Site icon Vistara News

Congress Politics: ಕಾಂಗ್ರೆಸ್‌ ಗೆಲ್ಲಬಹುದಾದ ಸ್ಥಾನ ಈಗ 140ಕ್ಕೆ ಏರಿಕೆಯಾಗಿದೆ: ಡಿ.ಕೆ. ಶಿವಕುಮಾರ್‌ ಹೇಳಿಕೆ

congress-politics-congress-may-cross-140-seats-says-dk-shivakumar

#image_title

ಬೆಂಗಳೂರು: ಕಾಂಗ್ರೆಸ್‌ ಪಕ್ಷವು ಗೆಲ್ಲಬಹುದಾದ ಸ್ಥಾನಗಳ ಸಂಖ್ಯೆ ಈ ಹಿಂದೆ 136ಇತ್ತು, ಈಗ 140ನ್ನು ದಾಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಕೊಳ್ಳೇಗಾಲ ಮಾಜಿ ಶಾಸಕ ನಂಜುಂಡಸ್ವಾಮಿ, ಮಾಜಿ ಶಾಸಕ‌‌ ಮನೋಹರ ಐನಾಪುರ ಹಾಗೂ ಮೈಸೂರು ಮಾಜಿ ಮೇಯರ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್‌ ಮಾತನಾಡಿದರು.

ಇಬ್ಬರು ಮಾಜಿ ಶಾಸಕರು, ಮಾಜಿ‌ ಮೇಯರ್ ಪುರುಷೋತ್ತಮ್ ಸೇರ್ಪಡೆ ಆಗಿದ್ದಾರೆ. ಚುನಾವಣೆಗೆ 50 ದಿನ ಮಾತ್ರ ಬಾಕಿಯಿದೆ. ಅರ್ಜೆಂಟಾಗಿ ಚುನಾವಣೆ ನಡೆಸೋಕೆ ಬಿಜೆಪಿ ಹೊರಟಿತ್ತು. ಆದರೆ ಚುನಾವಣೆ ಮುಂದಕ್ಕೆ ಹೋಗುತ್ತಿದೆ. ಮುಂದಕ್ಕೆ ಹೋದಷ್ಟು‌ ತಮಗೆ ಲಾಭ ಎಂದರು ಬಿಜೆಪಿಯವರು ಯೋಚಿಸ್ತಿದ್ದಾರೆ. ಪ್ರತಿದಿನ ಟೆಂಡರ್ ಆಗ್ತಾನೇ ಇವೆ. ಹಣ ಕೂಡ ಬಿಡುಗಡೆ ಯಾಗ್ತಿದೆ.

ಬಿಜೆಪಿಗೆ ದಿನ ದಿನ ಶಾಕಿಂಗ್ ನ್ಯೂಸ್ ಎದುರಾಗಿದೆ. ಅವರ ಪಕ್ಷದ ಎಲ್ಲವೂ ಬಯಲಾಗ್ತಿದೆ. ಅತಿವೃಷ್ಠಿ ವೇಳೆ ಬಾರದ ಅವರ ರಾಷ್ಟ್ರೀಯ ನಾಯಕರು, ಈಗ ಮೇಲಿಂದಮೇಲೆ ರಾಜ್ಯಕ್ಕೆ ಬರ್ತಿದ್ದಾರೆ. ಮತಕ್ಕಾಗಿ ಅವರು ಇಲ್ಲಿಗೆ ಬರ್ತಿದ್ದಾರೆ. ವಿವಿಧ ರೀತಿಯಲ್ಲಿ ಯಾತ್ರೆ ಮಾಡ್ತಿದ್ದಾರೆ. ಅವರು ಯಾವ ಯಾತ್ರೆ ಬೇಕಾದ್ರೂ ಮಾಡಿಕೊಳ್ಳಲಿ. ಕೂಡಲೇ ಆಯೋಗ ಚುನಾವಣೆ ಘೋಷಿಸಬೇಕು. ಭ್ರಹ್ಮಾಂಡ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಬೇಕು ಎಂದರು.

