Site icon Vistara News

Congress Politics : ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಅಧಿಕೃತ ಎಂಟ್ರಿ; ಎಲ್ಲಾ 28 ಕ್ಷೇತ್ರಗಳಿಗೆ ವೀಕ್ಷಕರ ನೇಮಕ

parliament Elections Siddaramaiah DK Shivakumar

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಗೆ (Assembly Elections 2023) ಚುರುಕಿನ ಸಿದ್ದತೆಯೊಂದಿಗೆ ಗಮನ ಸೆಳೆದು ಅಂತಿಮವಾಗಿ ಭರ್ಜರಿ ಬಹುಮತವನ್ನು ಗಳಿಸಿದ ಕಾಂಗ್ರೆಸ್‌ ಇದೀಗ 2024ರ ಲೋಕಸಭಾ ಚುನಾವಣೆಗೂ (Parliament Elections 2024) ಅದೇ ರೀತಿಯ ಕಾರ್ಯತಂತ್ರವನ್ನು (Congress Politics) ರೂಪಿಸುವಂತೆ ಕಂಡುಬರುತ್ತಿದೆ. ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೂ (Lokasabha Constituencies) ವೀಕ್ಷಕರನ್ನು ನೇಮಿಸುವ (Observers appointed) ಮೂಲಕ ಅದು ಮೊದಲ ಹೆಜ್ಜೆ ಇಟ್ಟು ಅಧಿಕೃತವಾಗಿ ಎಂಟ್ರಿ ಪಡೆದುಕೊಂಡಿದೆ.

ಇತ್ತ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು (BJP-JDS Alliance) ಅಧಿಕೃತವಾಗಿ ಮೈತ್ರಿ ಮಾಡಿಕೊಂಡು ಇನ್ನು ಸೀಟು ಹಂಚಿಕೆಯ ಸಿದ್ಧತೆಗೆ ತೊಡಗಲು ಅಣಿಯಾಗುತ್ತಿದ್ದಂತೆಯೇ ಕಾಂಗ್ರೆಸ್‌ ತನ್ನ ದಾಳ ಉರುಳಿಸಿದೆ. ಕಳೆದ ಬಾರಿ ಕೇವಲ ಒಂದೇ ಒಂದು ಸ್ಥಾನ ಗೆಲ್ಲುವಲ್ಲಿ ಸಫಲವಾಗಿದ್ದ (ಬೆಂಗಳೂರು ಗ್ರಾಮಾಂತರ) ಕಾಂಗ್ರೆಸ್‌ ಈ ಬಾರಿ ಟಾರ್ಗೆಟ್‌ 20ಯನ್ನು ಇಟ್ಟುಕೊಂಡಿದೆ. ಕಳೆದ ಬಾರಿ ಬಿಜೆಪಿ 25, ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ ಒಂದು ಹಾಗೂ ಪಕ್ಷೇತರರಾಗಿ ಸುಮಲತಾ ಗೆದ್ದಿದ್ದರು. ಈ ಬಾರಿ ಸುಮಲತಾ ಅವರು ಬಿಜೆಪಿಯ ಸಹಸದಸ್ಯೆಯಾಗಿದ್ದಾರೆ. ಈ ಬಾರಿ ರಾಜ್ಯದ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲುವುದು ಬಿಜೆಪಿ ರಣತಂತ್ರ. ಎರಡೂ ಪಾಳಯಗಳು ಬಿಗಿಯಾದ ಹೋರಾಟಕ್ಕೆ ಅಣಿಯಾಗುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್‌ ವೀಕ್ಷಕರ ನೇಮಕದ ಮೂಲಕ ಮೊದಲ ಬಾಣ ಬಿಟ್ಟಿದೆ.

ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‌ ಅವರು ಈ ಸುತ್ತೋಲೆಯನ್ನು ಹೊರಡಿಸಿದ್ದು, ತಕ್ಷಣದಿಂದ ಕಾರ್ಯಾಚರಣೆ ಶುರು ಮಾಡುವಂತೆ ಸೂಚಿಸಿದ್ದಾರೆ.

ಯಾವ ಕ್ಷೇತ್ರಕ್ಕೆ ಯಾರು ವೀಕ್ಷಕರು?

