Site icon Vistara News

Congress Karnataka : ಇಂದೇ ನಿಗಮ-ಮಂಡಳಿ ಪಟ್ಟಿ ಫೈನಲ್‌ ಮಾಡಲಿರುವ ಸುರ್ಜೇವಾಲ; ಯಾರಿಗೆ ಲಕ್?

CM siddaramaiah Ranadeep singh Surjewala and DK Shivakumar

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ (Congress Karnataka) ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದರೂ ಆಂತರಿಕ ಭಿನ್ನಮತ ಶಮನವಾಗಿಲ್ಲ. ಈಗಾಗಲೇ ಸಚಿವ ಸಂಪುಟ ಭರ್ತಿಯಾಗಿರುವುದರಿಂದ ಹಲವರಲ್ಲಿ ಅಸಮಾಧಾನ ಇದೆ. ಸಂಪುಟ ಪುನಾರಚನೆ, ಅವಕಾಶಕ್ಕಾಗಿ ಬೇಡಿಕೆ ಇಡುತ್ತಾ ಬಂದಿದ್ದಾರೆ. ಆದರೆ, ಈಗ ಹಿರಿಯ ಶಾಸಕರಾದಿಯಾಗಿ ಕೆಲವರನ್ನು ಸಮಾಧಾನ ಪಡಿಸಲು ಕಾಂಗ್ರೆಸ್‌ ಮಂದಾಗಿದೆ. ಅದಕ್ಕಾಗಿ ನಿಗಮ – ಮಂಡಳಿಗಳ ಆಯ್ಕೆಗೆ (Selection of Corporations and Boards) ಕಸರತ್ತು ನಡೆಸಿದೆ. ಈ ಸಂಬಂಧ ಈಗಾಗಲೇ ಎರಡೆರಡು ಬಾರಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲ (Randeep Singh Surjewala) ಜತೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಸಭೆ ನಡೆಸಿದ್ದಾರೆ. ಆದರೆ, ಇನ್ನೂ ಒಮ್ಮತ ಮೂಡಿಲ್ಲ ಎನ್ನಲಾಗಿದ್ದರೂ ಒಂದು ಹಂತದ ಸಂಭಾವ್ಯ ಪಟ್ಟಿ ಸಿದ್ಧವಾಗಿದೆ. ಇದನ್ನು ಈಗ ಅಂತಿಮಗೊಳಿಸಲು ಕೇಂದ್ರದಿಂದ ಸುರ್ಜೇವಾಲ ಬೆಂಗಳೂರಿಗೆ ಮಂಗಳವಾರ (ನ. 28) ಆಗಮಿಸಲಿದ್ದಾರೆ. ಹೀಗಾಗಿ ಇಂದೇ ಪಟ್ಟಿ ಫೈನಲ್‌ ಆಗಲಿದ್ದು, ಹೈಕಮಾಂಡ್‌ಗೆ ಲಿಸ್ಟ್‌ ರವಾನೆಯಾಗಲಿದೆ ಎಂದು ಹೇಳಲಾಗುತ್ತಿದೆ.

ಸಭೆ ಬಳಿಕ ಪಟ್ಟಿ ಹೈಕಮಾಂಡ್‌ಗೆ ಹೋಗುತ್ತೆ: ಡಿ.ಕೆ. ಶಿವಕುಮಾರ್

ಮಂಗಳವಾರ ನಿಗಮ ಮಂಡಳಿ ಆಯ್ಕೆಯ ಸಭೆ ನಡೆಯುತ್ತಿರುವುದು ಎಂದಿನ ಪ್ರಕ್ರಿಯೆಯಾಗಿದೆ. ಸಭೆ ಬಳಿಕ ಪಟ್ಟಿ ಹೈಕಮಾಂಡ್‌ಗೆ ರವಾನೆಯಾಗಲಿದೆ. ಹೈಕಮಾಂಡ್‌ನವರು ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಫೈನಲ್‌ ಆಗುತ್ತಾ? 50:50 ಫಾರ್ಮುಲಾ ಸಾಧ್ಯತೆ!

ನಿಗಮ ಮಂಡಳಿ ಪಟ್ಟಿ ಅಂತಿಮಗೊಳಿಸಲು ರಣದೀಪ್‌ ಸಿಂಗ್‌ ಸುರ್ಜೇವಾಲ ಭೇಟಿ ಕೊಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ನಡುವೆ ಈಗ ಇರುವ ಭಿನ್ನ ನಿಲುವು ಶಮನಕ್ಕೆ ಪ್ರಯತ್ನ ಮಾಡಲು ಮುಂದಾಗುತ್ತಿದ್ದಾರೆ. ನಿಗಮ – ಮಂಡಳಿ ಅಧ್ಯಕ್ಷ ಸ್ಥಾನ ನೀಡುವಾಗ ಶಾಸಕರ ಜತೆಗೆ ಕಾರ್ಯಕರ್ತರಿಗೂ ಕೊಡಬೇಕು ಎಂಬ ಚರ್ಚೆ ನಡೆಯುತ್ತಿದೆ. ಇಬ್ಬರಲ್ಲಿ ಒಮ್ಮತ ಮೂಡಿಸಲು 50-50 ಫಾರ್ಮುಲಾ ಜಾರಿ‌ ಮಾಡುವ ಬಗ್ಗೆ ಮಾತುಕತೆ ನಡೆಯಲಿದೆ.

ಅಧ್ಯಕ್ಷ ಗಾದಿ ರೇಸ್‌ನಲ್ಲಿರುವ ಶಾಸಕರ ಪಟ್ಟಿ

ಇವರಲ್ಲಿ ಯಾವ ಶಾಸಕರಿಗೆ ಅಧಿಕಾರ ಭಾಗ್ಯ ಸಾಧ್ಯತೆ?

ಇದನ್ನೂ ಓದಿ: CM Siddaramaiah : ಮೋದಿಗೆ ಸೋಲಿನ ಭಯ; ಅದಕ್ಕೇ ನಮ್ಮ ಸಾಧನೆಯ ಪ್ರಚಾರ ತಡೆದರು: ಸಿದ್ದರಾಮಯ್ಯ

ಯಾರೆಲ್ಲ ಕಾರ್ಯಕರ್ತರು ನಿರೀಕ್ಷೆಯಲ್ಲಿದ್ದಾರೆ…?

Exit mobile version