Site icon Vistara News

Janatha Darshan : ಜನತಾ ದರ್ಶನಕ್ಕೆ ಹೋಗಲು ಆಗುತ್ತಿಲ್ಲವೇ? ಈ ನಂಬರ್‌ಗೆ ಕರೆ ಮಾಡಿ ಸಿಎಂಗೆ ದೂರು ನೀಡಿ!

CM Janatha Darshan

ಬೆಂಗಳೂರು: ಇಂದು (ಗುರುವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು “ನನ್ನ ಜನ ನನ್ನ ಅಭಿಮಾನ” ಎಂಬ ಶೀರ್ಷಿಕೆ ಅಡಿ ಎರಡನೇ ಜನತಾ ದರ್ಶನ (Janatha Darshan) ಕಾರ್ಯಕ್ರಮಕ್ಕೆ ಸೋಮವಾರ (ನ. 27) ಚಾಲನೆ ನೀಡಿದ್ದಾರೆ. ಇದಕ್ಕೆ ರಾಜ್ಯದ ಮೂಲ ಮೂಲೆಯಿಂದ ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ತಂದಿದ್ದಾರೆ. ಈ ಬಾರಿ ವಿಧಾನಸೌಧದ ಮುಂಭಾಗದಲ್ಲಿ ಭರ್ಜರಿ ಸಿದ್ಧತೆ ಆಗಿದೆ. ಆದರೆ, ಅನಿವಾರ್ಯ ಕಾರಣಗಳಿಂದ ಈ ಜನಸ್ಪಂದನ ಕಾರ್ಯಕ್ರಮಕ್ಕೆ ಬರಲು ಕೆಲವರಿಗೆ ಆಗಿರುವುದಿಲ್ಲ. ಈಗ ಅಂಥವರು ಜನತಾ ದರ್ಶನಕ್ಕೆ ಹೋಗಿ ಅಹವಾಲು ಸಲ್ಲಿಸಬೇಕು ಎಂದೇನಿಲ್ಲ. ನೀವು ಕುಳಿತಲ್ಲಿಯೇ ದೂರು ದಾಖಲು ಮಾಡಬಹುದು. ಅದಕ್ಕೆ ಜಸ್ಟ್‌ ಇದೊಂದು ನಂಬರ್‌ಗೆ ಕರೆ ಮಾಡಿದರೆ ಸಾಕು ಜನತಾ ದರ್ಶನ ಕೆಟಗರಿ ಅಡಿ ದೂರು ದಾಖಲಾಗುತ್ತದೆ.

1902 ಸಹಾಯವಾಣಿಯನ್ನು ರಾಜ್ಯ ಸರ್ಕಾರ ಈಗಾಗಲೇ ತೆರೆದಿದೆ. ಜನತಾ ದರ್ಶನಕ್ಕೆ ದೂರದ ಊರಿನಿಂದ ಹೋಗಲು ಆಗದವರು, ತೀವ್ರ ಸಮಸ್ಯೆ ಎದುರಿಸುತ್ತಿರುವವರು ಯಾರಾದರೂ ಇದ್ದರೆ ಸಿಎಂ ಗಮನಕ್ಕೆ ತರುವ ಸಂಬಂಧ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸಾಕು. ಅಲ್ಲಿ ನಿಮ್ಮ ಸಮಸ್ಯೆಗಳನ್ನು ಹೇಳಬೇಕು. ಅವರು ನಿಮ್ಮ ಅಹವಾಲುಗಳನ್ನು ಆಧರಿಸಿ ಅದನ್ನು ಜನತಾ ದರ್ಶನ ಕೆಟಗರಿ ಅಡಿ ದೂರು ದಾಖಲು ಮಾಡಿಕೊಳ್ಳುತ್ತಾರೆ.