1.ಬಾಗಲಕೋಟೆ: ಪ್ರಿಯಾಂಕ ಖರ್ಗೆ
2.ಬೆಂಗಳೂರು ಸೆಂಟ್ರಲ್‌: ಎನ್‌ಎಸ್‌ ಬೋಸರಾಜು
3.ಬೆಂಗಳೂರು ಉತ್ತರ: ಡಾ. ಜಿ. ಪರಮೇಶ್ವರ್‌
4.ಬೆಂಗಳೂರು ಗ್ರಾಮಾಂತರ: ಕೆ. ವೆಂಕಟೇಶ್‌
5.ಬೆಂಗಳೂರು ದಕ್ಷಿಣ : ಡಾ. ಶರಣ್‌ ಪ್ರಕಾಶ್‌ ಪಾಟೀಲ್‌
6. ಬೆಳಗಾವಿ: ಶಿವರಾಜ್‌ ಎಂ. ತಂಗಡಗಿ
7. ಗುಲ್ಬರ್ಗ: ಬಿ. ನಾಗೇಂದ್ರ
8. ಬೀದರ್‌: ಸಂತೋಷ್‌ ಎಸ್‌. ಲಾಡ್‌
9. ವಿಜಯಪುರ: ಸತೀಶ್‌ ಜಾರಕಿಹೊಳಿ
10. ಚಾಮರಾಜ ನಗರ: ದಿನೇಶ್‌ ಗುಂಡೂರಾವ್
11.‌ ಚಿಕ್ಕಬಳ್ಳಾಪುರ: ಜಮೀರ್‌ ಅಹಮದ್‌ ಖಾನ್‌
12. ಚಿಕ್ಕೋಡಿ: ಡಿ. ಸುಧಾಕರ್‌
13. ಚಿತ್ರದುರ್ಗ: ಡಾ.ಎಚ್‌.ಸಿ. ಮಹದೇವಪ್ಪ
14. ದಕ್ಷಿಣ ಕನ್ನಡ: ಮಧು ಬಂಗಾರಪ್ಪ
15. ದಾವಣಗೆರೆ: ಈಶ್ವರ ಖಂಡ್ರೆ
16. ಧಾರವಾಡ: ಲಕ್ಷ್ಮೀ ಹೆಬ್ಬಾಳ್ಕರ್‌
17. ಬಳ್ಳಾರಿ: ಶಿವಾನಂದ ಪಾಟೀಲ್‌
18. ಹಾಸನ: ಎನ್‌. ಚೆಲುವರಾಯ ಸ್ವಾಮಿ
19. ಹಾವೇರಿ: ಎಸ್‌.ಎಸ್‌. ಮಲ್ಲಿಕಾರ್ಜುನ
20. ಕೋಲಾರ: ರಾಮಲಿಂಗಾ ರೆಡ್ಡಿ
21. ಕೊಪ್ಪಳ: ಆರ್‌.ಬಿ. ತಿಮ್ಮಾಪುರ
22. ಮಂಡ್ಯ: ಡಾ.ಎಂ.ಸಿ. ಸುಧಾಕರ್‌
23. ಮೈಸೂರು: ಭೈರತಿ ಸುರೇಶ್‌
24. ರಾಯಚೂರು: ಕೆ.ಎಚ್‌. ಮುನಿಯಪ್ಪ
25. ಶಿವಮೊಗ್ಗ: ಕೆ.ಎನ್‌. ರಾಜಣ್ಣ
26. ತುಮಕೂರು: ಕೃಷ್ಣ ಬೈರೇಗೌಡ
27. ಉಡುಪಿ-ಚಿಕ್ಕಮಗಳೂರು: ಮಂಕಾಳ ವೈದ್ಯ
28. ಉತ್ತರ ಕನ್ನಡ ಎಚ್‌.ಕೆ. ಪಾಟೀಲ್‌

ವೀಕ್ಷಕರಿಗೆ ವಹಿಸಿರುವ ಕೆಲಸಗಳೇನು?

  1. ಕ್ಷೇತ್ರ ಪ್ರವಾಸ ಮಾಡಿ ಎಲ್ಲ ಹಂತದ ಮುಖಂಡರ ಜತೆ ಚರ್ಚೆ ಮಾಡಬೇಕು. ಸಭೆಗಳನ್ನು ಆಯೋಜಿಸಿ ಅಭಿಪ್ರಾಯ ಕೇಳಬೇಕು.
  2. ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕು ಸಮಗ್ರ ವರದಿಯನು ನೀಡಬೇಕು.
  3. ಕ್ಷೇತ್ರದಲ್ಲಿ ಪಕ್ಷದ ಸ್ಥಿತಿಗತಿ ಹೇಗಿದೆ? ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಇರಬಹುದು?
  4. ಯಾರೆಲ್ಲ ಅಭ್ಯರ್ಥಿಗಳಾಗಲು ಸಿದ್ಧತೆ ನಡೆಸಿದ್ದಾರೆ? ಯಾರ ಬಲ ಎಷ್ಟು? ಯಾರ ದೌರ್ಬಲ್ಯ ಏನು?
  5. ಕ್ಷೇತ್ರದಲ್ಲಿ ಯುವ ಅಭ್ಯರ್ಥಿಗಳಿದ್ದಾರಾ? ಪಕ್ಷಕ್ಕಾಗಿ ದುಡಿದವರು ಇದ್ದಾರಾ? ಎಲೆಮರೆಯ ಕಾಯಿಯಂತಿರುವ ಸಾಧಕರು ಇದ್ದಾರಾ?
  6. ಎಲ್ಲ ವಿಚಾರಗಳನ್ನು ಒಳಗೊಂಡ ವರದಿಯನ್ನು ವೀಕ್ಷಕರು ನೀಡಬೇಕು.

ಡಿ.ಕೆ. ಶಿವಕುಮಾರ್‌ ಅವರು ಬಿಡುಗಡೆ ಮಾಡಿರುವ ವೀಕ್ಷಕರ ಪಟ್ಟಿಯಲ್ಲಿರುವ ವಿಶೇಷವೇನೆಂದರೆ ಯಾರಿಗೂ ಅವರ ಜಿಲ್ಲೆ ಯಾ ಕ್ಷೇತ್ರಕ್ಕೆ ಸಂಬಂಧಿಸಿ ಕ್ಷೇತ್ರವನ್ನು ನೀಡಿಲ್ಲ. ಉತ್ತರ ಕರ್ನಾಟಕದವರಿಗೆ ದಕ್ಷಿಣ ಕರ್ನಾಟಕ, ದಕ್ಷಿಣದವರಿಗೆ ಮಧ್ಯ, ಉತ್ತರ ಕರ್ನಾಟಕ.. ಹೀಗೆ ನಿಗದಿ ಮಾಡಲಾಗಿದೆ. ಯಾರೂ ಯಾವುದೇ ವಿಚಾರಗಳಿಂದಲೂ ಪ್ರಭಾವಿತರಾಗದೆ ಯಥಾಸ್ಥಿತಿ ವರದಿ ನೀಡಬೇಕು ಎನ್ನುವ ಆಶಯದಿಂದ ಈ ರೀತಿ ಮಾಡಲಾಗಿದೆ ಎನ್ನಲಾಗಿದೆ.

Exit mobile version