Site icon Vistara News

Congress Politics : ಕೊನೆಗೂ ನಿಗಮ-ಮಂಡಳಿ ಫೈನಲ್‌; 32 ಶಾಸಕರಿಗೆ ಸ್ಥಾನ, ಯಾರಿದ್ದಾರೆ?

Siddaramaiah DK Shivakumar board and Corporation

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಶಾಸಕರು ಮತ್ತು ಕಾರ್ಯಕರ್ತರು ಬಹು ನಿರೀಕ್ಷೆಯಿಂದ ಕಾಯುತ್ತಿರುವ (Congress Politics) ನಿಗಮ ಮತ್ತು ಮಂಡಳಿ ನೇಮಕಾತಿಯ (Board and Corporation) ಮೊದಲ ಹಂತವನ್ನು ಅಂತಿಮಗೊಳಿಸಲಾಗಿದೆ. ಸುಮಾರು 32 ಮಂದಿಯ ಮೊದಲ ಪಟ್ಟಿ (32 Members in first List) ಯಾವುದೇ ಕ್ಷಣ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ರಾಜ್ಯದಲ್ಲಿ ಕಾಂಗ್ರೆಸ್‌ 136 ಸ್ಥಾನ ಪಡೆದು ಗೆದ್ದಿದ್ದರೂ ನಿಗಮ- ಮಂಡಳಿ ನೇಮಕಾತಿ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ತೀರಾ ಸಮಸ್ಯೆ ಎದುರಿಸಿತ್ತು. ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರ ನಡುವೆ ಯಾರನ್ನು ನೇಮಕ ಮಾಡಬೇಕು ಎಂಬ ವಿಚಾರದಲ್ಲಿ ಉಂಟಾಗಿದ್ದ ತಾಕಲಾಟವೇ ವಿಳಂಬಕ್ಕೆ ಕಾರಣವಾಗಿತ್ತು. ಇದೀಗ ಒಂದು ಸಾಮರಸ್ಯ ಸೂತ್ರದ ಮೂಲಕ ಮೊದಲ ಪಟ್ಟಿ ಬಿಡುಗಡೆಯ ಹಂತವನ್ನು ತಲುಪಿದೆ. ಈ ಹಿಂದೆ ಮೂರು ಬಾರಿ ಸಭೆ ನಡೆಸಿದ್ದರೂ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ಮಂಗಳವಾರ ದಿಲ್ಲಿಯಲ್ಲಿ ನಡೆದ ಮಹತ್ವದ ಹೈಕಮಾಂಡ್‌ ಸಭೆಯಲ್ಲಿ 32 ಸದಸ್ಯರ ಪಟ್ಟಿ ಅಂತಿಮಗೊಳಿಸಲಾಗಿದೆ. ಕಾಂಗ್ರೆಸ್‌ ರಾಜ್ಯ ‌ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಇನ್ನೊಬ್ಬ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಸಮ್ಮುಖದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರ ಉಪಸ್ಥಿತಿಯಲ್ಲಿ ಸುದೀರ್ಘ ಚರ್ಚೆ ನಡೆದು ರಾತ್ರಿ 12 ಗಂಟೆಯ ಬಳಿಕ ಪಟ್ಟಿಗೆ ಒಪ್ಪಿಗೆ ಸೂಚಿಸಲಾಗಿದೆ.

ಎರಡಕ್ಕಿಂತ ಹೆಚ್ಚು ಬಾರಿ ಗೆದ್ದವರಿಗೆ ಈ ಬಾರಿ ಅವಕಾಶ

ನಿಗಮ ಮತ್ತು ಮಂಡಳಿ ನೇಮಕಾತಿಯಲ್ಲಿ ಯಾವ ನಿಯಮ ಅನುಸರಿಸಬೇಕು ಎಂಬುದು ಹಿಂದಿನಿಂದಲೂ ಬಹು ಚರ್ಚಿತ ವಿಷಯವಾಗಿತ್ತು. ಕೇವಲ ಕಾರ್ಯಕರ್ತರಿಗೆ ನೀಡಬೇಕೇ? ಹಿರಿಯ ಶಾಸಕರಿಗೆ ಮಾತ್ರ ನೀಡಬೇಕೇ ಎಂಬ ವಿಚಾರದಲ್ಲಿ ಚರ್ಚೆ ನಡೆದು ಈಗ ಅಂತಿಮವಾಗಿ ಎರಡು ಮತ್ತು ಅದಕ್ಕಿಂತ ಹೆಚ್ಚು ಬಾರಿ ಗೆದ್ದ ಶಾಸಕರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಅಂದರೆ ಮೊದಲ ಪಟ್ಟಿಯಲ್ಲಿ ಮೊದಲ ಬಾರಿ ಶಾಸಕರಾದವರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಲಾಗಿಲ್ಲ.