ಹೀಗೆ ದೂರು ದಾಖಲು ಮಾಡುವಾಗ ನಿಮ್ಮ ಸಮಸ್ಯೆ, ವಿಳಾಸ, ಮೊಬೈಲ್‌ ಸಂಖ್ಯೆಯನ್ನು ಪಡೆದು ಅದರಲ್ಲಿ ನಮೂದು ಮಾಡಲಾಗುತ್ತದೆ. ಈ ದೂರು ಸಿಎಂ ಜನತಾ ದರ್ಶನ ಕೆಟಗರಿ ಮೂಲಕ ಸಂಬಂಧಪಟ್ಟ ಇಲಾಖೆಗೆ ರವಾನೆ ಮಾಡಲಾಗುತ್ತದೆ. ಆದರೆ, ಮುಂದಿನ ಹಂತದ ಬಗ್ಗೆ ಸ್ಪಷ್ಟತೆಯನ್ನು ನೀಡಲಾಗಿಲ್ಲ.

ಮುಂದಿನ ಕ್ರಮ ಏನು?

ಒಂದು ವೇಳೆ 1092 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಾದರೆ ನಿಮಗೊಂದು ಐಡಿ ಸಂಖ್ಯೆಯನ್ನು ನೀಡಲಾಗುತ್ತದೆ. ನೀವು ದಾಖಲು ಮಾಡಲಾದ ದೂರು ಸಿಎಂ ಕಾರ್ಯಾಲಯಕ್ಕೆ ಹೋಗುತ್ತದೆ. ಅಲ್ಲಿಂದ ಮುಂದಿನ ಪ್ರಕ್ರಿಯೆ ಏನು? ನಿಮ್ಮ ದೂರಿನ ಸ್ಥಿತಿ-ಗತಿ ಏನಾಯಿತು ಎಂಬ ಬಗ್ಗೆ ತಿಳಿಯಬೇಕು ಎಂದಿದ್ದರೆ, ಜನಸ್ಪಂದನ ಪೋರ್ಟಲ್‌ ಅಥವಾ ಜನಸ್ಪಂದನ ಪಿಜಿಆರ್‌ಎಸ್‌ ಪೋರ್ಟಲ್‌ಗೆ ಭೇಟಿ ನೀಡಿ ಅಲ್ಲಿ “ಸಿಪಿಗ್ರಾಮ್ಸ್‌ ಕುಂದುಕೊರತೆ ಸ್ಥಿತಿಯನ್ನು ಪರಿಶೀಲಿಸಿ ಆಯ್ಕೆ ಮೇಲೆ ಕ್ಲಿಕ್‌ ಮಾಡಬೇಕು. ಬಳಿಕ ನಿಮ್ಮ ಸಿಪಿಗ್ರಾಮ್ಸ್‌ ಗ್ರೀವಿಯನ್ಸ್‌ ನಂಬರ್‌ (CPGRAMS Grievance Number) ಅಥವಾ ನಿಮ್ಮ ನೋಂದಾಯಿತ ಮೊಬೈಲ್‌ ಸಂಖ್ಯೆಯನ್ನು ನಮೂದು ಮಾಡಿದರೆ ಅಲ್ಲಿ ಅಹವಾಲು ಯಾವ ಹಂತದಲ್ಲಿದೆ ಎಂಬುದನ್ನು ತಿಳಿಸುತ್ತದೆ. ಇಲ್ಲವೇ ನೇರವಾಗಿ 1902 ಸಂಖ್ಯೆಗೆ ಕರೆ ಮಾಡಿದರೆ ನಿಮಗೆ ಅಲ್ಲಿನ ಸಿಬ್ಬಂದಿ ಸಹ ಅಹವಾಲಿನ ಸ್ಟೇಟಸ್‌ ಬಗ್ಗೆ ತಿಳಿಸಿಕೊಡಲಿದ್ದಾರೆ.

ಪ್ರಕ್ರಿಯೆ ಹೇಗಿರಲಿದೆ?

