Site icon Vistara News

Dinesh Gundurao : ಅನ್ನ ಹಳಸಿತ್ತು, ನಾಯಿ ಹಸಿದಿತ್ತು; JDS-BJP ಮೈತ್ರಿ ಗೇಲಿ ಮಾಡಿದ ದಿನೇಶ್‌ ಗುಂಡೂರಾವ್‌ಗೆ ಸಖತ್‌ ಕ್ಲಾಸ್

Dinesh Gundurao

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆಗೆ (Parliament Election 2024) ಸಂಬಂಧಿಸಿ ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಮೈತ್ರಿ (BJP-JDS Alliance) ಮಾಡಿಕೊಳ್ಳಲಿವೆ ಎಂಬ ಸುದ್ದಿಗೆ ಸಿಎಂ ಸಿದ್ದರಾಮಯ್ಯ (CM Siddaramaiah), ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ಸೇರಿದಂತೆ ಇತರ ಕಾಂಗ್ರೆಸ್‌ ನಾಯಕರು ಲಘುವಾದ ಪ್ರತಿಕ್ರಿಯೆ ನೀಡಿದರೆ ಆರೋಗ್ಯ ಸಚಿವರಾಗಿರುವ ದಿನೇಶ್‌ ಗುಂಡೂರಾವ್‌ (Dinesh Gundurao) ಸೂಜಿ ಚಿಕಿತ್ಸೆ ನೀಡಿದ್ದಾರೆ.

ಅವರು ಈ ಮೈತ್ರಿಯನ್ನು ಹಳಸಿದ ಅನ್ನ ಮತ್ತು ಹಸಿದ ನಾಯಿಗಳಿಗೆ ಹೋಲಿಸುವ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದರೆ ನೆಟ್ಟಿಗರು ಕೂಡಾ ಹಿಂದೆ ಬಿದ್ದಿಲ್ಲ ದಿನೇಶ್‌ ಗುಂಡೂ ರಾವ್‌ ಅವರಿಗೆ ಹಿಂದಿನ ಕಥೆ ನೆನಪಿಸಿ ಸರ್ಜರಿ ಮಾಡಿದ್ದಾರೆ.

ದಿನೇಶ್‌ ಗುಂಡೂ ರಾವ್‌ ಹೇಳಿದ್ದೇನು?

ದಿನೇಶ್‌ ಗುಂಡೂ ರಾವ್‌ ಅವರು ಅವಳಿ ಟ್ವೀಟ್‌ಗಳ ಮೂಲಕ ಮೈತ್ರಿಯನ್ನು ಗೇಲಿ ಮಾಡಿದ್ದಾರೆ.

  1. ಕೋಮುವಾದಿ BJPಯೊಂದಿಗೆ ಜಾತ್ಯಾತೀತ ಲೇಬಲ್ ಅಂಟಿಸಿಕೊಂಡಿರುವ JDS ಮೈತ್ರಿಗೆ ಮುಂದಾಗಿದೆ. ಜಾತ್ಯಾತೀತ ತತ್ವ ಎಂಬುದು JDS ಪಕ್ಷದ ಬೂಟಾಟಿಕೆಯಷ್ಟೆ. ಯಾವುದೇ ಸೈದಾಂತಿಕ ಬದ್ಧತೆಯಿಲ್ಲದ ಪಕ್ಷವೆಂದರೆ ಅದು JDS ಮಾತ್ರ. ಜಾತ್ಯಾತೀತ ಸಿದ್ದಾಂತಕ್ಕೆ ತಿಲಾಂಜಲಿ ಇಟ್ಟು ಕೋಮುವಾದಿ ಪಕ್ಷದ ಜೊತೆ ಕೈ ಜೋಡಿಸುತ್ತಿರುವ JDSಗೆ ಯಾವ ಸಿದ್ಧಾಂತವಿದೆ?
  2. ರಾಜ್ಯದಲ್ಲಿ BJP-JDS ಮೈತ್ರಿ, ಎರಡೂ ಪಕ್ಷದವರಿಗೂ ಅನ್ನ ಹಳಸಿತ್ತು.,ನಾಯಿ ಹಸಿದಿತ್ತು ಎಂಬಂತಾಗಿದೆ. ರಾಜ್ಯದಲ್ಲಿ BJP ದಿಕ್ಕಿಲ್ಲದ ದೋಣಿ ಹಾಗೂ JDS ಹಳಿಯಿಲ್ಲದ ರೈಲಿನಂತಾಗಿದೆ. ಇಂತಹ ಅಸಹಾಯಕ ಪರಿಸ್ಥಿತಿಯಲ್ಲಿರುವ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿವೆ.