ನಮ್ಮ ಸರ್ವೆ ಪ್ರಕಾರ 136 ಸ್ಥಾನ ಇತ್ತು. ಈಗ 140 ಸ್ಥಾನ ದಾಟಿ ಹೋಗಿದೆ. ಅಮೀತ್ ಶಾ ಅವರೆ ಇದನ್ನು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‌ ಗ್ಯಾರಂಟಿ ಸ್ಕೀಂಗಳು ಗೋಗಸ್‌ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಸಿಎಂ ಅವರೆ ನಾನು ಬಹಿರಂಗ ಚರ್ಚೆ ಮಾಡಲು ಸಿದ್ದ. ರಾಜ್ಯಪಾಲ ಕೈಯಲ್ಲಿ ಭಾಷಾಣ ಮಾಡಿಸಿದ್ದೀರ, ಹೆಚ್ಚುವರಿ ವಿದ್ಯುತ್ ಮಾರಾಟ ಮಾಡುತ್ತಿದ್ದೇವೆ ಎಂದು. ಇದು ಸಿದ್ದರಾಮಯ್ಯ ಸರ್ಕಾರದಲ್ಲಿ ನಾವು ಮಾಡಿದ ಕೆಲಸ.

ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮಾಡಲು ನಾವು ಕಾರಣ. ಈಗ ಬೋಗಸ್ ಅಂತ ಹೇಳ್ತಾ ಇದ್ದೀರ. ಪವರ್ ಉಳಿತಾಯದಲ್ಲಿ ರಾಜ್ಯವು ರಾಷ್ಟ್ರಕ್ಕೆ ಮಾದರಿ. 200 ಯೂನಿಟ್ ಉಚಿತವಾಗಿ ಕೊಡುತ್ತೇವೆ. ಒಂದು ವೇಳೆ ಸಾಧ್ಯವಾಗದೆ ಹೊದ್ರೆ ರಾಜಕೀಯದಲ್ಲಿ ಇರಲ್ಲ. 10 ಕೆ.ಜಿ. ಅಕ್ಕಿ ನಿಶ್ಚಿತವಾಗಿ ಕೊಡುತ್ತೇವೆ. ಜನರಿಗೆ ಶಪಥ ಮಾಡಿದ್ದೇವೆ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷ ಕಾಂಗ್ರೆಸ್‌, ಈ ಪಕ್ಷ ಮಾತ್ರ ಎಲ್ಲ ಧರ್ಮ, ಜಾತಿಯನ್ನು ಸಮಾನವಾಗಿ ಕಾಣುತ್ತದೆ. ಬಿಜೆಪಿ ಜೆಡಿಎಸ್ ಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಬಿಜೆಪಿ ಮೇಲ್ಜಾತಿಯ ಹಾಗೂ ಶ್ರೀಮಂತರ ಪರವಾದ ಪಕ್ಷ. ನಳಿನ್ ಕುಮಾರ್ ಕಟೀಲ್ ರಸ್ತೆ ಚರಂಡಿ ಬಗ್ಗೆ ಮಾತನಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಫರ್ಮಾನು ಹೊರಡಿಸಿದ್ದಾರೆ.

ಧರ್ಮ ಜಾತಿ ಹಿಂದುತ್ವ ಇಟ್ಟುಕೊಂಡು ಅಧಿಕಾರಕ್ಕೆ ಬರುವುದು ಅವರ ಉದ್ದೇಶ. ಎರಡು ಲೋಕಸಭಾ ಚುನಾವಣೆಯಲ್ಲಿ ಹಿಂದುತ್ವದ ಮೇಲೆ ಅಧಿಕಾರಕ್ಕೆ ಬಂದರು. ಇವಾಗ ಹಿಂದುತ್ವ ಕೆಲಸ ಮಾಡಲ್ಲ ಎಂದು ಗೊತ್ತಾಗಿದೆ. ಹಿಂದುತ್ವ ಪ್ರಯೋಗ ಮಾಡಲು ಕಷ್ಟ ಆಗಿದೆ. ಅದಕ್ಕೆ ಹಣದ ಮೂಲಕ ಪ್ರಯೋಗ ಮಾಡ್ತಿದ್ದಾರೆ. ಲಂಚ ಹೊಡೆದ ಹಣ ಟನ್ ಗಟ್ಟಲೆ ಇದೆ. ಕೋಟ್ಯಾಂತರ ಖರ್ಚು ಮಾಡುವ ಉದ್ದೇಶ ಇದೆ. ನಾಲ್ಕು ವರ್ಷದಲ್ಲಿ ಅಭಿವೃದ್ಧಿ ಇಲ್ಲ ಲೂಟಿ ಮಾಡ್ತಿದ್ದಾರೆ.