ಮೊದಲ ಪಟ್ಟಿಯಲ್ಲಿ ಪರಿಷತ್ ಸದಸ್ಯರಿಗೂ ಸ್ಥಾನ ನೀಡಲಾಗಿಲ್ಲ. ಕೇವಲ ವಿಧಾನ ಸಭಾ ಸದಸ್ಯರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರ ಬಣಗಳೆರಡನ್ನೂ ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಲಾಗಿದೆ. ಜತೆಗೆ ಮಂತ್ರಿ ಸ್ಥಾನ ಸಿಗದೆ ನಾನಾ ಕಾರಣ ಇಟ್ಟುಕೊಂಡು ಕಾಲು ಕೆದರಿ ಜಗಳಕ್ಕೆ ಬರುತ್ತಿರುವ ಕೆಲವು ನಾಯಕರಿಗೂ ಸ್ಥಾನ ಸಿಗಲಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸಹಾಯವಾಗಬಲ್ಲವರಿಗೂ ಸ್ಥಾನ ನೀಡುವ ಪ್ರಯತ್ನ ನಡೆಸಲಾಗಿದೆ.

ಇದನ್ನೂ ಓದಿ: Congress Karnataka: ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಡಿಶುಂ ಡಿಶುಂ; ನಿಗಮ-ಮಂಡಳಿ ನೇಮಕಕ್ಕೆ ಮೂಡದ ಒಮ್ಮತ!

ಹಾಗಿದ್ದರೆ ಮೊದಲ ಪಟ್ಟಿಯಲ್ಲಿರುವ ಸಂಭಾವ್ಯರು ಯಾರೆಲ್ಲ?

  1. ಪಿಎಂ ನರೇಂದ್ರ ಸ್ವಾಮಿ
  2. ಶಿವಲಿಂಗೇಗೌಡ
  3. ಅನಿಲ್‌ ಚಿಕ್ಕಮಾದು
  4. ಬಂಗಾರಪೇಟೆ ನಾರಾಯಣಸ್ವಾಮಿ
  5. ಕೆ.ವೈ ನಂಜೇಗೌಡ
  6. ಬಿ.ಆರ್‌ ಪಾಟೀಲ್‌‌
  7. ಗಣೇಶ್‌ ಹುಕ್ಕೇರಿ
  8. ಮಹಾಂತೇಶ್‌ ಕೌಜಲಗಿ
  9. ಯಶವಂತರಾಯಗೌಡ ಪಾಟೀಲ್‌
  10. ಬಿ.ಜಿ ಗೋವಿಂದಪ್ಪ
  11. ರಾಘವೇಂದ್ರ ಹಿಟ್ನಾಳ್
  12. ರಘುಮೂರ್ತಿ
  13. ಪ್ರಸಾದ್‌‌ ಅಬ್ಬಯ್ಯ
  14. ಜೆ ಟಿ ಪಾಟೀಲ್‌
  15. ವಿಜಯಾನಂದ ಕಾಶಪ್ಪನವರ್
  16. ನಾಡಗೌಡ
  17. ರಮೇಶ್‌‌ ಬಂಡಿಸಿದ್ದೇಗೌಡ
  18. ಟಿಡಿ ರಾಜೇಗೌಡ
  19. ಬಿಕೆ ಸಂಗಮೇಶ್‌‌
  20. ಸತೀಶ್‌ ಶೈಲ್‌
  21. ಮಾಗಡಿ ಬಾಲಕೃಷ್ಣ
  22. ಶರತ್‌ ಬಚ್ಚೇಗೌಡ
  23. ಡಾ.ರಂಗನಾಥ್‌‌
  24. ಬೇಳೂರು ಗೋಪಾಲಕೃಷ್ಣ

Exit mobile version