Site icon Vistara News

ಆ ಕಾಂಗ್ರೆಸ್‌ ನಾಯಕ ಟೀಮ್ ಕಟ್ಟಿಕೊಂಡು ನಿಮ್ಮ ಜತೆ ಬರ್ತಾನೆ: ಅಶೋಕ್‌, ವಿಜಯೇಂದ್ರಗೆ ಎಚ್‌ಡಿಕೆ ಪಿಸು ಮಾತು

HD Kumaraswamy

ಬೆಳಗಾವಿ: ಕೇಂದ್ರ ಸರ್ಕಾರದ ಬಳಿ ಹೋಗಿ 50 ಜನರನ್ನು ಕರೆದುಕೊಂಡು ಬರುತ್ತೇವೆ ಎಂದು ಕಾಂಗ್ರೆಸ್‌ನ ಪ್ರಮುಖ ನಾಯಕರೇ ಮಾತನಾಡಿದವರಿದ್ದಾರೆ. ಅವರ ಹಗರಣಗಳನ್ನು ಮುಚ್ಚಿ ಹಾಕಿಕೊಳ್ಳೋದಕ್ಕೆ ಹೋಗಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ‌. ಕುಮಾರಸ್ವಾಮಿ (HD Kumaraswamy) ಈಚೆಗೆ ಹೇಳಿದ್ದರು. ಈಗ ಮಾತನ್ನು ಎಚ್‌.ಡಿ. ಕುಮಾರಸ್ವಾಮಿ ಪುನರುಚ್ಚಾರ ಮಾಡಿದ್ದು, ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (Opposition leader R Ashok), ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BJP state president BY Vijayendra) ಅವರ ಜತೆಗಿ ಮಹತ್ವದ ಮೀಟಿಂಗ್‌ನಲ್ಲಿ ಮತ್ತೊಮ್ಮೆ ಪ್ರಸ್ತಾಪ ಮಾಡಿದ್ದಾರೆ. ಆ ಮೂಲಕ ಕಾಂಗ್ರೆಸ್‌ ಒಂದು ತಂಡ ಬಿಜೆಪಿಗೆ ಬರಲು ಸಜ್ಜಾಗಿದೆ ಎಂಬ ಮಾಹಿತಿಯನ್ನು ಈ ವೇಳೆ ಬಿಚ್ಚಿಟ್ಟಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ (Karnataka Politics) ಭಾರಿ ಬದಲಾವಣೆ ಆಗುವ ಮುನ್ಸೂಚನೆಯನ್ನು ನೀಡಿದ್ದಾರೆ.

ವಿಪಕ್ಷ ನಾಯಕರ ಕೊಠಡಿಯಲ್ಲಿ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಕೆಲವು ಕಾಲ ರಹಸ್ಯ ಮಾತುಕತೆಯನ್ನು ನಡೆಸಿದ್ದರು. ಈ ವೇಳೆ ಕಾಂಗ್ರೆಸ್‌ನ 50 ಶಾಸಕರು ಬಿಜೆಪಿಗೆ ಬರುವ ಸುದ್ದಿ ಪುನಃ ಪ್ರಸ್ತಾಪ ಆಗಿದೆ. ಈ ವೇಳೆ ತಮ್ಮ ಮಾತನ್ನು ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮೆ ದೃಢೀಕರಿಸಿದ್ದಾರೆ.

ನನ್ನ ಹೇಳಿಕೆ ಸುಳ್ಳಲ್ಲ ಎಂದ ಎಚ್‌ಡಿಕೆ

ಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್‌. ಅಶೋಕ್‌, ಕುಮಾರಣ್ಣಾ ನಿನ್ನ ಹೇಳಿಕೆ ರಾಜ್ಯಾದ್ಯಂತ ಚರ್ಚೆ ಆಗುತ್ತಿದೆ ಎಂದು ಹೇಳಿದರು. ಅದಕ್ಕೆ ಎಚ್.ಡಿ. ಕುಮಾರಸ್ವಾಮಿ, ಇಲ್ಲ ಬ್ರದರ್ ಆ ಹೇಳಿಕೆ ಸುಳ್ಳಲ್ಲ. ಕಾಂಗ್ರೆಸ್‌ನಲ್ಲಿ ಆ ಬೆಳವಣಿಗೆ ನಡೆಯುತ್ತಿರುವುದು ನಿಜ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಖಾಲಿ ಆಗುತ್ತದೆ ಎಂದ ಹೇಳಿದರು.

ಕೈ ಶಾಸಕರಿಗೆ ಸರ್ಕಾರ ರಚನೆ ಮಾಡುವವರು ಬೇಕು

ಆ ನಾಯಕ ಟೀಮ್ ಕಟ್ಟಿಕೊಂಡು ನಿಮ್ಮ ಜತೆ ಬಂದು ಬಿಡುತ್ತಾನೆ. ಲೋಕಸಭೆ ಚುನಾವಣೆ ಬಳಿಕ ಇಲ್ಲಿ ಕಾಂಗ್ರೆಸ್ ಸರ್ಕಾರ ಇರಲಾರದು. ಈಗ ಶಾಸಕರಿಗೆ ಯಾರು ಸರ್ಕಾರ ರಚನೆ ಮಾಡುತ್ತಾರೋ ಅವರು ಬೇಕು ಅಷ್ಟೇ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: Belagavi Winter Session: ಕರ್ನಾಟಕ ಮೋಟಾರು ವಾಹನ ತೆರಿಗೆ ವಿಧೇಯಕ ಮಂಡನೆ; ಏರಲಿದೆಯೇ ದರ?

ಕಾಂಗ್ರೆಸ್‌ ನಾಯಕನ ಬಗ್ಗೆ ಹೇಳಿದ್ದ ಎಚ್‌ಡಿಕೆ

ನಾನು ನಿಮ್ಮ ಜತೆ ಬರುತ್ತೇನೆ, ಐವತ್ತು ಜನರನ್ನು ಕರೆದುಕೊಂಡು ಬರುತ್ತೇನೆ ಎಂಬುದಾಗಿ ಕೇಂದ್ರದ ನಾಯಕರ ಬಳಿ ಮಾತನಾಡಿರುವ ಬಗ್ಗೆ ಮಾಹಿತಿ ಇದೆ. ಇಲ್ಲಿ ಯಾರು ಯಾರಿಗೂ ನಿಷ್ಠೆ, ಪ್ರಾಮಾಣಿಕತೆ ಇಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ ಮಾಡುತ್ತಾರೆ. ಈ ಸರ್ಕಾರ ಮುಂದೆ ಏನಾಗುತ್ತದೆ ಎಂಬುದು ಲೋಕಸಭಾ ಚುನಾವಣಾ ಮುಗಿದ ಬಳಿಕ ಗೊತ್ತಾಗುತ್ತದೆ ಎಂದು ಭಾನುವಾರ ಮಾಜಿ ಸಿಎಂ ಎಚ್.ಡಿ‌. ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಈ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‌ನ ಪ್ರಮುಖ ನಾಯಕರೇ ಐವತ್ತು ಶಾಸಕರನ್ನು ಕರೆತರುವ ಬಗ್ಗೆ ಬಿಜೆಪಿ ನಾಯಕರ ಜತೆ ಮಾತನಾಡಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಬಾಂಬ್‌ ಸಿಡಿಸಿದ್ದರು. ಈಗ ಆ ಮಾತು ನಿಜ. ಅಂಥದ್ದೊಂದು ಬೆಳವಣಿಗೆಗಳು ನಡೆದಿವೆ ಎಂದು ಹೇಳಿದ್ದಾರೆ.

Exit mobile version