ಭ್ರಷ್ಟಾಚಾರದ ದಾಖಲೆಗಳನ್ನು ಸಿಎಂ ಬೊಮ್ಮಾಯಿ ಕೇಳ್ತಿದ್ದಾರೆ. ಜನರಿಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ. ಭ್ರಷ್ಟಾಚಾರ ರಕ್ಷಣೆಗೆ ಎಸಿಬಿ ರಚನೆ ಮಾಡಿದ್ರು ಎನ್ನುತ್ತಾರೆ. ಕನಿಷ್ಠ ಕಾನೂನು ಜ್ಞಾನ ಇದ್ದವರು ಹೀಗೆ ಮಾತನಾಡಲ್ಲ. ನಾವು ಲೋಕಾಯುಕ್ತ ಮುಚ್ಚುವ ಕೆಲಸ ಮಾಡಿಲ್ಲ. ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಡೆದ ಕಾರಣ ಎಸಿಬಿ ರಚನೆ ಮಾಡಿದ್ದೆವು. ಎಸಿಬಿ ರದ್ದು ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗ ರದ್ದು ಮಾಡಿಲ್ಲ. ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯದಲ್ಲಿ ಎಸಿಬಿ ಲೋಕಾಯುಕ್ತ ಇದೆ. ಅಲ್ಲಿ ಏಕೆ ರದ್ದು ಮಾಡಿಲ್ಲ ಎಸಿಬಿ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Lokayukta Raid : ಬೆಂಗಳೂರು, ದಾವಣಗೆರೆಯ ಬೀದಿಗಳಲ್ಲಿ ಮಾಡಾಳ್‌ ನಾಪತ್ತೆ ಪೋಸ್ಟರ್‌, ಹುಡುಕಿಕೊಡಲು ಮನವಿ!

ಯಡಿಯೂರಪ್ಪ ಅವರ ಆಪ್ತ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ರೆಡ್ ಹ್ಯಾಂಡ್ ಆಗಿ ಸಿಕ್ಕಿದ್ದಾರೆ. ಇದು 40% ಕಮಿಷನ್ ಗೆ ಸಾಕ್ಷಿ. ಈಗ ಏನು ದಾಖಲೆ ಬೇಕು‌ ಮಿಸ್ಟರ್ ಬೊಮ್ಮಾಯಿ? ನೈತಿಕತೆ ಇದ್ದರೆ ಸಿಎಂ ರಾಜಿನಾಮೆ ಕೊಡಲಿ. ಮಾಡಾಳ್ ವಿರೂಪಾಕ್ಷಪ್ಪನಿಗೆ ರಕ್ಷಣೆ ಮಾಡ್ತಾ ಇದ್ದಾರೆ. ಮಾಡಾಳ್ ಬೆಂಗಳೂರಿನಲ್ಲಿ ಇದ್ದಾನೆ. ಸರ್ಕಾರದವರೇ ಅವನಿಗೆ ರಕ್ಷಣೆ ಕೊಡ್ತಾ ಇದ್ದಾರೆ. ಈಗ 50% ಕಮಿಷನ್ ಆಗಿದೆ. ಮೊನ್ನೆ ಭಾಷಣ ಮಾಡುವಾಗ ಒಬ್ಬ ಚೀಟಿ ಕೊಟ್ಟು ಕಳಿಸಿದ್ದ. ಸರ್‌ ನಾನೇ 53% ಕಮಿಷನ್ ಕೊಟ್ಟಿದ್ದೇನೆ ಎಂದು ಚೀಟಿ ಕೊಟಿದ್ದ.

ದಲಿತರು ಬಿಜೆಪಿ ಕಡೆ ತಿರುಗಿ ನೋಡಬಾರದು. ಬಿಜೆಪಿಯವರು ಮನುವಾದಿಗಳು. ದಲಿತರಿಗೆ ಬಿಜೆಪಿ ಮೋಸ ಮಾಡಿದೆ. ಸಾಮಾಜಿಕ ನ್ಯಾಯ ಕೊಡ್ತಾರಾ? ನಂಜುಂಡಸ್ವಾಮಿ, ಐನಾಪುರ ಒಳ್ಳೆಯ ಕೆಲಸ ಮಾಡಿದ್ದಾರೆ. ಪುರುಷೋತ್ತಮ ಮೊದಲು ನಮ್ಮ ಜೊತೆ ಇದ್ದರು. ಈಗ ಮತ್ತೆ ನಮ್ಮ ಜೊತೆಗೆ ಬಂದಿದ್ದಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿಗೆ ಬೇಸರ ಮಾಡಿಕೊಳ್ಳಬಾರದು. ಕುಳಿತು ಚರ್ಚೆ ಮಾಡಿಕೊಳ್ಳೋಣ ಎಂದು ಹೇಳಿದರು.

Exit mobile version