ಸಾರ್ವಜನಿಕರಿಂದ ಮುದ್ದಾಂ/ಆನ್‌ಲೈನ್‌ನಲ್ಲಿ ಸ್ವೀಕೃತವಾಗುವ ಕುಂದುಕೊರತೆ/ಅಹವಾಲುಗಳನ್ನು ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯಲ್ಲಿ ದಾಖಲಿಸಿ, ಸ್ವೀಕೃತಿಯನ್ನು ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಸ್ವೀಕೃತಿ ಸಂಖ್ಯೆ ಬಳಸಿ ತಮ್ಮ ಕುಂದುಕೊರತೆ/ಅಹವಾಲಿನ ಸ್ಥಿತಿಗತಿಯನ್ನು ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಯಲ್ಲಿ ಅಥವಾ 1902 ಸಂಖ್ಯೆಗೆ ಕರೆಮಾಡಿ ತಿಳಿದುಕೊಳ್ಳಬಹುದು.

ಇದನ್ನೂ ಓದಿ: Black Paper: ಶ್ವೇತಪತ್ರಕ್ಕೆ ಬದಲಾಗಿ ‘ಕಪ್ಪುಪತ್ರ’ ಹೊರಡಿಸಿದ ಕಾಂಗ್ರೆಸ್;‌ ಏನಿದು?

ಎಪಿಐ ಮೂಲಕ ನಿರ್ವಹಣೆ

ಸ್ವೀಕರಿಸಲಾದ ಕುಂದುಕೊರತೆ/ಅಹವಾಲುಗಳನ್ನು ವಿಷಯದ ಆಧಾರದಲ್ಲಿ ಸಂಬಂಧಿಸಿದ ಇಲಾಖೆಗಳ/ಅಧೀನ ಸಂಸ್ಥೆಗಳ ಅಧಿಕಾರಿಗಳ ಲಾಗಿನ್‌ಗಳಿಗೆ ತಕ್ಷಣ ರವಾನಿಸಲಾಗುತ್ತದೆ. ಮುಖ್ಯಮಂತ್ರಿಗಳ ಜನತಾದರ್ಶನದಲ್ಲಿ ಸ್ವೀಕೃತವಾದ ಕುಂದುಕೊರತೆ/ಅಹವಾಲುಗಳನ್ನು ಸ್ವಯಂಚಾಲಿತವಾಗಿ ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳ ಇ-ಆಫೀಸ್‌ ಲಾಗಿನ್‌ಗೆ ಕಳುಹಿಸುವ ವ್ಯವಸ್ಥೆ ಅಳವಡಿಸಲಾಗಿದೆ. ಇ-ಆಫೀಸ್‌ನಲ್ಲಿ ಸದರಿ ಕಡತದ ಪ್ರತಿ ಹಂತದ ಚಲನೆಯನ್ನು API ಮೂಲಕ ಏಕೀಕೃತ ಸಾರ್ವಜನಿಕ ಕುಂದುಕೊರತೆಗಳ ನಿವಾರಣಾ ವ್ಯವಸ್ಥೆಗೆ ಒದಗಿಸಲಾಗುತ್ತದೆ. ಸ್ವೀಕೃತವಾದ ಅಹವಾಲುಗಳ ಪ್ರಗತಿ ಪರಿಶೀಲಿಸಲು ಪ್ರತ್ಯೇಕ ಡ್ಯಾಶ್‌ಬೋರ್ಡ್‌ ಅಭಿವೃದ್ಧಿಪಡಿಸಲಾಗಿದೆ. ಈ ಡ್ಯಾಶ್‌ಬೋರ್ಡ್‌ನಲ್ಲಿ ಇಲಾಖಾ/ಜಿಲ್ಲಾವಾರು ಸ್ವೀಕೃತವಾದ ಕುಂದುಕೊರತೆ ಮತ್ತು ಅಹವಾಲುಗಳ ಸಂಖ್ಯೆ, ವಿಲೇ ಮಾಡಲಾದ ಮತ್ತು ಬಾಕಿ ಉಳಿದಿರುವ ಕುಂದುಕೊರತೆ ಮತ್ತು ಅಹವಾಲುಗಳ ವಿವರ ಲಭ್ಯವಿದೆ.

Exit mobile version