಿಸ್ತಾರ ನ್ಯೂಸ್‌ ನಡೆಸಿತ್ತು ಅಭಿಯಾನ

ಗ್ಯಾರಂಟಿ ಯೋಜನೆಗಳು ಎಲ್ಲ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದು ವಿಸ್ತಾರ ನ್ಯೂಸ್ ಅಭಿಯಾನ ನಡೆಸಿತ್ತು. ನಮ್ಮ ವರದಿ ಬೆನ್ನಲ್ಲೇ ಎಚ್ಚೆತ್ತ ಸರ್ಕಾರವು ಈಗ ಹಣ ಜಮೆಗೆ ಗಡುವನ್ನು ನಿಗದಿಪಡಿಸಿದೆ. ಇನ್ನು ಸಾಮಾಜಿಕ ಭದ್ರತೆ ಪಿಂಚಣಿಯನ್ನು ಪ್ರತಿ ತಿಂಗಳು 5ನೇ ತಾರೀಖಿನ ಒಳಗೆ ಪಾವತಿಸಲು ಸೂಚನೆ ನೀಡಲಾಗಿದೆ. ಆರ್ಥಿಕ ಇಲಾಖೆಯಿಂದ ಈ ಆದೇಶ ಹೊರ ಬಿದ್ದಿದೆ.

Exit mobile version