ದಿನೇಶ್‌ ಗುಂಡೂರಾವ್‌ ಅವರ ಈ ಗೇಲಿಗೆ, ಚುಚ್ಚು ಮಾತಿಗೆ ತೀವ್ರವಾದ ಪ್ರತಿಕ್ರಿಯೆ ನೆಟ್ಟಿಗರಿಂದ ಬಂದಿದೆ. ಅವರು ಹಿಂದೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದನ್ನು ನೆನಪಿಸಿದ್ದಾರೆ.

ಇದನ್ನೂ ಓದಿ : BJP JDS Alliance : ಬಿಜೆಪಿ – ಜೆಡಿಎಸ್‌ ಮೈತ್ರಿ ಹಿಂದಿದೆ ಜಾತಿ ಲೆಕ್ಕಾಚಾರ; 28 ಕ್ಷೇತ್ರಗಳ ಜಾತಿ ಪ್ರಾಬಲ್ಯ ಏನು?

1. ಶ್ರೀಧರ ಅಯ್ಯಂಗಾರ್‌ ಹೇಳಿದ್ದು: ಹಿಂದೆ ದೇವೇಗೌಡರ ಮನೆ ಬಾಗಿಲಿಗೆ ಹೋಗಿ ಕೈ ಕಟ್ಟಿ ನಿಂತು ಕೂಂಡಿದ್ದು ಮರೆತು ಹೊಯ್ತು ಗುಂಡಾ, ಅಗ ಎಲ್ಲಿತ್ತು ಕಾಂಗ್ರೆಸ್ಸಿನ ಆತ್ಮಭಿಮಾನ?

2. ರಾಜಣ್ಣ ಕೋಲಾರ: ಹಾಗಾದರೆ ನೀವು ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಮೈತ್ರಿ ಮಾಡಿದ ಬಗ್ಗೆ ಮಾತಾಡಿ! ಸಚಿವರಾಗಿ ಮೂರ್ಖ ಹೇಳಿಕೆ ಕೊಡಬೇಡಿ ದಯವಿಟ್ಟು! ಭ್ರಷ್ಟಾಚಾರ ರಹಿತ ಸರ್ಕಾರ ಕೊಡುತ್ತೇವೆ ಎಂದು ಸುಳ್ಳು ಹೇಳಿ ಬಂದಿಲ್ಲವೇ ನೀವು ಅಧಿಕಾರಕ್ಕೆ!?

3. ರವಿ ಕುಮಾರ ಎಸ್‌ಪಿ: ಮತ್ ತಾವು ಜೆಡಿಎಸ್ ಮುಂದೆ ಹೋಗಿ ಕೈ ಕಟ್ಟಿಕೊಂಡ್ ಸಿಎಂ ಮಾಡಿ ಮೈತ್ರಿ ಮಾಡಿಕೊಂಡ್ರಲ್ಲ ಅದು ಏನೂ? ನೀವು ಮೈತ್ರಿ ಮಾಡಿಕೊಂಡ್ರೆ ಸರಿ ಬಿಜೆಪಿ ಮಾಡಿಕೊಂಡ್ರೆ ತಪ್ಪು? ರಾಜಕೀಯ ಲಾಭಕ್ಕಾಗಿ ಮೈತ್ರಿ ಸಾಮಾನ್ಯ.ನೆಲೆಯಿಲ್ಲ ತಾವು ಎಲ್ಲಾ ಪಕ್ಷಗಳನ್ನ ಸೇರಿಸಿ ಮೈತ್ರಿ ಮಾಡಿಲ್ಲವೆ,? ನಿಮ್ದು ಯಾವ ಸಿದ್ದಾಂತ

Exit mobile version